»   » ನೀತು ನೀ ಬೆತ್ತಲೆಯೋ, ಕೆಮೆರಾ ಕೈಚಳಕವೋ

ನೀತು ನೀ ಬೆತ್ತಲೆಯೋ, ಕೆಮೆರಾ ಕೈಚಳಕವೋ

Posted By:
Subscribe to Filmibeat Kannada

"ಮೊದಲ ನೋಟಕ್ಕೆ ನಾನು ಸಂಪೂರ್ಣ ಬೆತ್ತಲೆಯಿರುವಂತೆ ಕಾಣುತ್ತದೆಯಾದರೂ, ನಾನು ಆ ದೃಶ್ಯದಲ್ಲಿ ಬೆತ್ತಲಾಗಿಲ್ಲ. ಯಾರಾದರೂ ಎಲ್ಲಾ ಕಳಚಿ ಹಾಗೆ ಕೂರಲು ಸಾಧ್ಯವೇ?" ಎಂದು ಮರು ಪ್ರಶ್ನೆ ಮಾಡುವ ಬೋಲ್ಡ್ ಹುಡುಗಿ ನೀತೂ ಚಂದ್ರ. ಟ್ರಾಫಿಕ್ ಸಿಗ್ನಲ್ ಎಂಬ ವಿಮರ್ಶಕರ ಮೆಚ್ಚುಗೆಯ ಚಿತ್ರದ ಮೂಲಕ ನೀತೂ ಜನಪ್ರಿಯರಾದರೂ, ಹೆಸರು ಮಾಡಿದ್ದು ಮಾತ್ರ ಬೇರೆಯೇ ಕಾರಣಗಳಿಗೆ.

ವಿಡಿಯೋ: ಬಾಲಿವುಡ್ ನ ಹೊಸ ಲೆಸ್ಬಿಯನ್ಸ್?

ಬಹು ಚರ್ಚಿತ ಜುಹೂ ಬೀಚ್ ನ ಸಲಿಂಗ ರೋಮಾಂಚನಕಾರಿ ಫೋಟೋ ಶೂಟ್ ಪ್ರಕರಣವನ್ನು ತೆಗೆದು ಹಾಕಿದರೆ, ಗರಂ ಮಸಾಲ ಚಿತ್ರದಿಂದ ಹಿಡಿದು ಇಲ್ಲಿವರೆಗೂ ಹಿಂದಿಯಲ್ಲದೆ, ತೆಲುಗು, ತಮಿಳು ಚಿತ್ರಗಳಲ್ಲೂ ಬಿಹಾರಿ ಬೆಡಗಿ ನೀತೂ ಮಿಂಚಿದ್ದಾರೆ. ಆದರೆ, ಅಪಾರ್ಟ್ ಮೆಂಟ್ ಚಿತ್ರದಲ್ಲಿ ಯಾಕೆ ಈ ರೀತಿ ಕಾಣಿಸಿಕೊಂಡೆ ಎಂದರೆ, ಬಾತ್ ರೂಂ ಸೀನ್ ಬಗ್ಗೆ ನಿರ್ದೇಶಕ ಜಗನ್ಮೋಹನ್ ಮೊದಲೇ ಹೇಳಿದ್ದರು, ಷವರ್ ಕೆಳಗೆ ನೆನೆಯುವ ದೃಶ್ಯವಲ್ಲ. ಬಕೀಟ್ ಹಿಂದೆ ಅಡಗಿ ಕೂರವ ದೃಶ್ಯವಿರುತ್ತದೆ ಎಂದಿದ್ದರು. ಅದರಂತೆ ಚಿತ್ರೀಕರಿಸಿದ್ದಾರೆ ಕೂಡ. ನಾನು ಕ್ಯಾಮೆರಮನ್ ಹಾಗೂ ಕೆಲ ಆಪ್ತರು ಮಾತ್ರ ಈ ದೃಶ್ಯ ಚಿತ್ರೀಕರಣದ ಸಮಯದಲ್ಲಿದ್ದೇವು ಎಂದಿದ್ದಾರೆ.

ವಿಡಿಯೋ: ನೀತು ಚಂದ್ರಾ ಫೋಟೋ ಶೂಟ್

ಈ ಹಿಂದೆ ಕ್ಲಾಸಿಕ್ ನಟಿ ಸ್ಮಿತಾ ಪಾಟೀಲ್ ಕೂಡ ಚಕ್ರ ಚಿತ್ರದಲ್ಲಿ ಈ ರೀತಿ ನಟಿಸಿದ್ದು ನಿಮಗೆ ಗೊತ್ತೇ ಎಂದರೆ, ಗೊತ್ತಿದೆ, ಟ್ರಾಫಿಕ್ ಸಿಗ್ನಲ್ ಚಿತ್ರದ ನನ್ನ ಪಾತ್ರದ ನಂತರ ಸ್ಮಿತಾ ಜೀ ಜೊತೆ ನನ್ನನ್ನು ತುಲನೆ ಮಾಡುವುದು ನಡೆದಿದೆ. ಆದರೆ, ನಟನೆಯಲ್ಲಿ ಅವರ ಷ್ಟು ಎತ್ತರಕ್ಕೆ ನಾನಿನ್ನೂ ಬೆಳೆದಿಲ್ಲ ಎಂದು ನಮ್ರವಾಗಿ ನೀತೂ ಹೇಳುತ್ತಾರೆ.

ಅಂದಹಾಗೆ ಈ ಚಿತ್ರದಲ್ಲಿ ತನುಶ್ರೀ ದತ್ತಾ ಕೂಡ ಬಾತ್ ರೂಂ ದೃಶ್ಯವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಏಪ್ರಿಲ್ ಕೊನೆಗೆ ಚಿತ್ರಮಂದಿರ ಪ್ರವೇಶಿಸುವ ಅಪಾರ್ಟ್ ಮೆಂಟ್ ಚಿತ್ರ ಪ್ರೇಕ್ಷಕರನ್ನು ಸೆಳೆಯಬಲ್ಲದೇ ಕಾದು ನೋಡಬೇಕು. ನೀತೂ ಮಾತ್ರ ಎಂದಿನಂತೆ ಬೋಲ್ಡ್ ಪಾತ್ರಕ್ಕೆ ಆದ್ಯತೆ ಎಂದು ಘೋಷಿಸಿಯಂತೂ ಆಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada