For Quick Alerts
  ALLOW NOTIFICATIONS  
  For Daily Alerts

  ಕರೀನಾ ಕಪೂರ್ - ಸೈಫ್ ಮೊಬೈಲ್ ಪ್ರೇಮ

  By Srinath
  |

  ಬಾಲಿವುಡ್ ನ ಹೆಸರಾಂತ ಬಾಲೆ ಕರೀನಾ ಕಪೂರ್ ಗೆ ಇತ್ತೀಚೆಗೆ ವಿಪರೀತ ಎನ್ನುವಷ್ಟು ಮೊಬೈಲ್ ಗೀಳು ಅಂಟಿಕೊಂಡಿದೆ. ಅದರಲ್ಲೂ ಸೈಫ್ ಆಲಿ ಖಾನ್ ಎಂಬ ಗೆಳೆಯ ಸಿಕ್ಕ ಮೇಲಂತೂ ಇದು ತಾರಕಕ್ಕೇರಿದೆ. ಇದರಿಂದ ಕರೀನಾ ಚಿತ್ರಗಳ ನಿರ್ಮಾಪಕರು ಕಂಗಾಲಾಗಿದ್ದಾರೆ. ಸೆಟ್ ಗಳಲ್ಲಿಯೂ ಇವಳು ಮೊಬೈಲ್ ಹಿಡಿದಿದ್ದರೆ ಶೂಟಿಂಗ್ ನಡಸುವುದಾದರೂ ಹೇಗೆ ಎಂಬ ಚಿಂತೆ ಆವರಿಸಿಕೊಂಡಿದೆ.

  ಹೊಸ ಚಿತ್ರವೊಂದರ ತಯಾರಿಯಲ್ಲಿ ತೊಡಗಿರುವ ನಿರ್ದೇಶಕಿ ರೀಮಾ ಕಾಗ್ಟಿ ಶೂಟಿಂಗ್ ವೇಳೆ ಮೊಬೈಲ್ ಫೋನ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದಾರೆ. ತಮ್ಮ ಸಿನಿಮಾದ ಪ್ರಮೊ ಚಿತ್ರಗಳು ಹೊರಹೋಗಬಾರದೆಂದು ಖಾಸಗಿ ಕ್ಯಾಮೆರಾಗಳಿಗೂ ಅವರು ಅನುಮತಿ ನೀಡಿಲ್ಲ. ಖ್ಯಾತ ನಟ ಅಮೀರ್ ಖಾನ್ ಗೂ ಸೆಟ್ ಗಳಲ್ಲಿ ಮೊಬೈಲ್ ಬಳಸುವುದೆಂದರೆ ಅಲರ್ಜಿ. ಅದರಿಂದ ಕೆಲಸಕ್ಕೆ ಬಾಧಕವಾಗುತ್ತದೆ ಎಂಬುದು ಅವರ ಖಡಕ್ಕಾದ ಮೊಬೈಲ್ ಮಾತು. ದೊಡ್ಡವರೇ ಹೀಗಿರುವಾಗ ಸೆಟ್ ನಲ್ಲಿ ಬೇರೆ ಯಾರಿಗೂ ಮೊಬೈಲ್ ಬಳಸುವ ಧೈರ್ಯ ಬರುತ್ತಿಲ್ಲವಂತೆ. ಆದರೆ...

  ಇಂತಹ ಸನ್ನಿವೇಶದಲ್ಲಿ ಈಯಮ್ಮ ಕರೀನಾ ಮಾತ್ರ ಯಾವುದೇ ಎಗ್ಗಿಲ್ಲದೆ ಸಮಯ ಸಾಧಿಸಿ ಮೊಬೈಲ್ ಕಚ್ಚತೊಡಗುತ್ತಾಳೆ. ಒಂದೋ, ಮೆಸೇಜ್ ಮಾಡುತ್ತಿರುತ್ತಾಳೆ. ಇಲ್ಲವೇ, ವಟಗುಟ್ಟುತ್ತಿರುತ್ತಾಳೆ. ಕರೀನಾಳ ಈ ಕಸರತ್ತೆಲ್ಲ ಪ್ರಿಯಕರ ಸೈಫ್ ಅಲಿ ಖಾನ್ ಗೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ, ಅಲ್ಲವೇ? ಪಾಪ, ಪ್ರೇಮಿಗಳ ಕಷ್ಟ ನಿಮಗೇನ್ರೀ ಗೊತ್ತು !?

  English summary
  Director Reema Kagti has banned the use of mobile phones and cameras on the sets. But Kareena Kapoor broke all the rules by flaunting her mobile phone on the sets of the film. She was constantly messaging and calling people unlike the rest of the film unit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X