»   » ಟೈಟಾನಿಕ್ ಚೆಲುವೆ ಕೇಟ್ ಜೊತೆ ಐಶ್ವರ್ಯ ರೈ

ಟೈಟಾನಿಕ್ ಚೆಲುವೆ ಕೇಟ್ ಜೊತೆ ಐಶ್ವರ್ಯ ರೈ

Posted By:
Subscribe to Filmibeat Kannada

ಮಣಿರತ್ನಂ 'ರಾವಣ್' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗಲಗಲ ಎಂದು ಸದ್ದು ಮಾಡದ ಕಾರಣ ಐಶ್ವರ್ಯ ರೈ ಬಚ್ಚನ್ ಕೊಂಚ ಕ್ಷೋಭೆಗೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಅನಿರೀಕ್ಷಿತ ಘಟನೆಯೊಂದು ಆಕೆಯ ಮುಖದಲ್ಲಿ ಮಂದಹಾಸ ಮೂಡಿದೆ. ಟೈಟಾನಿಕ್ ಚೆಲುವೆ ಕೇಟ್ ವಿನ್ಸ್ ಲೆಟ್ ಜೊತೆ ಐಶ್ವರ್ಯ ರೈ ತೆರೆ ಹಂಚಿಕೊಳ್ಳಲಿದ್ದಾರೆ. ಇಬ್ಬರೂ ಒಟ್ಟಿಗೆ ಜಾಹೀರಾತೊಂದರಲ್ಲಿ ಕಾಣಿಸಲಿದ್ದಾರೆ.

ಐಶ್ವರ್ಯ ರೈ ಅವರ ಆಪ್ತ ಮೂಲಗಳ ಪ್ರಕಾರ, ಕೇಟ್ ವಿನ್ಸ್ ಲೆಟ್ ಜೊತೆ ಜಾಹೀರಾತಿನಲ್ಲಿ ನಟಿಸುತ್ತಿರುವುದಕ್ಕ್ಕೆ ಐಶು ತುಂಬಾನೆ ಖುಷಿಯಾಗಿದ್ದಾರೆ. ಮುಂದಿನ ವಾರ ಐಶ್ವರ್ಯ ರೈ ಇಟಲಿಗೆ ಹಾರಲಿದ್ದಾರೆ. ಜಾಹೀರಾತಿನ ಚಿತ್ರೀಕರಣ ಎರಡು ದಿನಗಳ ಕಾಲ ನಡೆಯಲಿದೆ ಎಂದು ವಿವರಗಳನ್ನು ನೀಡಿದ್ದಾರೆ.

ಕೇಟ್ ವಿನ್ಸ್ ಲೆಟ್ ರ ಅತಿದೊಡ್ಡ ಅಭಿಮಾನಿ ಐಶ್ವರ್ಯ ರೈ. ಆಕೆಯ ಎಷ್ಟೋ ಚಿತ್ರಗಳನ್ನು ನೋಡುತ್ತಾ ಬೆಳೆದವರು ಐಶ್ವರ್ಯ ರೈ. ಕೇಟ್ ರ ಚಿತ್ರಗಳಿಂದ ಪ್ರಭಾವಕ್ಕೊಳಗಾದವರಲ್ಲಿ ಐಶು ಸಹ ಒಬ್ಬರು. ಈ ಹಿಂದೆ ಹಾಲಿವುಡ್ ನ ಜಿಯಾನ್ ರೆನೊ, ಸ್ಟೀವ್ ಮಾರ್ಟಿನ್ ಹಾಗೂ ಇಮಿಲಿ ಮಾರ್ಟೈಮರ್ ಅವರೊಂದಿಗೆ ಐಶು ಅಭಿನಯಿಸಿದ್ದಾರೆ. ಕೇಟ್ ರೊಂದಿಗೆ ತೆರೆಯ ಮೇಲೆ ಕಾಣಿಸಬೇಕು ಎಂಬ ಐಶೂರ ಬಹುಕಾಲದ ಕನಸು ಇದೀಗ ನನಸಾಗುತ್ತಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada