»   »  ನಲವತ್ತೇಳರ ಹರಯದಲ್ಲಿ ಬಾಲಿವುಡ್ ನಟಿ ಶ್ರೀದೇವಿ!

ನಲವತ್ತೇಳರ ಹರಯದಲ್ಲಿ ಬಾಲಿವುಡ್ ನಟಿ ಶ್ರೀದೇವಿ!

Subscribe to Filmibeat Kannada

ಬಾಲಿವುಡ್ ನ ಚಿರ ಸುಂದರಿ ಶ್ರೀದೇವಿ ಇಂದು (ಆ.13) 47ನೇ ವರ್ಷಕ್ಕೆ ಅಡಿಯಿಟ್ಟರು. ನಿರ್ದೇಶಕ ಬೋನಿ ಕಪೂರ್ ಅವರನ್ನು ಮದುವೆಯಾವುದುದಕ್ಕೂ ಮುನ್ನ ಬಾಲಿವುಡ್ ನಲ್ಲಿ ತನ್ನದೇ ಆದಂತಹ ನಟನೆಯ ಮೂಲಕ ಚಿತ್ರ ಪ್ರೇಮಿಗಳ ಹೃದಯ ಸೂರೆಗೊಂಡಿದ್ದರು. ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಶ್ರೀದೇವಿ ಉತ್ತುಂಗದಲ್ಲಿದ್ದ ಕಾಲ. ಚಾಂದನಿ, ಮಿ ಇಂಡಿಯಾ ಮತ್ತು ಛಾಲ್ ಬಾಜ್ ಚಿತ್ರಗಳಿಂದ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದರು.

ತಮಿಳುನಾಡಿನಲ್ಲಿ ಹುಟ್ಟಿದ ಶ್ರೀದೇವಿ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಳೆಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ. ಬೋನಿ ಕಪೂರ್ ಮತ್ತು ಶ್ರೀದೇವಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಝಾನ್ವಿ ಮತ್ತು ಖುಷಿ. ಇಂದು ತಮ್ಮ ಕುಟುಂಬದವರೊಂದಿಗೆ ಶ್ರೀದೇವಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.

ಶ್ರೀದೇವಿ ತಮ್ಮ ಮಗಳು ಝಾನ್ವಿಯನ್ನು ಚಿತ್ರೋದ್ಯಮಕ್ಕೆ ಪರಿಚಯಿಸುತ್ತಿದ್ದಾರೆ. ಮೊದಲು ದಕ್ಷಿಣ ಭಾರತದ ಚಿತ್ರರಂಗಕ್ಕೆ ಅಡಿಯಿಟ್ಟ ಶ್ರೀದೇವಿ ನಂತರ ಬಾಲಿವುಡ್ ನಲ್ಲಿ ಮಿಂಚಿದವರು. ಅಮ್ಮನ ಹಾದಿಯಲ್ಲೇ ಮಗಳು ಝಾನ್ವಿ ಸಹ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. ನೋಡಲು ಥೇಟ್ ಅಮ್ಮನಂತೆಯೇ ಇದ್ದಾರೆ!

ತೆಲುಗು ಚಿತ್ರರಂಗದ ಖ್ಯಾತ ನಟ ನಾಗಾರ್ಜುನ ಮಗ ಅಖಿಲ್ ನೊಂದಿಗೆ ಝಾನ್ವಿ ಚಿತ್ರರಂಗಕ್ಕೆ ಅಡಿಯಿಡಲಿದ್ದಾರೆ. ಇನ್ನೂ ಬಾಲ ನಟಿಯಂತೆ ಕಾಣುವ ಝಾನ್ವಿಯನ್ನು ಬಾಲಿವುಡ್ ಗೆ ಕರೆತರಲು ಶ್ರೀದೇವಿಗೆ ಮನಸಿಲ್ಲ. ಝಾನ್ವಿಯನ್ನು ಬಾಲಿವುಡ್ ಗೆ ಪರಿಚರಿಯಿಸಲು ಸ್ವಲ್ಪ ಸಮಯ ಬೇಕಾಗುತ್ತದೆ ಎನ್ನುತ್ತಾರೆ ಅವರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada