»   » ಶಕೀರಾ ನಾಚುವಂತೆ ಕುಣಿಯಲಿದ್ದಾರೆ ಕತ್ರಿನಾ

ಶಕೀರಾ ನಾಚುವಂತೆ ಕುಣಿಯಲಿದ್ದಾರೆ ಕತ್ರಿನಾ

Posted By:
Subscribe to Filmibeat Kannada

ಫೀಫಾ ವಿಶ್ವಕಪ್ ನಲ್ಲಿ ಕೊಲಂಬಿಯಾ ಗಾಯಕಿ ಶಕೀರಾ ಕುಣಿದು ಕುಪ್ಪಳಿಸಿದ್ದನ್ನು ಕ್ರೀಡಾಭಿಮಾನಿಗಳು ಇನ್ನೂ ಮರೆತಿಲ್ಲ. ಆಕೆಯ ಮೈಮಾಟ ಕಣ್ಣಿಗೆ ಹಬ್ಬವನ್ನುಂಟು ಮಾಡಿತ್ತು. ಇದೀಗ ಅದೇ ರೀತಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲು ಬಾಲಿವುಡ್ ತಾರೆ ಕತ್ರಿನಾ ಕೈಫ್ ಕುಣಿಯಲಿದ್ದಾರಂತೆ.

ಶಕೀರಾಳ ನೃತ್ಯ ವೈಭವನನ್ನು ನೋಡಿದ ಕಾಮನ್ ವೆಲ್ತ್ ಕ್ರೀಡಾಕೂಟದ ಆಯೋಜಕರು ನಾವೇನು ಕಮ್ಮಿ ಎಂದು ಇದೀಗ ಕತ್ರಿನಾರನ್ನು ಕುಣಿಸಲು ಸಜ್ಜಾಗಿದ್ದಾರೆ. ಈಗಾಗಲೆ ಆಕೆಯನ್ನು ಭೇಟಿ ಮಾಡಿ ಕ್ರೀಡಾಕೂಟವನ್ನು ಉದ್ಘಾಟಿಸಲು ಆಹ್ವಾನಿಸಲಾಗಿದೆಯಂತೆ. ಕತ್ರಿನಾ ಮಾತ್ರ ಇನ್ನೂ ಬಾಯ್ಬಿಟ್ಟಿಲ್ಲ.

ಖ್ಯಾತ ಸಂಗೀತ ಸಂಯೋಜಕ ಎ ಆರ್ ರೆಹಮಾನ್ ಅವರ ಶ್ರುತಿಗೆ ತಂತಿಯಾಗಲಿದ್ದಾರೆ ಕತ್ರಿನಾ ಎನ್ನುತ್ತವೆ ಮೂಲಗಳು. ಅಕ್ಟೋಬರ್ ತಿಂಗಳಲ್ಲಿ ಕಾಮನ್ ವೆಲ್ತ್ ಕ್ರೀಡೆಗಳು ಆರಂಭವಾಗಲಿವೆ. ರೆಹಮಾನ್ ಸಂಯೋಜಿಸಿರುವ ಕ್ರೀಡಾಕೂಟದ ಗೀತೆಗೆ ಕತ್ರಿನಾ ಹೆಜ್ಜೆ ಹಾಕಲಿದ್ದಾರೆ.

ಕ್ರೀಡಾಕೂಟ ಸಮಿತಿಯ ಅಧ್ಯಕ್ಷರಾದ ಸುರೇಶ್ ಕಲ್ಮಾಡಿ ಅವರನ್ನು ಈ ಬಗ್ಗೆ ಕೇಳಲಾಗಿ, ಇನ್ನೂ ಯಾವುದು ನಿರ್ಧಾರವಾಗಿಲ್ಲ. ಒಂದು ವೇಳೆ ಕತ್ರಿನಾ ಗ್ರೀನ್ ಸಿಗ್ನಲ್ ಕೊಟ್ಟರೆ ನೀವು ಈ ಸುದ್ದಿಯನ್ನು ಪ್ರಕಟಿಸಲು ನಮ್ಮದೇನು ಅಭ್ಯಂತರವಿಲ್ಲ ಎಂದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada