»   » ಅವಳಿ ಜವಳಿ ನಿರೀಕ್ಷೆಯಲ್ಲಿ ಸಂಜು, ಮಾನ್ಯತಾ!

ಅವಳಿ ಜವಳಿ ನಿರೀಕ್ಷೆಯಲ್ಲಿ ಸಂಜು, ಮಾನ್ಯತಾ!

Posted By:
Subscribe to Filmibeat Kannada

ಸಂಜಯ್ ದತ್ ಕುಟುಂಬ ಡಬಲ್ ಧಮಾಕಾ ನಿರೀಕ್ಷೆಯಲ್ಲಿದೆ! ಅರ್ಥಾತ್ ಸಂಜು ಹಾಗೂ ಮಾನ್ಯತಾ ಅವಳಿ ಜವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ. ಮಾನ್ಯತಾ ಹೊಟ್ಟೆಯಲ್ಲಿ ಅವಳಿ ಜವಳಿಗಳು ಬೆಳೆಯುತ್ತಿವೆ ಎಂಬ ವರದಿ ಬಾಲಿವುಡ್ ನಲ್ಲಿ ಸುದ್ದಿ ಮಾಡಿದೆ. ಒಂದೇ ಒಂದು ಮಗ ಸಾಕು ಎಂದುಕೊಂಡಿದ್ದ ದಂಪತಿಗಳಿಗೆ ಅವಳಿ ಜವಳಿಗಳ ಸುದ್ದಿ ಪರಮಾನಂದ ಉಂಟು ಮಾಡಿದೆಯಂತೆ.

ಮೊದಲ ಪತ್ನಿಯಿಂದ ಈಗಾಗಲೆ ಸಂಜುಗೆ ಒಂದು ಹೆಣ್ಣು ಮಗು ಇದೆ. ಇದೀಗ ಮಾನ್ಯತಾ ಮೂಲಕ ಮತ್ತೊಮ್ಮೆ ತಂದೆಯಾಗುತ್ತಿರುವ ಸಂಜು ಖುಷಿಯಾಗಿದ್ದಾರೆ. ಸಂಜು ಜೀವದ ಗೆಳೆಯ ಅಜಯ್ ದೇವಗನ್ ಬಳಿ ತಾನು ತಂದೆಯಾಗುತ್ತಿರುವುದಾಗಿ ಹೇಳಿಕೊಂಡು ಸಂತಸ ಪಟ್ಟಿದ್ದಾರಂತೆ.

ಸಂಜಯ್ ದತ್ ಮೊದಲ ಪತ್ನಿಯ ಮಗಳು ತ್ರಿಶಾಲಾ ಅಮೆರಿಕಾದಲ್ಲಿ ಕ್ರಿಮಿನಲ್ ಲಾ ಓದುತ್ತಿದ್ದಾರೆ. ಪುತ್ರಸಂತಾನದ ನಿರೀಕ್ಷೆಯಲ್ಲಿರುವ ಸಂಜಯ್ ದತ್ ಇದೀಗ ಅವಳಿ ಸುದ್ದಿ ಕೇಳಿ ಮಾತು ಬಾರದ ಮೂಕನಾಗಿದ್ದಾನಂತೆ. ಇದು ನಿಜವೋ ಅಥವಾ ಗಾಳಿಸುದ್ದಿಯೋ ಎಂಬುದನ್ನು ತಿಳಿಯಬೇಕಾದರೆ ಕೊಂಚ ಸಮಯ ಕಾಯಲೇಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada