For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ ಬೆಲ್ಟ್‌ನಲ್ಲಿ ಹೆಚ್ಚು ಹಣ ಗಳಿಸಿದ 15 ದಕ್ಷಿಣ ಭಾರತ ಸಿನಿಮಾಗಳಿವು

  |

  ಸದ್ಯಕ್ಕೆ ಭಾರತೀಯ ಸಿನಿಮಾ ರಂಗದಲ್ಲಿ ಸೌತ್ ಸಿನಿಮಾಗಳದೇ ಹವಾ. 'ಬಾಹುಬಲಿ' ಇಂದ ಮೊದಲಗೊಂಡು ಇತ್ತೀಚೆಗೆ ಬಿಡುಗಡೆಗೊಂಡು ಭರ್ಜರಿ ಯಶಸ್ಸನ್ನು ಕಂಡಿರುವ 'ಪುಷ್ಪ' ಅವರಿಗೆ ಅನೇಕ ಚಿತ್ರಗಳು ಬಾಲಿವುಡ್‌ನಲ್ಲಿ ಸಕ್ಕತ್ ಸೌಂಡ್ ಮಾಡಿದೆ. ಇನ್ನು ಮುಂಬರುವ ಆರ್ ಆರ್ ಆರ್, ರಾಧೇಶ್ಯಾಮ್, ಕೆಜಿಎಫ್-2, ಮೇಜರ್, ಲೈಗರ್, ವಿಕ್ರಾಂತ್ ರೋಣ ಮುಂತಾದ ಚಿತ್ರಗಳ ಮೇಲೆ ಇಡೀ ಭಾರತೀಯ ಸಿನಿಮಾರಂಗದ ಕಣ್ಣು ನೆಟ್ಟಿದೆ. ಇದುವರೆಗೆ ಹಿಂದಿಯಲ್ಲಿ ಡಬ್ ಆಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಣಗಳಿಕೆ ಮಾಡಿರುವ ಟಾಪ್ 15 ಸ್ಥಾನಗಳನ್ನು ಪಡೆದಿರುವ ಸಿನಿಮಾಗಳ ಪಟ್ಟಿ ಈ ರೀತಿ ಇದೆ.

  ಕಿಚ್ಚ ಸುದೀಪ್ ಅಭಿನಯದ ಕನ್ನಡ ಚಿತ್ರ 'ಪೈಲ್ವಾನ್' ಚಿತ್ರವನ್ನು ಹಿಂದಿಯಲ್ಲಿ 'ಬಾದಶ ಪೈಲ್ವಾನ್' ಎಂಬ ಹೆಸರಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ, ಎಸ್ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಸುನಿಲ್ ಶೆಟ್ಟಿ, ಆಕಾಂಕ್ಷ ಸಿಂಗ್, ಕಬಿರ್ ದುಹನ್ ಸಿಂಗ್ ಮುಂತಾದವರು ನಟಿಸಿದ್ದಾರೆ. 2019 ರಲ್ಲಿ ಬಿಡುಗಡೆಯಾದ ಈ ಚಿತ್ರ ಹಿಂದಿ ವರ್ಷನ್ ಚಿತ್ರಮಂದಿರಗಳಲ್ಲಿ 3 ಕೋಟಿ ಗಳಿಕೆ ಮಾಡಿ 15ನೇ ಸ್ಥಾನ ಪಡೆದಿದೆ.

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತಮಿಳು ಚಿತ್ರ 'ದರ್ಬಾರ್' ಹಿಂದಿಯಲ್ಲಿ ಅದೇ ಹೆಸರಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ. ಎ.ಆರ್ . ಮುರುಗದಾಸ್ ಆಕ್ಷನ್ ಕಟ್ ಹೇಳಿರುವ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ 2020ರಲ್ಲಿ ಬಿಡುಗಡೆ ಆಗಿದೆ. 190 ಕೋಟಿ ಬಜೆಟ್ಟಿನಲ್ಲಿ ತಯಾರಾದ ಈ ಚಿತ್ರ 250ಕೋಟಿ ವರ್ಲ್ಡ್ ವೈಡ್ ಕಲೆಕ್ಷನ್ ಮಾಡಿದೆ. ಇದರ ಹಿಂದಿ ಅವತರಣಿಕೆ 3 ಕೋಟಿ 90 ಲಕ್ಷ ಗಳಿಕೆ ಮಾಡುವುದರೊಂದಿಗೆ 14ನೇ ಸ್ಥಾನ ಪಡೆದಿದೆ.

  13) ವಿಶ್ವರೂಪಂ- 2

  13) ವಿಶ್ವರೂಪಂ- 2

  2013ರಲ್ಲಿ ಬಿಡುಗಡೆಯಾದ ಕಮಲಹಾಸನ್ ಅಭಿನಯದ 'ವಿಶ್ವರೂಪಂ' ಚಿತ್ರದ ಸೀಕ್ವೆಲ್ 2018ರಲ್ಲಿ ಮೂಡಿಬಂದ 'ವಿಶ್ವರೂಪಂ-2'.ಸ್ವತಃ ಕಮಲಹಾಸನ್ ನಿರ್ದೇಶಿಸಿದ ಕ್ರಾಸ್ ಬಾರ್ಡರ್ ಟೆರರಿಸಂ ಕಥಾವಸ್ತುವಿನ ಹಿನ್ನೆಲೆ ಹೊಂದಿದ್ದ ಈ ಚಿತ್ರವನ್ನು ಹಿಂದಿಯಲ್ಲಿ ಎಕ್ತಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ ಬಿಡುಗಡೆ ಮಾಡಿತು.

  ಚಿತ್ರದ ಹಿಂದಿ ಅವತರಣಿಕೆ 4 ಕೋಟಿ ಗಳಿಕೆ ಮಾಡಿದೆ.

  12) ಮಾಸ್ಟರ್

  12) ಮಾಸ್ಟರ್

  ತಮಿಳಿನ ಸೂಪರ್ ಸ್ಟಾರ್ ವಿಜಯ್ ಅಭಿನಯದ 'ಮಾಸ್ಟರ್' ಚಿತ್ರ 2021ರ ಸೂಪರ್ ಹಿಟ್ ತಮಿಳು ಚಿತ್ರ. ಲೋಕೇಶ್ ಗಂಗರಾಜು ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದ ಬಜೆಟ್ಟು ಸುಮಾರು 140 ಕೋಟಿ. ತಮಿಳು ವರ್ಷನ್ ನಲ್ಲಿ 230 ಕೋಟಿ ಕಲೆಕ್ಷನ್ ಮಾಡಿದ 'ಮಾಸ್ಟರ್' ಚಿತ್ರ ಹಿಂದಿ ಅವತರಣಿಕೆಯಲ್ಲಿ ಐದು ಕೋಟಿ ಹಣವನ್ನು ಗಳಿಕೆ ಮಾಡಿ 12 ನೇ ಸ್ಥಾನ ಪಡೆದಿದೆ.

  11) ಸೈರಾ ನರಸಿಂಹ ರೆಡ್ಡಿ

  11) ಸೈರಾ ನರಸಿಂಹ ರೆಡ್ಡಿ

  ಆಂಧ್ರದ ರಾಯಲಸೀಮೆಯ ಸ್ವಾತಂತ್ರ ಹೋರಾಟಗಾರ ನರಸಿಂಹ ರೆಡ್ಡಿ ಜೀವನ ಆಧಾರಿತ ಚಿತ್ರ 'ಸೈರಾ ನರಸಿಂಹ ರೆಡ್ಡಿ'. ಚಿರಂಜೀವಿ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರವನ್ನು ರಾಮ್ ಚರಣ್ ತೇಜ ನಿರ್ಮಿಸಿದ್ದಾರೆ. ಬಾಲಿವುಡ್‌ನಲ್ಲಿ ಬಾಹುಬಲಿ ನಂತರ ಮತ್ತೊಂದು ತೆಲುಗಿನ ವಾರ್ ಎಪಿಕ್ ಚಿತ್ರವಾಗಿ ಇದನ್ನು ಬಿಡುಗಡೆ ಮಾಡಲಾಯಿತು. ಆದರೆ ಚಿತ್ರ ಕೇವಲ 8 ಕೋಟಿ ಗಳಿಕೆ ಅಷ್ಟೇ ಮಾಡಲು ಸಾಧ್ಯವಾಯಿತು.

  10) ಕಾಲ

  10) ಕಾಲ

  ಸೂಪರ್ ಸ್ಟಾರ್ ರಜನಿಕಾಂತ್- ರಂಜಿತ್ ಕಾಂಬಿನೇಶನ್ ನಲ್ಲಿ ಮೂಡಿಬಂದ ತಮಿಳಿನ ಹಿಟ್ ಚಿತ್ರ 'ಕಾಲ'. ತಮಿಳಿನಲ್ಲಿ ಚಿತ್ರಕ್ಕೆ ಆವರೇಜ್ ಮತ್ತು ತೆಲುಗು ಡಬ್ಬಿಂಗ್ ಫ್ಲಾಪ್ ಆಯಿತು. ಹಿಂದಿ ವರ್ಷನ್ 10 ಕೋಟಿ ಗಳಿಕೆ ಮಾಡಲು ಮಾತ್ರ ಸಾಧ್ಯವಾಯಿತು.

  9) ಸೂರ್ಯ: ದ ಸೋಲ್ಜರ್

  9) ಸೂರ್ಯ: ದ ಸೋಲ್ಜರ್

  ವಕ್ಕಂತಂ ವಂಶಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಇಂಡಿಯನ್ ಆರ್ಮಿ ಯಂಗ್ ಸೋಲ್ಜರ್ ಆಗಿ ಅಭಿನಯಿಸಿದ ಚಿತ್ರ 'ನಾ ಪೇರು ಸೂರ್ಯ' ಚಿತ್ರ ಯೂಟ್ಯೂಬ್ನಲ್ಲಿ ಹಿಂದಿ ಡಬ್ಬಿಂಗ್ ವರ್ಷನ್ ಬಿಡುಗಡೆಯಾಗಿ ದೊಡ್ಡ ಸದ್ದು ಮಾಡಿತು. ಹೀಗಾಗಿ ಈ ಚಿತ್ರ ಬಿಡುಗಡೆಯಾದ ಮೂರು ವರ್ಷಗಳ ನಂತರ ಇತರ ಹಿಂದಿ ಡಬ್ಬಿಂಗ್ ವರ್ಷನ್

  ನಾರ್ತ್ ಇಂಡಿಯಾದಲ್ಲಿ ಬಿಡುಗಡೆ ಮಾಡಿದರು. ಚಿತ್ರ ಒಟ್ಟು 12 ಕೋಟಿ ಗಳಿಕೆಯನ್ನು ಕಂಡಿದೆ.

  8) ರೋಬೋ

  8) ರೋಬೋ

  ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ಐಶ್ವರ್ಯ ರೈ ಬಚ್ಚನ್ ಅಭಿನಯದಲ್ಲಿ ನಿರ್ದೇಶಕ ಶಂಕರ್ ತಯಾರಿಸಿದ ಸೈನ್ಸ್ ಫಿಕ್ಷನ್ ಚಿತ್ರ ರೋಬೋ. 2010ರಲ್ಲಿ ತಮಿಳಿನಲ್ಲಿ 'ಎಂದಿರನ್' ಹೆಸರಿನಲ್ಲಿ ನಿರ್ಮಾಣವಾದ ಈ ಚಿತ್ರದ ಬಜೆಟ್ ಸುಮಾರು 140 ಕೋಟಿ. 2010ರ ಭಾರತೀಯ ಸಿನಿಮಾರಂಗದ ಅತಿದೊಡ್ಡ ಗ್ರಾಸ್ ಕಂಡ ಚಿತ್ರ ಎಂಬ ಹೆಗ್ಗಳಿಕೆ 'ಎಂದಿರನ್' ಚಿತ್ರಕ್ಕೆ ಸಲ್ಲುತ್ತದೆ. ತಮಿಳಿನ 'ಎಂದಿರನ್' ಚಿತ್ರವನ್ನು ಹಿಂದಿಗೆ 'ರೋಬೊ' ಹೆಸರಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿದ್ದು ಚಿತ್ರ ಸುಮಾರು 25 ಕೋಟಿ ಗಳಿಕೆ ಮಾಡಿದೆ.

  7) ಕಬಾಲಿ

  7) ಕಬಾಲಿ

  ಸೂಪರ್ ಸ್ಟಾರ್ ರಜನಿಕಾಂತ್- ಪಾ. ರಂಜಿತ್ ಕಾಂಬಿನೇಶನ್ ನಲ್ಲಿ ಮೂಡಿಬಂದ ಚಿತ್ರ ಕಬಾಲಿ. ಭಾರೀ ನಿರೀಕ್ಷೆಗಳೊಂದಿಗೆ ಮೂಡಿಬಂದಿದ್ದ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಹೇಳಿಕೊಳ್ಳುವಂಥ ಯಶಸ್ಸನ್ನು ಕಾಣಲಿಲ್ಲ. ಹಿಂದಿ ಅವತರಣಿಕೆ ಕೂಡ ಕೇವಲ 30 ಕೋಟಿ ಗಳಿಕೆ ಮಾಡಲು ಶಕ್ತವಾಯಿತು.

  6) ಕೆಜಿಎಫ್

  6) ಕೆಜಿಎಫ್

  ಯಾವುದೇ ದೊಡ್ಡ ನಿರೀಕ್ಷೆಗಳಿಲ್ಲದೆ ಚಿತ್ರಮಂದಿರಗಳಿಗೆ ಬಂದಂತಹ 'ಕೆಜಿಎಫ್' ಹಿಂದಿ ಅವತರಣಿಕೆ ಶಾರುಖ್ ಖಾನ್ ಅವರ 'ಜೀರೋ' ಎದುರು ತೊಡೆತಟ್ಟಿ ನಿಂತಿತ್ತು. ಆರಂಭದಲ್ಲಿ ಅಷ್ಟೊಂದು ಪ್ರಚಾರ ಸಿಗದೇ ಹೋದರೂ ಕೂಡ ಜನರಿಂದ ಉತ್ತಮವಾದ ಪ್ರತಿಕ್ರಿಯೆ ದೊರೆಯಿತು ಮತ್ತು ಮೌತ್ ಪಬ್ಲಿಸಿಟಿಯಿಂದ ಜನ ಥಿಯೇಟರ್ ಕಡೆಗೆ ಬಂದರು. ಚಿತ್ರ ಹಿಂದಿಯಲ್ಲಿ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಯಿತು. 'ಬಾಹುಬಲಿ' ನಂತರ ಸೌತ್ ಸಿನಿಮಾ ಒಂದು ಮಾಡಿದ ಅತಿದೊಡ್ಡ ಕಮಲ್ 'ಕೆಜಿಎಫ್' ಚಿತ್ರವೇ ಆಗಿತ್ತು, ಒಟ್ಟು 45 ಕೋಟಿ ಹಣ ಹಿಂದಿ ವರ್ಷನ್ ಮಾಡಿದೆ.

  5) ಪುಷ್ಪ: The Rise

  5) ಪುಷ್ಪ: The Rise

  2021ರ ಭಾರತ ಸಿನಿಮಾರಂಗದ ಅತಿದೊಡ್ಡ ಹಿಟ್ ಚಿತ್ರ 'ಪುಷ್ಪ'.ಅಲ್ಲು ಅರ್ಜುನ್ ಡಬ್ಬಿಂಗ್ ಚಿತ್ರಗಳ ಮೂಲಕ ಹಿಂದಿ ಆಡಿಯನ್ಸ್ ಗೆ ಸಾಕಷ್ಟು ಪರಿಚಿತ ಮುಖವೇ ಆಗಿದ್ದರೂ ಕೂಡ ಚಿತ್ರಮಂದಿರಗಳಲ್ಲಿ ಯಾವುದೇ ಚಿತ್ರ ಕಮಾಯಿ ಮಾಡಿರಲಿಲ್ಲ. ಮೊದಲ ಬಾರಿಗೆ ನೇರವಾಗಿ ಚಿತ್ರಮಂದಿರಕ್ಕೆ ಬಂದ ಈ ಚಿತ್ರ ಯಾವುದೇ ದೊಡ್ಡಮಟ್ಟದ ಪ್ರಚಾರವಿಲ್ಲದೆ ಆರಂಭಗೊಂಡರೂ ಜನರ ಬಾಯಿಂದ ಬಾಯಿಗೆ ಪ್ರಚಾರ ಪಡೆದು ಸೂಪರ್ ಹಿಟ್ ಆಯ್ತು. '83' -'ಸ್ಪೈಡರ್ ಮ್ಯಾನ್' ಗಳ ಮಧ್ಯೆ ಕೂಡ ಚಿತ್ರ ಸುಮಾರು 80 ಕೋಟಿ ಗಳಿಕೆ ಮಾಡಿದ್ದು ಈ ಚಿತ್ರದ ವಿಶೇಷತೆ.

  4) ಬಾಹುಬಲಿ -1

  4) ಬಾಹುಬಲಿ -1

  ಡಬ್ಬಿಂಗ್ ಜಗತ್ತನ್ನು ಬದಲಾಯಿಸಿದ ಚಿತ್ರ ಬಾಹುಬಲಿ. ಅಲ್ಲಿಯವರೆಗೂ ಯಾವುದೇ ದೊಡ್ಡ ಮಟ್ಟದ ಯಶಸ್ಸನ್ನು ಡಬ್ಬಿಂಗ್ ಚಿತ್ರಗಳು ಹಿಂದಿನಲ್ಲಿ ಕೊಂಡಿರಲಿಲ್ಲ. ಡಬ್ಬಿಂಗ್ ಚಿತ್ರಗಳು ಕೇವಲ ಯೂಟ್ಯೂಬ್ ಮತ್ತು ಚಾನೆಲ್‌ಗಳಲ್ಲಿ ಮಾತ್ರ ಪ್ರಸಾರವಾಗುತ್ತಿತ್ತು. ಆದರೆ ಡಬ್ಬಿಂಗ್ ಚಿತ್ರ ನೇರ ಹಿಂದಿ ಚಿತ್ರಗಳ ಮಟ್ಟಿಗೆ ಕಲೆಕ್ಷನ್ ಮಾಡಿದ್ದು ಇದೇ ಮೊದಲು. ಚಿತ್ರ ತನ್ನ ಟೋಟಲ್ ಥಿಯೇಟ್ರಿಕಲ್ ರನ್ ನಲ್ಲಿ 120 ಕೋಟಿ ಗಳಿಕೆ ಮಾಡಿತು.

  3) ಸಾಹೋ

  3) ಸಾಹೋ

  'ಬಾಹುಬಲಿ -2 'ಬಿಡುಗಡೆಯ ನಂತರ ಪ್ರಭಾಸ್ ಕ್ರೇಜ್ ಹಿಂದಿ ಬೆಲ್ಟ್ ಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಿತು. 'ಬಾಹುಬಲಿ-2' ನಂತರ ಪ್ರಭಾಸ್ ಅಭಿನಯಿಸಿದ ಭಾರಿ ಆಕ್ಷನ್ ಗಳೊಂದಿಗೆ ಕೂಡಿದ ಚಿತ್ರ 'ಸಾಹೋ', ಇದನ್ನು ಸುಜಿತ್ ನಿರ್ದೇಶನ ಮಾಡಿದ್ದರು. ಮೂಲ ತೆಲುಗು ಅವತರಣಿಕೆ ಫ್ಲಾಪ್ ಆಯಿತು. ಆದರೆ ಪ್ರಭಾಸ್ ಕ್ರೇಜ್ ಇಂದಾಗಿ ಹಿಂದಿಯಲ್ಲಿ ಸುಮಾರು 140 ಕೋಟಿ ಗಳಿಕೆ ಮಾಡಿ ಚಿತ್ರ ಭರ್ಜರಿ ಯಶಸ್ಸನ್ನು ಕಂಡಿದೆ.

  2) 2.0

  2) 2.0

  ರಜನಿಕಾಂತ್ -ಶಂಕರ್ ಕಾಂಬಿನೇಷನ್ನಲ್ಲಿ ನಲ್ಲಿ ಮೂಡಿಬಂದ 'ಎಂದಿರನ್' ಚಿತ್ರಕ್ಕೆ ಸೀಕ್ವೆಲ್ ಆಗಿ ಬಂದಿದ್ದು 2.0. ಭಾರತೀಯ ಸಿನಿಮಾ ರಂಗದಲ್ಲಿ ಇದುವರೆಗೆ ಅತಿದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಚಿತ್ರ ಇದು. ಸುಮಾರು 540 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಚಿತ್ರ ಒಟ್ಟು 800 ಕೋಟಿ ಗಳಿಕೆ ಮಾಡಿದೆ. 2.O ಹಿಂದಿ ಅವತರಣಿಕೆ 190 ಕೋಟಿ ಗಳಿಕೆ ಕಂಡಿದೆ.

  1) ಬಾಹುಬಲಿ- 2

  1) ಬಾಹುಬಲಿ- 2

  'ಕಟ್ಟಪ್ಪ ಬಾಹುಬಲಿ ನಾ ಯಾಕೆ ಕೊಂದ?' ಎಂಬ ಪ್ರಶ್ನೆಯೊಂದಿಗೆ ಎರಡು ವರ್ಷ ಜನರು ಕಾತರದಿಂದ ಈ ಸಿನಿಮಾಗೆ ಕಾಯುವಂತೆ ಮಾಡಿದ್ದು ಸುಳ್ಳಲ್ಲ. 'ಬಾಹುಬಲಿ-2' ಎಲ್ಲಾ ಭಾಷೆಗಳಲ್ಲಿ ಸೇರಿ 1800 ಕೋಟಿಗಳಿಗೆ ಮಾಡಿದೆ. ಅಚ್ಚರಿಯಸಂಗತಿಯೆಂದರೆ ಈ ಚಿತ್ರ ಹಿಂದಿ ಥಿಯೇಟ್ರಿಕಲ್ ಕಲೆಕ್ಷನ್ ಬರೋಬರಿ 510 ಕೋಟಿ. ಇದುವರೆಗಿನ ಹಿಂದಿ ಸಿನಿಮಾ ರಂಗದ ಇತಿಹಾಸದಲ್ಲೇ ಇಷ್ಟು ದೊಡ್ಡ ಗಳಿಕೆ ಮಾಡಿದ ಚಿತ್ರ ಮತ್ತೊಂದಿಲ್ಲ. ಹಿಂದಿ ಸಿನಿಮಾರಂಗದಲ್ಲೇ ಅತಿ ದೊಡ್ಡ ಗಳಿಕೆ ಮಾಡಿದ ಹೆಗ್ಗಳಿಕೆ ಈಗಲೂ 'ಬಾಹುಬಲಿ-2' ಹೆಸರಿನಲ್ಲಿದೆ. ಡಬ್ಬಿಂಗ್ ಚಿತ್ರವೊಂದರ ಕಲೆಕ್ಷನ್ ಹತ್ತಿರಕ್ಕೂ ಕೂಡ ಮತ್ತೊಂದು ನೇರ ಹಿಂದಿ ಚಿತ್ರ ಕೂಡ ಇದುವರೆಗೆ ಬರುವುದಕ್ಕೆ ಸಾಧ್ಯವಾಗಿಲ್ಲ.

  English summary
  15 highest grossing south movies in Hindi with box office collection. Due to this films success at Hindi box office Hindi Maker's showing interest to release more dubbed south movie's in theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion