»   » 'ನಾವು ನಿರ್ದೇಶಕರೊಂದಿಗೆ ಮಲಗುತ್ತೇವೆ'

'ನಾವು ನಿರ್ದೇಶಕರೊಂದಿಗೆ ಮಲಗುತ್ತೇವೆ'

Subscribe to Filmibeat Kannada

ನಟನೆಗೆ ಅವಕಾಶ ನೀಡಿದ್ದಕ್ಕೆ ಪ್ರತಿಯಾಗಿ ನಾನು ನಿರ್ದೇಶಕರೊಂದಿಗೆ ಮಲಗಿದ್ದು ನಿಜ" ಎಂದು ಅಭಿನವ ದ್ರೌಪದಿ ರೂಪಾ ಗಂಗೂಲಿ 'ಸಚ್ ಕಾ ಸಾಮ್ನಾ" ರಿಯಾಲಿಟಿ ಶೋದಲ್ಲಿ 'ಸತ್ಯ"ಪಾಲನೆ ಮಾಡಿದ್ದೀಗ ಹಳೆಯ ಕತೆ. ಅತ್ತ ಲಂಡನ್‌ನಲ್ಲಿ ಇನ್ನೊಂದು ನಾಟಕ ನಡೆದಿತ್ತು ; ಫ್ಯಾಷನ್ ಉದ್ಯಮದ ಘಟಾನುಘಟಿಗಳಿಗೆ ಸುಖ ನೀಡಲು ನಾನು ಅವರಿಂದ ಗಂಟೆಗೆ 23 ಸಾವಿರ ಡಾಲರ್ ಪಡೆಯುತ್ತಿದ್ದೆ ಎಂದು ಸೋಫೀ ಆಂಡರ್‌ಟನ್ ಎಂಬ ಹೆಸರಿನ ಸೂಪರ್ಮಾಡೆಲ್ ಹೇಳಿದ್ದಾಳೆ. ಸತ್ಯಕ್ಕೆ ಜಯವಾಗಲಿ !

ರೂಪಾ ಹೇಳಿದ ಸತ್ಯದಲ್ಲಿ ಯಾವುದೇ ಸುಳ್ಳಿಲ್ಲ ಎಂದು ಪಾಲಿಗ್ರಾಫ್ ಯಂತ್ರ ಕೂಡ ಹೇಳಿದೆ. ಹೀಗಾಗಿ ಆಕೆಯ ಮಾತನ್ನು ನಂಬದೇ ನಿರ್ವಾಹವಿಲ್ಲ. 'ನನ್ನ ಬಾಯ್‌ಫ್ರೆಂಡ್‌ನನ್ನು ಪ್ರೀತಿಸುತ್ತೇನೆ" ಎಂದು ಬಾಯ್ತಪ್ಪಿ ರೂಪಾ ಸುಳ್ಳು ಹೇಳಿದಾಗ ಯಂತ್ರ 'ಕುಂಯ್"ಎಂದಿತಂತೆ. ಇಷ್ಟಕ್ಕೇ ಆಕೆ ಬಂಪರ್ ಬಹುಮಾನಕಳೆದುಕೊಂಡದ್ದಕ್ಕೆ ನಾವು ವಿಷಾದ ಪಡೋಣ.ಅಷ್ಟಕ್ಕೂ 42ವರ್ಷದ ಆಕೆ, 31 ವರ್ಷದ ಹುಡುಗನನ್ನು ಹೃದಯದಿಂದಪ್ರೀತಿಸಬೇಕೆಂಬ ರೂಲ್ಸಾದರೂ ಎಲ್ಲಿದೆ?

ಹೀಗೆ ಸತ್ಯಗಳು ಹೊರಬಿದ್ದಾಗಲೆಲ್ಲ ಬಾಲಿವುಡ್ ಒಂದರೆಕ್ಷಣ ಬೆಚ್ಚುತ್ತದೆ. ಎರಡು ದಿನ ಅಷ್ಟೇ, ಮತ್ತೆ ಯಥಾಪ್ರಕಾರ ಬಾಲಿವುಡ್, ಹಾಲಿವುಡ್‌ಗಳ ಶ್ರೀಮಂತ ನಿರ್ದೇಶಕರು, ನಿರ್ಮಾಪಕರು ಹೊಸ ತಾರೆಯರನ್ನು ತಮ್ಮ ಮಂಚಕ್ಕೆ ಎಳೆದುಕೊಳ್ಳಲು ಬಲೆ ಹೆಣೆಯ ಲಾರಂಭಿಸುತ್ತಾರೆ. ಸೊಗಸಾದ ಪಾತ್ರಕ್ಕಾಗಿ ನಟಿಯರು ಮೈದಾನವಾಗುತ್ತಾರೆ.

“ಎರಡೇ ನಿಮಿಷದಲ್ಲಿ 'ಅದು" ಮುಗಿ ದಿತ್ತು. ಇಷ್ಟೇನಾ ! ಇಷ್ಟಕ್ಕೇ ಅಷ್ಟೊಂದು ಹಣ ಸಿಗುವಾಗ ಯಾಕೆ ಬಿಡಬೇಕು ?" ಎಂದು ಸೋಫಿ ಆಂಡರ್‌ಟನ್ ಮೊದಲ ಬಾರಿಯ ಅನುಭವದ ಬಳಿಕ ಅಂದುಕೊಂಡಳಂತೆ. ಇದು ನಮ್ಮ ಕೆಲವು ನಟಿಯರದಾದರೂ ಅನುಭವ ಇರಬಹುದೇನೋ. 'ಮಾದಕ ವಸ್ತುಗಳಿಗೆ ಹಣ ಸಾಕಾಗುತ್ತಿರಲಿಲ್ಲ. ಶ್ರೀಮಂತರಿಂದ ಹಣ ಪಡೆದು ಸುಖ ಕೊಡುತ್ತಿದ್ದೆ" ಎಂಬುದು ಆಕೆಯ ಮಾತು. ಈಕೆ ನಮ್ಮ ಮಧುರ್ ಭಂಡಾರ್ಕರನ 'ಫ್ಯಾಷನ್" ಫಿಲಂ ನೋಡಿರಲಿಕ್ಕಿಲ್ಲ !

ರೂಪಾಗೆ ಜ್ಞಾನೋದಯವಾದ ರೀತಿಯೂ ವಿಚಿತ್ರವಾಗಿದೆ. “ಪಾತ್ರ ಕೊಡಿಸಿದ್ದಕ್ಕೆ ಪ್ರತಿಯಾಗಿ ನಿರ್ದೇಶಕರ ಲೈಂಗಿಕ ವಾಂಛೆಗಳನ್ನು ತೀರಿಸಬೇಕಾಗಿತ್ತು. ಇದಲ್ಲದೇ ನಾನು ಬೇರೆ ಬೇರೆ ಶ್ರೀಮಂತರ ಜತೆ ಹೋಗುತ್ತಿದ್ದೆ. ನನ್ನ 'ಹಗಲಿನ ರೇಟ್" ಮತ್ತು 'ರಾತ್ರಿಯ ರೇಟ್" ಬೇರೆ ಬೇರೆಯಾಗಿದ್ದವು. ಒಮ್ಮೆ ಯಾರೋ '50 ಸಾವಿರ ರೂಪಾಯಿ ಕೊಡ್ತೀನಿ ಬರ್ತೀಯಾ ?" ಎಂದು ಕೇಳಿ ಫೋನ್ ಮಾಡಿದರು. ನನ್ನ ಬಗ್ಗೆ ನನಗೇ ಜುಗುಪ್ಸೆಯಾಯಿತು.ಅಂದಿನಿಂದಲೇ ಮುಂಬಯಿ ಬಿಟ್ಟು ಕೋಲ್ಕೊತಾದಲ್ಲಿ ವಾಸಿಸತೊಡಗಿದೆ."

ಗಂಡನಿಂದ ಡೈವೋರ್ಸ್ ಪಡೆದ, ಧೂಮಪಾನದ ವ್ಯಸನಿಯಾದ, ಗೆಳೆಯ ದಿವ್ಯೇಂದುವನ್ನು ಮದುವೆಯಾಗಲು ಬಹುಶಃ ಸಾಧ್ಯವಾಗದು ಎಂದು ಸಂಕಟಪಡುವ ರೂಪಾ ಗಂಗೂಲಿಯಿಂದ ಬಾಲಿವುಡ್ ಏನಾದರೂ ಕಲಿಯಬಹುದೆ ? ಬಹುಶಃ ಇಲ್ಲ, ಯಾಕೆಂದರೆ ಅದರ ಮಗ್ಗುಲಲ್ಲಿ ಎಷ್ಟೊಂದು ಹೊಸ ಹೊಸ ಸೆಕ್ಸಿ ಹುಡುಗಿಯರು !

ಬಾ ನನ್ನ ಮಂಚವೇರು
ಬಾಲಿವುಡ್‌ಗೆ ಈ ಥರದ 'ಸತ್ಯಸ್ಫೋಟ"ಗಳು ಹೊಸತಲ್ಲ. 2008ರಲ್ಲಿ ನಿರ್ದೇಶಕ ಮಧುರ್ಭಂಡಾರ್ಕರ್, ಪಾತ್ರ ಕೊಡಿಸುವುದಾಗಿ ಬೆಣ್ಣೆ ಹಚ್ಚಿ ನನ್ನನ್ನು16 ಬಾರಿ ರೇಪ್ ಮಾಡಿದ್ದ ಎಂದು ಪ್ರೀತಿ ಜೈನ್ ಎಂಬ ಎರಡನೇ ದರ್ಜೆಯ ನಟಿ ಆರೋಪಿಸಿದ್ದಳು. ಈ ಕೇಸ್‌ನಲ್ಲಿ ಮಧುರ್ ಖುಲಾಸೆಯಾಗಿದ್ದ.

ಖಳನಟ ಶಕ್ತಿಕಪೂರ್ ಕುಡಿದು ಚಿತ್ತಾಗಿ ಬೆತ್ತಲಾದದ್ದೂ ನಿಮಗೆ ನೆನಪಿರಬಹುದು. ಅವಕಾಶ ಕೊಡಿಸಬೇಕಾದರೆ ಬಾ ನನ್ನ ಮಂಚವೇರು, ಬಾಲಿವುಡ್‌ನ ಈಗಿನ ಖ್ಯಾತನಾಮ ನಟಿಯರೆಲ್ಲ ಹೀಗೆ ಮಲಗಿ ಎದ್ದವರೇ ಎಂದು ಯುವನಟಿಯ ಮುಂದೆ ಈತ ತೊದಲಿದ್ದನ್ನು ಇಂಡಿಯಾ ಟಿವಿ ಯವರು ಗುಪ್ತ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡು ಜಗಜ್ಜಾಹೀರುಪಡಿಸಿದ್ದರು. ಇದರಲ್ಲಿ
ಆತ ಪ್ರೀತಿ ಜಿಂಟಾ, ರಾಣಿ ಮುಖರ್ಜಿಯ ಹೆಸರಿಗೂ ಕೆಸರು ಬಳಿದಿದ್ದ.

ಅಮನ್ ವರ್ಮಾ ಎಂಬ ನಟ ಕೂಡ ಹೀಗೇ ಸಿಕ್ಕಿಬಿದ್ದಿದ್ದ. ಈ ವಿಡಿಯೋಗಳು ಕಲ್ಪಿತ ಎಂದು ಶಕ್ತಿ, ಅಮನ್ ಇಬ್ಬರೂ ವಾದಿಸಿದ್ದರು. 15 ವರ್ಷದ ಕೆಲಸದಾಕೆಗೆ ಸಿನೆಮಾದಲ್ಲಿ ಪಾತ್ರ ಕೊಡಿಸುವುದಾಗಿ ಒಲಿಸಿ ನಟ ಆದಿತ್ಯ ಪಂಚೋಲಿ ಆಕೆಯನ್ನು ಬೆಡ್‌ರೂಮಿಗೆಳೆದುಕೊಂಡಿದ್ದ. ಇದು ಬಹಿರಂಗವಾದಾಗ ಗರ್ಲ್ ಫ್ರೆಂಡ್ ಪೂಜಾ ಬೇಡಿ ಆತನಿಂದ ದೂರವಾಗಿದ್ದಳು.

ಗಂಡಸರಿಗೂ ಕಾಟ
ಬಾಲಿವುಡ್‌ನ 'ಪಾತ್ರಕ್ಕಾಗಿ ಮಂಚಕ್ಕೆ"ಳೆಯುವ ಈ ಚಾಳಿ ತರುಣಿಯರಿಗೆ ಸೀಮಿತವಲ್ಲ. ಸಿನಿವಿಮರ್ಶಕ, ಪತ್ರಕರ್ತ ಸುಭಾಷ್ ಕೆ.ಝಾ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ ಎಂದು ಹಿನ್ನೆಲೆ ಗಾಯಕ ಸೋನು ನಿಗಮ್ ಒಮ್ಮೆ ಆರೋಪಿಸಿದ್ದರು. ಅದನ್ನು ನಿರಾಕರಿಸಿದ್ದಕ್ಕೇ ನನ್ನ ವಿರುದ್ಧ ಟೀಕೆಗಳನ್ನು ಝಾ ಬರೆಯುತ್ತಿದ್ದಾರೆ ಎಂದೂ ಹೇಳಿದ್ದರು. 'ಕ್ಯಾಸ್ಟಿಂಗ್ ಕೌಚ್" ದಂಡನೀಯ ಅಪರಾಧ ಎಂದೇನಾದರೂ ಕಾನೂನಿದ್ದರೆ, ಬಾಲಿವುಡ್‌ನ ಶೇ.90ಮಂದಿ ಜೈಲಿನಲ್ಲಿರುತ್ತಿದ್ದರು ಎಂದು ಯುವನಟನೊಬ್ಬ ಹೇಳಿದ್ದುದನ್ನೂ ಇಲ್ಲಿ ನೆನೆಯಬಹುದು.

(ಸ್ನೇಹಸೇತು: ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada