»   » ಕತ್ರಿನಾ ಕೈಫ್, ರಣಬೀರ್ 'ರಾಜ್ ನೀತಿ'

ಕತ್ರಿನಾ ಕೈಫ್, ರಣಬೀರ್ 'ರಾಜ್ ನೀತಿ'

Posted By:
Subscribe to Filmibeat Kannada

ಕತ್ರಿನಾ ಕೈಫ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಚಿತ್ರ 'ರಾಜ್ ನೀತಿ'. ಪ್ರಕಾಶ್ ಝಾ ನಿರ್ದೇಶಿಸುತ್ತಿರುವ ಚಿತ್ರ ನಾಯಕ ನಟ ರಣಬೀರ್ ಕಪೂರ್ಟ.ಈ ಚಿತ್ರದ ಚಿತ್ರೀಕರಣ ಮುಗಿದಿದ್ದು ಸದ್ಯಕ್ಕೆ ನಿರ್ಮಾಣೇತರ ಚಟುವಟಿಕೆಗಳು ನಡೆಯುತ್ತಿವೆ.

ಚಿತ್ರದ ನಿರ್ದೇಶಕ ಮಾತನಾಡುತ್ತಾ, ಇದು ಸಂಪೂರ್ಣ ರಾಜಕೀಯ ಹಿನ್ನೆಲೆಯುಳ್ಳ ಕತೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಚಿತ್ರದಲ್ಲಿ ರಾಜಕೀಯವಷ್ಟೆ ಅಲ್ಲ, ಮನರಂಜನೆಗೆ ಬೇಕಾದ ಎಲ್ಲ ಅಂಶಗಳು ಚಿತ್ರದಲ್ಲಿವೆ ಎಂದಿದ್ದಾರೆ. ಕತ್ರಿನಾ ಅಭಿಮಾನಿಗಳು ಆಕೆಯಿಂದ ಏನನ್ನು ಬಯಸುತ್ತಾರೋ ಅವುಗಳಿಗೆಲ್ಲಾ ಈ ಚಿತ್ರದಲ್ಲಿ ಸ್ಥಾನ ನೀಡಲಾಗಿದೆ ಎಂದರು.

'ರಾಜ್ ನೀತಿ' ಮಲ್ಟಿಸ್ಟಾರರ್ ಚಿತ್ರ ಎನ್ನುವುದಕ್ಕಿಂತಲೂ ಮಲ್ಟಿಯಾಕ್ಟರ್ ಚಿತ್ರ ಎನ್ನುವುದು ಸೂಕ್ತ. ಮೂರು ಗಂಟೆಗಳ ಕಾಲ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಲಿದೆ. ಇದರಲ್ಲಿ ಅಜಯ್ ದೇವಗನ್, ನಾನಾ ಪಾಟೇಕರ್, ಮನೋಜ್ ಬಾಜ್ ಪೇಯಿ, ನಾಸಿರುದ್ದೀನ್ ಶಾ, ಅರ್ಜುನ್ ರಾಮ್ ಪಾಲ್ ಅಭಿನಯಿಸಿದ್ದಾರೆ. ಚಿತ್ರವನ್ನು ಜೂನ್ 4ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ ಎಂದು ಪ್ರಕಾಶ್ ಝಾ ವಿವರ ನೀಡಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada