»   » ಮನಿಶಾ ವಯಸ್ಸು 40; ಮದುಮಗನ ವಯಸ್ಸು 32

ಮನಿಶಾ ವಯಸ್ಸು 40; ಮದುಮಗನ ವಯಸ್ಸು 32

Posted By:
Subscribe to Filmibeat Kannada

ಬಾಲಿವುಡ್ ನಟಿ ಮನಿಶಾ ಕೋಯಿರಾಲ ಮದುವೆಯಾಗುತ್ತಿರುವ ಸುದ್ದಿ ಗೊತ್ತೇ ಇದೆಯಲ್ಲಾ. ವಧುವಿನ ವಯಸ್ಸು 40 ವರ್ಷ ವರನ ವಯಸ್ಸು 32 ವರ್ಷ. ಅಂದರೆ ಮನಿಶಾಗಿಂತಲೂ ವರ ಮಹಾಶಯ 7 ವರ್ಷ ಚಿಕ್ಕವ. ಅನಿವಾಸಿ ಭಾರತೀಯ ಉದ್ಯಮಿಯಾಗಿ ಸಾಮ್ರಾಟ್ ಕಾರ್ಯನಿರ್ವಹಿಸುತ್ತಿದ್ದಾನೆ.

ಮೂರು ದಿನಗಳ ಕಾಲ ನಡೆಯುವ ಮದುವೆ ಸಂಭ್ರಮಕ್ಕೆ ಮನಿಶಾ ಅವರು ನೇಪಾಳ, ಭಾರತ ಸೇರಿದಂತೆ ಬಾಲಿವುಡ್ ಗೆಳೆಯ/ಗೆಳೆತಿಯರನ್ನು ಆಹ್ವಾನಿಸಿದ್ದಾರೆ. ಸೋಶಿಯಲ್ ನೆಟ್ವರ್ಕಿಂಗ್ ತಾಣ ಟ್ವಿಟ್ಟರ್ ನಲ್ಲಿ ಭೇಟಿಯಾದ ಇವರು ಕಡೆಗೆ ಮದುವೆಯಲ್ಲಿ ಒಂದಾಗುತ್ತಿದ್ದಾರೆ. ನೇಪಾಳಿ ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದೆ.

ಕಠ್ಮಂಡು ಹೊರಗಿರುವ ಗೋಕರ್ಣದ ರೆಸಾರ್ಟ್ ನಲ್ಲಿ ಜೂ.18ರಂದು 'ಸ್ವಯಂವರ' ನಡೆಯಲಿದೆ. ನೇಪಾಳಿ ಸುಂದರಿ ಮನಿಷಾ ಕೋಯಿರಾಲ ಜೂನ್ 19ಕ್ಕೆ ಗೃಹಸ್ಥಾಶ್ರಮಕ್ಕೆ ಪ್ರವೇಶಿಸಲಿದ್ದಾರೆ. ಬಳಿಕ ಆರತಕ್ಷತೆ ಕಾರ್ಯಕ್ರಮ ಜೂ.20 ರಂದು ನಡೆಯಲಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada