»   » ಹುಸೇನಜ್ಜನ ಕುಂಚದಲ್ಲಿ ಕತ್ರಿನಾ ಕೈಫ್ ಸೌಂದರ್ಯ

ಹುಸೇನಜ್ಜನ ಕುಂಚದಲ್ಲಿ ಕತ್ರಿನಾ ಕೈಫ್ ಸೌಂದರ್ಯ

Posted By:
Subscribe to Filmibeat Kannada

ಖ್ಯಾತ ಕಲಾವಿದ ಎಂ ಎಫ್ ಹುಸೇನ್ ಮತ್ತೊಮ್ಮೆ ಕುಂಚವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಹುಸೇನಜ್ಜನ ಕುಂಚಕ್ಕೆ ಬಲ ತಂದಿರುವುದು ಸಾದಾಸೀದಾ ಹೆಣ್ಣಲ್ಲ.ಹುಸೇನಜ್ಜನ ಮಸುಕು ಕಣ್ಗಳಲ್ಲಿ ಬಾಲಿವುಡ್ ನ ಮಾಂತ್ರಿಕ ಬೆಡಗಿ ಕತ್ರಿನಾ ಕೈಫ್ ಬೆಳಕು ಮೂಡಿಸಿದ್ದಾಳೆ.

ಸದ್ಯಕ್ಕೆ ಬಾಲಿವುಡ್ ನಲ್ಲಿ ಮಹಾರಾಣಿಯಂತೆ ಮೆರೆಯುತ್ತಿರುವ ಕತ್ರಿನಾ ಕೈಫ್ ನಟಿಸಿದ ಇತ್ತೀಚಿನ 'ರಾಜ್ ನೀತಿ' ಚಿತ್ರ ಬಾಕ್ಸಾಫೀಸನ್ನು ಕೊಳ್ಳೆಹೊಡೆಯುತ್ತಿದೆ. ತಮ್ಮ ಸೌಂದರ್ಯ ಹಾಗೂ ಅಭಿನಯದ ಮೂಲಕ ಕತ್ರಿನಾ ಪ್ರೇಕ್ಷಕರ ಹೃದಯದಲ್ಲಿ ಭದ್ರ ಸ್ಥಾನ ಗಿಟ್ಟಿಸಿದ್ದಾರೆ. ಇದೀಗ ಹುಸೇನಜ್ಜನ ಕಣ್ಣಿಗೆ ಬಿದ್ದು ಕತ್ರಿನಾಳ ಸೌಂದರ್ಯ ಅನಾವರಣಗೊಳ್ಳಲಿದೆ.

ಒಂದು ಕಾಲದಲ್ಲಿ ಪಡ್ಡೆಹುಡುಗರ ಮೈ ಬೆಚ್ಚಗೆ ಮಾಡಿದ್ದ ಮಾಧುರಿ ದೀಕ್ಷಿತ್, ಟಾಬು, ಊರ್ಮಿಳಾ ಮಾತೋಂಡ್ಕರ್, ಅಮೃತಾರಾವ್ ಇವರೆಲ್ಲಾ ಹುಸೇನಜ್ಜನ ಕುಂಚಕ್ಕೆ ಸಿಕ್ಕವರು. ಕತ್ರಿನಾ ಅಭಿನಯಿಸಿದ್ದ 'ಯುವರಾಜ್' ಚಿತ್ರವನ್ನು ಎರಡು ಬಾರಿ ನೋಡಿದ ಬಳಿಕ ಈ ಇಳಿವಯಸ್ಸಿನಲ್ಲಿ ಹುಸೇನಜ್ಜನಿಗೆ ಉತ್ಸಾಹ ಇಮ್ಮಡಿಯಾಗಿ ಕುಂಚ ಕೈಗೆತ್ತಿಕೊಂಡಿದ್ದಾರಂತೆ.

ಒಟ್ಟಿನಲ್ಲಿ ಹುಸೇನಜ್ಜನ ಕುಂಚದಲ್ಲಿ ಕತ್ರಿನಾರ ರೂಪ ಲಾವಣ್ಯಗಳು ಅನಾವರಣಗೊಳ್ಳಲು ಕಲಾಸಕ್ತರು ಎದುರುನೋಡುತ್ತಿದ್ದಾರೆ. ಸದ್ಯಕ್ಕೆ ಕತ್ರಿನಾರ ಗುಂಗಿನಲ್ಲಿರುವ ಹುಸೇನಜ್ಜನ ಕುಂಚ ಏನೇನು ಕಲೆ ಅರಳಲಿದೆಯೇ ಎಂಬ ಕುತೂಹಲ ಬಾಲಿವುಡ್ ಮಂದಿಯ ಆಸಕ್ತಿಯನ್ನು ಕೆರಳಿಸಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada