»   » ದುಬೈನಲ್ಲಿ 'ದಿ ಡರ್ಟಿ' ವಿದ್ಯಾ ಬಾಲನ್ ಊಲಾಲಾ ಊಲಾಲಾ!

ದುಬೈನಲ್ಲಿ 'ದಿ ಡರ್ಟಿ' ವಿದ್ಯಾ ಬಾಲನ್ ಊಲಾಲಾ ಊಲಾಲಾ!

Posted By:
Subscribe to Filmibeat Kannada
ನರ್ತಕಿ ಸಿಲ್ಕ್ ಸ್ಮಿತಾ ಜೀವನ ಆಧಾರಿತ 'ದಿ ಡರ್ಟಿ ಪಿಕ್ಚರ್' ಭಾರತದಲ್ಲಿ ಮಾತ್ರವಲ್ಲ ಇಡೀ ಭೂಮಿಯ ಮೇಲಿನ ಚಿತ್ರಪ್ರೇಮಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಸಿಲ್ಕ್ ಸ್ಮಿತಾ ಪಾತ್ರವನ್ನು ವಿದ್ಯಾ ಬಾಲನ್ ಹೇಗೆ ಮಾಡಿದ್ದಾರೆ ಅನ್ನುವುದಕ್ಕಿಂತ ವಿದ್ಯಾ ಈ ಚಿತ್ರದಲ್ಲಿ ಹೇಗೆ ರೋಚಕವಾಗಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ನೋಡಲು ಜನ ತುದಿಗಾಲ ಮೇಲೆ ನಿಂತಿದ್ದಾರೆ.

ಅದರಲ್ಲೂ, ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹರಿ ಅವರ ವಿಶಿಷ್ಟ ಕಂಠ ಮತ್ತು ಶ್ರೇಯಾ ಘೋಷಾಲ್ ಅವರ ಮಾದಕ ಧ್ವನಿಯಲ್ಲಿ ಮೊಳಗುತ್ತಿರುವ 'ಊಲಾಲಾ ಊಲಾಲಾ ಊಲಾಲಾ ಊಲಾಲಾ' ಹಾಡು ಪಾಪ್ಯುಲಾರಿಟಿ ಚಾರ್ಟಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ನಾಸಿರುದ್ದಿನ್ ಷಾ ಅವರೊಂದಿಗೆ ವಿದ್ಯಾ ಬಾಲನ್ ಅವರ ಮಾದಕ ನರ್ತನ ಪಡ್ಡೆಗಳ ಎದೆಬಡಿತವನ್ನು ಸಿಕ್ಕಾಪಟ್ಟೆ ಹೆಚ್ಚಿಸಿದೆ.

ವಿದ್ಯಾ ಬಾಲನ್ ಡಿಸೆಂಬರ್ ತಿಂಗಳಲ್ಲಿ ದುಬೈನ ಚಿತ್ರರಸಿಕರ ಹೃದಯಕ್ಕೇ ನೇರವಾಗಿ ಲಗ್ಗೆ ಹಾಕಲಿದ್ದಾರೆ. ಮತ್ತು ಬರಿಸುವ ನಟಿ ವಿದ್ಯಾ, ಮಾಂತ್ರಿಕ ನಟ ನಾಸಿರುದ್ದಿನ್ ಮತ್ತು ಮತ್ತಿನ ರಾಜ ಇಮ್ರಾನ್ ಹಶ್ಮಿ ಸೇರಿದಂತೆ ಇಡೀ ಚಿತ್ರದ ತಂಡ ಅಂತಾರಾಷ್ಟ್ರೀಯ ಏಡ್ಸ್ ದಿನ, ಡಿ. 1ರಂದು ದುಬೈನಲ್ಲಿರುವ ರಾಮೀ ರಾಯಲ್ ಹೊಟೇಲ್ ನಲ್ಲಿರುವ ಇಟ್ಸ್ ಮಿರ್ಚಿ ನೈಟ್ ಕ್ಲಬ್ ಗೆ ಮಟಮಟ ಮಧ್ಯರಾತ್ರಿ ದಾಂಗುಡಿಯಿಡಲಿದ್ದಾರೆ.

ವಿದ್ಯಾ ಬಾಲನ್ ರನ್ನು ಭೇಟಿ ಮಾಡಿ ಅವರೊಂದಿಗೆ ಊಲಾಲಾ ಹಾಡಿಗೆ ಹೆಜ್ಜೆ ಹಾಕುವ ಅವಕಾಶ ದುಬೈ ಜನತೆಗೆ ಒಲಿದುಬಂದಿದೆ. ಚಿತ್ರ ಬಹುತೇಕ ಡಿ.29ರಂದು ಸಿಲ್ಕ್ ಸ್ಮಿತಾ ಅವರ ಹುಟ್ಟುಹಬ್ಬದಂದು ಇಡೀ ವಿಶ್ವದಾದ್ಯಂತ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ, ಸಾಕಷ್ಟು ವಿವಾದಗಳನ್ನು ಎಬ್ಬಿಸಿರುವ ದಿ ಡರ್ಟಿ ಪಿಕ್ಚರ್ ಎಲ್ಲ ಕೋರ್ಟಿನ ಅಡೆತಡೆಗಳನ್ನು ದಾಟಿ, ಸೆನ್ಸಾರ್ ಮಂಡಳಿಯ ಸರ್ಟಿಫಿಕೇಟ್ ಪಡೆದು ಹೊರಬರಬೇಕಷ್ಟೆ.

English summary
The Dirty Picture cast including Vidya Balan, who is playing the role of Silk Smitha, Nasiruddhin Shah, Imran Hashmi, Bappi Lahari are visiting Dubai on December 1. The cast will party at It's Mirchi nightclub at Ramee Royal Hotel, Dubai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada