»   » ಟ್ವಿಟರ್ ಗೆ ಮ್ಯಾಚೋ ಮ್ಯಾನ್ ಸಲ್ಮಾನ್

ಟ್ವಿಟರ್ ಗೆ ಮ್ಯಾಚೋ ಮ್ಯಾನ್ ಸಲ್ಮಾನ್

Posted By:
Subscribe to Filmibeat Kannada

ಟ್ವಿಟರ್ ಎಂಬ ಮೈಕ್ರೋ ಬ್ಲಾಗಿಂಗ್ ಮಾಯಾಲೋಕಕ್ಕೆ ಬಾಲಿವುಡ್ ನ ಅತಿ ರಂಜನೀಯ ನಟ ಸಲ್ಮಾನ್ ಎಂಟ್ರಿ ಕೊಟ್ಟಿದ್ದಾರೆ. 44 ವರ್ಷದ ಈ ಬಿಂದಾಸ್ ನಟನಿಗೆ ಟ್ವಿಟ್ ಮಾಡಲು ಸಲಹೆ ಕೊಟ್ಟಿದ್ದು ಅವರ ಅಣ್ಣ ನಟ ಅರ್ಬಾಜ್ ಖಾನ್ ಎಂದು ಸುದ್ದಿ.

ತಮ್ಮ ಮೊದಲ ಟ್ವೀಟ್ ನಲ್ಲೇ ಇದನ್ನು ಹೇಳಿರುವ ಸಲ್ಮಾನ್ , ಅರ್ಬಾಜ್ ಟ್ವೀಟ್ ಮಾಡಲು ಹೇಳಿದ ಮಾಡಿದೆ ಎಂದು ಹಾಕಿದ್ದಾರೆ. ಸಲ್ಮಾನ್ ನ ಬೇಟೆಗೆ ಟ್ವಿಟರ್ ನಲ್ಲಿ ಶಾರುಖ್ ಖಾನ್, ಹೃತಿಕ್ ರೋಷನ್, ಅಭಿಷೇಕ್ ಬಚ್ಚನ್, ಕರಣ್ ಜೋಹರ್, ಅರ್ಜುನ್ ರಾಮ್ ಪಾಲ್ ಇದ್ದಾರೆ. ಅಲ್ಲದೆ ಪ್ರಿಯಾಂಕಾ ಛೋಪ್ರಾ, ದೀಪಿಕಾ ಪಡುಕೋಣೆ ಕೂಡ ಸಿಗುತ್ತಾರೆ. ಸಲ್ಮಾನ್ ಇವರೆಲ್ಲರನ್ನು ಫಾಲೋ ಮಾಡುತ್ತಾರೋ ಇಲ್ಲವೋ, ಸಲ್ಮಾನ್ ಅಭಿಮಾನಿಗಳ ಗುಂಪು ದಿನೇ ದಿನೇ ಹೆಚ್ಚುತ್ತಿದೆಯಂತೆ

ಹಿಂದಿಯಲ್ಲೇ ಹೆಚ್ಚಾಗಿ ಟ್ವೀಟ್ ಮಾಡುವುದಾಗಿ ಸಲ್ಮಾನ್ ಹೇಳಿದ್ದಾರೆ. ಸದ್ಯ ಆ ಕಷ್ಟವನ್ನು ಹಿಂದಿ ಕಲಿಕೆಯ ಆಜೀವ ವಿದ್ಯಾರ್ಥಿನಿಯಾದ ಗೆಳತಿ ಕತ್ರೀನಾಗೆ ನೀಡಿಲ್ಲ. ಅಲ್ಲದೆ ಇದುವರೆವಿಗೂ ನನ್ನ ಹೆಸರಲ್ಲಿ ಖಾತೆ ಇಟ್ಟುಕೊಟ್ಟು ಟ್ವೀಟ್ ಮಾಡುತ್ತಿದ್ದವರೆಲ್ಲಾ ಸೈಡ್ ಗೆ ಹೋಗ್ಬಿಟಿ, ನಾನು ಎಂಟ್ರಿ ಕೊಟ್ಟಾಯ್ತು ಎಂದು ಫಿಲ್ಮಿ ಸ್ಟೈಲ್ ನಲ್ಲಿ ಡೈಲಾಗ್ ಹೊಡೆದಿದ್ದಾರೆ. ಸಲ್ಮಾನ್ ಟ್ವೀಟರ್ ಪ್ರವೇಶ ಯಾರಿಗೆ ಸಹ್ಯವಾಯಿತೋ ಬಿಡ್ತೋ, ಗ್ರಾಂಡ್ ಓಲ್ಡ್ ಹೀರೋ ಶಮ್ಮಿ ಕಪೂರ್ ಅಂತು ಫುಲ್ ಖುಷ್ ಆಗಿದ್ದಾರೆ. ಸಲ್ಮಾನ್ ಟ್ವೀಟ್ ಗಳಿಗೆ ಕಾಯುವುದಾಗಿ ರಿತೇಶ್ ಕೂಡ ಹೇಳಿದ್ದಾರೆ. ಒಟ್ಟಾರೆ, ಎಲ್ಲೆಡೆ ಒಂದಲ್ಲ ಒಂದು ರೀತಿ ಜಗಳಕ್ಕಿಳಿಯುವ ಸಲ್ಲೂಗೆ ಟ್ವೀಟರ್ ಎಷ್ಟು ದಿನದೊಳಗೆ ಯುದ್ಧ ವೇದಿಕೆಯಾಗಿ ಮಾರ್ಪಾಟಾಗುವುದೋ ಕಾದು ನೋಡಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada