For Quick Alerts
  ALLOW NOTIFICATIONS  
  For Daily Alerts

  ಬಾತ್ ಟಬ್‌ನಲ್ಲಿ ವಿದ್ಯಾ ಬಾಲನ್‌ಗೆ ಹೀಗಾಗಬಾರದಿತ್ತು!

  By Rajendra
  |

  ಬಾಲಿವುಡ್ ತಾರೆ ವಿದ್ಯಾ ಬಾಲನ್‌ ತಮ್ಮ ಹೊಚ್ಚಹೊಸ ಚಿತ್ರ 'ಡರ್ಟಿ ಪಿಕ್ಚರ್‌'ನಲ್ಲಿ ಸಿಕ್ಕಾಪಟ್ಟೆ ಎಕ್ಸಪೋಸ್ ಮಾಡಿದ್ದಾರಂತೆ. ಮೃದು ಮತ್ತು ಕೋಮಲ ತ್ವಚೆಯ ಚರ್ಮವನ್ನು ವಿದ್ಯಾ ಈ ಚಿತ್ರದಲ್ಲಿ ಪ್ರದರ್ಶಿಸಲಿದ್ದಾರಂತೆ. ಆದರೆ ಸ್ನಾನದ ಸನ್ನಿವೇಶದ ಚಿತ್ರೀಕರಣದಲ್ಲಿ ವಿದ್ಯಾ ತಮ್ಮ ಚರ್ಮ ಸುಟ್ಟುಕೊಂಡಿದ್ದಾರೆ.

  ಡರ್ಟಿ ಪಿಕ್ಚರ್ ಚಿತ್ರದಲ್ಲಿ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ವಿದ್ಯಾ ಬಾಲನ್ ಕಾಣಿಸಲಿದ್ದಾರೆ. ಬಾತ್ ಟಬ್‌ನಲ್ಲಿ ಮುಳುಗೇಳುವ ಸೀನ್ ಅದಂತೆ. ಡೈರೆಕ್ಟರ್ ಆಕ್ಷನ್ ಎನ್ನುತ್ತಿದ್ದಂತೆ ಟಬ್‌ಗೆ ಇಳಿದ ವಿದ್ಯಾ ಇದ್ದಕ್ಕಿದ್ದಂತೆ ಕಟ್ ಕಟ್ ಎಂದು ಟವಲ್ ಸುತ್ತಿಕೊಂಡು ಟಬ್‌‍ನಿಂದ ಎದ್ದು ಬಂದರಂತೆ.

  ಏನಾಯಿತು ಎಂದು ನೋಡುವಷ್ಟರಲ್ಲಿ ಬಿಸಿಬಿಸಿ ನೀರು ಆಕೆಯ ಚರ್ಮ ಸುಟ್ಟ್ಟಿತ್ತು. ಬಳಿಕ ನೋಡಿಕೊಂಡರೆ ಚರ್ಮದ ಮೇಲೆಲ್ಲಾ ಬೊಬ್ಬೆ ಬಂದಿತ್ತಂತೆ. ಚಿತ್ರೀಕರಣ ಮುಗಿಸಿ ಕೂಡಲೆ ಚರ್ಮ ವೈದ್ಯರಲ್ಲಿಗೆ ದೌಡಾಯಿಸಿದ್ದಾರೆ ವಿದ್ಯಾ.

  ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದನಿರ್ಮಾಪಕ ಏಕ್ತಾ ಕಪೂರ್, ಬಾತ್ ಟಬ್‌ನಲ್ಲಿ ಮಿನರಲ್ ವಾಟರನ್ನೇ ಬಳಸಿದ್ದೆವು. ಯಾಕೆ ಹೀಗಾಯಿತೊ ಗೊತ್ತಿಲ್ಲಪ್ಪ. ಬಹುಶಃ ಬಾತ್ ಟಬ್‌ಗೆ ಬಳಸಿದ ಬಣ್ಣದಿಂದ ಹೀಗಾಗಿರಬಹುದ ಅಥವಾ ಸೋಪು ಸರಿಯಿರಲಿಲ್ಲವೇನೋ ಎಂದು ಕೈತೊಳೆದುಕೊಂಡಿದ್ದಾರೆ. (ಏಜೆನ್ಸೀಸ್)

  English summary
  Vidya Balan will resort to lots of skin show in her upcoming film Dirty Picture, so, she is expected to be seen in smooth and soft skin. But the actress spoiled her skin after shooting a bathing scene in a bathtub. She ended up in skin rashes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X