ರಾಗಿಣಿ ಎಂಎಂಎಸ್: ನೋಡೋದೋ, ಬೇಡ್ವೋ !?

ಇವುಗಳ ಮಧ್ಯೆಯೂ ರಸಿಕತೆ ವಿಜೃಂಭಿಸುತ್ತದೆ. ಅದನ್ನು ಆಸ್ವಾದಿಸುವಂತಿದ್ದರೆ ಖಂಡಿತ, ಫಾರ್ಮ್ ಹೌಸ್ ನತ್ತ ಅಲ್ಲಲ್ಲ ಚಿತ್ರಮಂದಿರತ್ತ ಹೆಜ್ಜೆಹಾಕಬಹುದು.
ಉದಯ್ (ರಾಜ್ ಕುಮಾರ್ ಯಾದವ್) ಮತ್ತು ರಾಗಿಣಿ (ಕೈನಾಜ್ ಮೋತಿವಾಲಾ) ಎಂಬ ದಂಪತಿ ಸ್ನೇಹಿತನ ಫಾರ್ಮ್ ಹೌಸ್ ಗೆ ಭೇಟಿ ನೀಡುತ್ತಾರೆ. ಆದರೆ ಇದು ದೆವ್ವದ ಮನೆಯಾಗಿರುತ್ತದೆ. ಇಡೀ ಚಿತ್ರ ಫಾರ್ಮ್ ಹೌಸ್ ಸುತ್ತಮುತ್ತ ಓಡಾಡುತ್ತದೆ. ಇದೇ ಬ್ಯಾನರ್ ನಿರ್ಮಾಣದ 'ಲವ್ ಸೆಕ್ಸ್ ಮೋಸ'ದ ಮುಂದುವರಿದ ಭಾಗವಾಗಿ ಇದು ಪ್ರೇಕ್ಷಕರಿಗೆ ಮುದ ನೀಡುತ್ತದೆ. ಆದರೆ ಹೆಚ್ಚೇನೂ ಮನತಣಿಸುವುದಿಲ್ಲ.
ಪ್ರೀತಿ-ಪ್ರೇಮದಲ್ಲಿ ಸಿಕ್ಕಿ ಈ ಯುವ ದಂಪತಿ ಫಾರ್ಮ್ ಹೌಸ್ ನಲ್ಲಿ ಹೆಜ್ಜೆಯಿಡುತ್ತಿದ್ದಂತೆ ಅಡ್ಡಡ್ಡ ಉದ್ದುದ್ದ ಬಿದ್ದುಕೊಳ್ಳುತ್ತಾರೆ. ಯುವಕ ಚಿಕ್ಕ ಕ್ಯಾಮೆರಾ ಮೂಲಕ ಯುವತಿಯ ದೇಹಸೌಂದರ್ಯವನ್ನು ಇಂಚಿಂಚೂ ಸೆರೆಹಿಡಿಯುತ್ತಾ ಸಾಗುತ್ತಾನೆ. ಅದನ್ನು ಸೆಕ್ಸ್ ಟೇಪ್ ಮಾಡುವ ವ್ಯಾವಹಾರಿಕ ಬುದ್ಧಿ ಅವನದಾಗಿರುತ್ತದೆ.
ಈ ಮಧ್ಯೆ, ಮರಾಠಿ ಮಾತನಾಡುವ ಭೂತವೊಂದು ಬಂಗಲೆಗೆ ಪ್ರವೇಶ ಪಡೆಯುತ್ತದೆ. ಮುಂದೆ ಚಿತ್ರವನ್ನು ಅದರ ಸುತ್ತಲೂ ಸುತ್ತಲಾಗಿದೆ. ಮೊದಲಾರ್ಧ ಭೀತಿಯ ವಾತಾವರಣ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ದ್ವಿತೀಯಾರ್ಧದಲ್ಲಿ ಕೊಲೆ, ರಕ್ತಪಾತ ದೃಶ್ಯಗಳು ವಿಜೃಂಭಿಸುತ್ತವೆ. ರಾಗಿಣಿ ಬಂಗಲೆಯಿಂದ ಹೊರಬೀಳಲು ನಡೆಸುವ ಪ್ರಯತ್ನಗಳು ಕಣ್ಣಿಗೆ ಕಟ್ಟುವಂತಿವೆ. ಕೆಲವೊಮ್ಮೆ ಕಥೆ ಅಸಂಬದ್ಧವಾಗಿ ಓಡಿದರೆ ಅಂತ್ಯಕ್ಕೆ ತರ್ಕವೇ ಇಲ್ಲ.


Click it and Unblock the Notifications











