»   » ಬಾಲಿವುಡ್ ತಾರೆ ಕರೀಷ್ಮಾ ಕಪೂರ್ ಗೆ ಗಂಡು ಮಗು

ಬಾಲಿವುಡ್ ತಾರೆ ಕರೀಷ್ಮಾ ಕಪೂರ್ ಗೆ ಗಂಡು ಮಗು

Posted By:
Subscribe to Filmibeat Kannada

ಉದ್ಯಮಿ ಸಂಜಯ್ ಕಪೂರ್ ಅವರನ್ನು ಮದುವೆಯಾಗಿದ್ದ ಬಾಲಿವುಡ್ ತಾರೆ ಕರೀಷ್ಮಾ ಕಪೂರ್ ಗಂಡುಮಗುವಿಗೆ ಜನ್ಮನೀಡಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಶುಕ್ರವಾರ ಅವರು ಗಂಡುಮಗುವಿಗೆ ಜನ್ಮನೀಡಿದ್ದು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.

ರಾಜ ಹಿಂದೂಸ್ತಾನಿ, ಹೀರೋ ನಂ.1, ದಿಲ್ ತೋ ಫಾಗಲ್ ಹೈ ನಂತಹ ಹಲವಾರು ಹಿಟ್ ಚಿತ್ರಗಳನ್ನು ಕರೀಷ್ಮಾ ಕಪೂರ್ ನೀಡಿದ್ದರು. ಕರೀಷ್ಮಾ ಕಪೂರ್ ಅವರ ಮೊದಲ ಮಗು ಸಮೈರಾಗೆ ಈಗಾಗಲೆ ಆರು ವರ್ಷ. ಇದೀಗ ಕರೀಷ್ಮಾ ಕಪೂರ್ ಎರಡನೆ ಮಗುವಿಗೆ ಜನ್ಮ ನೀಡಿದ್ದಾರೆ.

ಕರೀಷ್ಮಾ ಕಪೂರ್ ಗೆಳತಿ ಆಭರಣ ವಿನ್ಯಾಸಕಿ ಫರಾ ಖಾನ್ ಅಲಿ ಟ್ವಿಟ್ಟರ್ ನಲ್ಲಿ ಶುಭಾಶಯಗಳನ್ನು ತಿಳಿಸಿದ್ದು, ಈಗಷ್ಟೆ ಕರೀಷ್ಮಾ ಕಪೂರ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಮತ್ತು ಅವರ ಕುಟುಂಬದವರಿಗೆ ಅಭಿನಂದನೆಗಳು ಎಂದು ಅವರು ಟ್ವ್ವೀಟ್ ಮಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada