»   »  ಕೇರಳ ಕುಟ್ಟಿ ಅಸೀನ್ ಬಾಲಿವುಡ್ ಗೆ ವರ್ಗಾವಣೆ

ಕೇರಳ ಕುಟ್ಟಿ ಅಸೀನ್ ಬಾಲಿವುಡ್ ಗೆ ವರ್ಗಾವಣೆ

Subscribe to Filmibeat Kannada
Asin shifts to Bollywood permanently!
ಗಜನಿ ಚಿತ್ರ ಬಾಕ್ಸಾಫೀಸ್ ನಲ್ಲಿ ಗೆದ್ದ ನಂತರ ಕೇರಳ ಕುಟ್ಟಿ ಅಸೀನ್ ಬಾಲಿವುಡ್ ನಲ್ಲಿ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 'ಗಜನಿ' ಗೆಲುವಿನಿಂದ ಹಿಂದಿ ನಾಯಕ ನಟರ ಕಣ್ಣು ಅಸೀನ್ ಮೇಲೆ ಬಿದ್ದಿದೆ. ಈಗಾಗಲೇ ಆಕೆ ಮುಂಬೈನ ಪ್ರತಿಷ್ಠಿತ ಬಾಂದ್ರಾ ಪ್ರದೇಶದಲ್ಲಿ ಮನೆಯೊಂದನ್ನು ಖರೀದಿಸಿದ್ದಾರೆ. ಜನವರಿ ಹೊತ್ತಿಗೆ ಆಕೆ ಬಾಲಿವುಡ್ ಗೆ ವರ್ಗವಾಗಲಿದ್ದಾರೆ.

ಈಗಾಗಲೇ ಆಕೆ ಸಲ್ಮಾನ್ ಖಾನ್ ನೊಂದಿಗೆ 'ಲಂಡನ್ ಡ್ರೀಮ್ಸ್'ನಲ್ಲಿ ತೇಲುತ್ತಿದ್ದಾರೆ. 2008ರ ಬಾಕ್ಸಾಫೀಸ್ ಕಿಂಗ್ ಎಂದೇ ಬಿರುದಾಂಕಿತನಾದ ಅಕ್ಷಯ್ ಕುಮಾರ್ ನೊಂದಿಗೆ ನಟಿಸುವ ಅವಕಾಶವೂ ಅಸೀನ್ ತೆಕ್ಕೆಗೆ ಬಿದ್ದಿದೆ. 'ಪಾಟೀಯಾಲ ಹೌಸ್' ಹೆಸರಿನ ಚಿತ್ರದಲ್ಲಿ ನಟಿಸಲು ಅಕ್ಷಯ್ ಈಗಾಗಲೇ ಅಂಗೀಕರಿಸಿದ್ದಾರೆ.

ಸಿಕ್ಕರ ಅವಿಭಕ್ತ ಕುಟುಂಬದ ಕಥಾ ಎಳೆಯನ್ನು ಹೊಂದಿರುವ ಪಾಟೀಯಾಲ ಹೌಸ್ ಇದೇ ವರ್ಷ ಸೆಟ್ಟೇರುವ ಸಾಧ್ಯತೆಗಳಿವೆ. ಇದಕ್ಕೆ ಸಂಬಂಧಿಸಿದ ಪೂರ್ಣ ವಿವರಗಳು ಶೀಘ್ರದಲ್ಲೇ ಬಹಿರಂಗವಾಗಲಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada