»   »  ವರ್ಮಾ ಮಗಳು ರೇವತಿ; ಬಯಲಾದ ರಹಸ್ಯ!

ವರ್ಮಾ ಮಗಳು ರೇವತಿ; ಬಯಲಾದ ರಹಸ್ಯ!

Posted By:
Subscribe to Filmibeat Kannada

ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಮದುವೆ ವಿಚಾರವನ್ನು ಇಷ್ಟು ದಿನ ಗೌಪ್ಯವಾಗಿ ಕಾಪಾಡಿಕೊಂಡು ಬಂದಿದ್ದರು. ಪತ್ರಕರ್ತರು ಅವರ ಮದುವೆ ಬಗ್ಗೆ ಏನಾದರೂ ಪ್ರಶ್ನೆ ಕೇಳಿದರೆ ಹಾರಿಕೆಯ ಉತ್ತರ ಕೊಡುತ್ತಿದ್ದರು. ಮದುವೆ ಸಂಬಂಧಗಳಲ್ಲಿ ನನಗೆ ನಂಬಿಕೆ ಇಲ್ಲ ಎನ್ನುತ್ತಿದ್ದರು. ಆದರೆ ಅವರಿಗೆ ಮಗಳೊಬ್ಬರು ಇದ್ದಾರೆ ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಆಕೆಯ ಭಾವಚಿತ್ರದೊಂದಿಗೆ ಆಂಗ್ಲ ಪತ್ರಿಕೆ ಮಿರರ್ ಸುದ್ದಿಯೊಂದನ್ನು ಪ್ರಕಟಿಸಿದೆ.

ಇದುವರೆಗೂ ರಾಮ್ ಗೋಪಾಲ್ ವರ್ಮಾ ತಮ್ಮ ಮದುವೆ, ಹೆಂಡತಿ, ಮಕ್ಕಳ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲ. ತಮ್ಮ ಕುಟುಂಬದ ಬಗ್ಗೆ ಜತನದಿಂದ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದ್ದರು. ಆದರೆ ರಾಮ್ ಗೋಪಾಲ್ ವರ್ಮಾ ಅವರ ಕುಟುಂಬ ಹೈದರಾಬಾದ್ ನಲ್ಲೇ ಇದೆ.

ವರ್ಮಾ ಸಹೋದರಿಯ ಮಗನ ಮದುವೆ ಸಮಾರಂಭದಲ್ಲಿ ಚೂಟಿಯಾಗಿ ಓಡಾಡಿಕೊಂಡಿದ್ದ ಹುಡುಗಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈಕೆ ವರ್ಮಾರ ಮಗಳು ಎಂಬುದು ಜಗಜ್ಜಾಹೀರಾಗಿದೆ. ಮದುವೆಯನ್ನು ಯಾವಾಗಲೂ ವಿರೋಧಿಸುವ ವರ್ಮಾಗೆ ಮಗಳೆ! ಎಂದು ಬಾಲಿವುಡ್ ಮಂದಿ ಹುಬ್ಬೇರಿಸಿದ್ದಾರೆ.

ಇನ್ನೂ ಇಪ್ಪತ್ತರ ಹರೆಯದ ಈಕೆಯ ಹೆಸರು ರೇವತಿ. ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಈಕೆ ಶಸ್ತ್ರವೈದ್ಯೆಯಾಗಬೇಕೆಂದು ಕನಸು ಹೊತ್ತಿದ್ದಾರೆ. ಅಪ್ಪ ವರ್ಮಾರೊಂದಿಗೂ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಮದುವೆ ಸಮಾರಂಭದಲ್ಲಿ ಕ್ಯಾಮೆರಾ ಕಣ್ಣಿಗೆ ಆಕೆ ಬಿದ್ದು ಇದೀಗ ಸುದ್ದಿಯಾಗಿದ್ದಾರೆ.

ಪ್ರಸ್ತುತ ಹೈದರಾಬಾದ್ ನಲ್ಲೇ ಇರುವ ವರ್ಮಾ ಅವರು 'ರಕ್ತ ಚರಿತ್ರ' ಎಂಬ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಈ ಮದುವೆ ಸಮಾರಂಭಕ್ಕೆ ವರ್ಮಾ ಅವರ ಮಾಜಿ ಹೆಂಡತಿ ರತ್ನಶ್ರೀ ಮತ್ತು ಆಕೆಯ ತಾಯಿ ಸೂರ್ಯವತಿ ಸಹಾ ಆಗಮಿಸಿದ್ದದ್ದು ವಿಶೇಷವಾಗಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada