For Quick Alerts
  ALLOW NOTIFICATIONS  
  For Daily Alerts

  ಬ್ರಹ್ಮಚಾರಿಗಳಿಗೆ ನಟಿ ವೀಣಾ ಮಲಿಕ್ ಆಹ್ವಾನ

  |

  ಪ್ರೇಮಿಗಳ ದಿನಾಚರಣೆ ಅಂಗವಾಗಿ ನಟಿ ವೀಣಾ ಮಲಿಕ್ ಸಿದ್ಧರಾಗಿದ್ದಾರೆ. ಆಕೆ 'ನನ್ನ ಹೃದಯ ಕದಿಯಲು ಅರ್ಹ ಬ್ಯಾಚುಲರ್ಸ್ ಪ್ರಯತ್ನಿಸಬಹುದು' ಎಂದಿದ್ದಾರೆ. ಪಾಕಿಸ್ತಾನಿ ನಟಿ ತನ್ನ ಬೋಲ್ಡ್ ನಡೆತೆಗೆ ಈಗಾಗಲೇ ಹೆಸರುವಾಸಿ ಎಂಬುದು ಯಾರಿಗೂ ಹೊಸ ವಿಷಯವಲ್ಲ. ಒಟ್ಟಿನಲ್ಲಿ ವೀಣಾ ಮಲಿಕ್ ಅಭಿಮಾನಿಗಳಿಗೆ ಸದಾವಕಾಶದ ಹಬ್ಬ.

  ಕಿರುತೆರೆಯ ಸ್ವಯಂವರ ಕಾರ್ಯಕ್ರಮದ ಮೂಲಕ ತಾನು ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡುವುದಾಗಿ ಆಕೆ ಘೋಷಿಸಿದ್ದಾರೆ. ಬರಲಿರುವ ಈ ಕಾರ್ಯಕ್ರಮದಲ್ಲಿ ಅರ್ಹ ಬ್ರಹ್ಮಚಾರಿಗಳು ತನ್ನ ಹೃದಯ ಕದಿಯಬಹುದೆಂದು ಸಾರ್ವಜನಿಕ ಆಹ್ವಾನ ನೀಡಿದ್ದಾಳೆ. ಆಕೆ 'ಲೈಫ್ ಪಾರ್ಟ್ ನರ್' ಆಗಬಯಸುವವರು ಟ್ರೈ ಮಾಡಿ ನೋಡಬಹುದು.

  ಪ್ರೀತಿಯ ಬಗ್ಗೆ ಆಕೆಯ ಅಭಿಪ್ರಾಯ ಹೀಗಿದೆ. "ನಾನು ಈಗಲೂ (ಈ ಕಾಲದಲ್ಲೂ!) ಕೂಡ ಪ್ರೀತಿ, ಪ್ರೇಮದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇನೆ. ಪ್ರತಿಯೊಬ್ಬರ ಜೀವನದಲ್ಲಿ ಯಾರಾದರೊಬ್ಬರು ಪ್ರೀತಿ ಹುಟ್ಟಿಸಲು ಹಾಗೂ ಕೊಡಲು ಬಂದೇ ಬರುತ್ತಾರೆ. ಆ ಪ್ರೀತಿ ನಿಮ್ಮ ಕೊನೆಯ ಉಸಿರಿರುವವರೆಗೂ ಇದ್ದೇ ಇರುತ್ತದೆ" ಎಂದಿದ್ದಾರೆ. ಅಂದಹಾಗೆ, ಈ ಸ್ವಯಂವರ ಸದ್ಯದಲ್ಲೇ NDTV ಇಮಾಜಿನ್ ನಲ್ಲಿ ಪ್ರಸಾರವಾಗಲಿದೆ. (ಏಜೆನ್ಸೀಸ್)

  English summary
  This Valentines Day, Pakistani actress Veena Malik is inviting all the eligible bachelors and giving them a chance of their lifetime to steal her heart in her upcoming television series Swayamwar and she will be deciding her life partner there.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X