»   » ಕೇನ್ಸ್ ನಲ್ಲಿ ಸೀರೆ ಉಡುವ ನೀರೆ ನೀನ್ಯಾರೆ

ಕೇನ್ಸ್ ನಲ್ಲಿ ಸೀರೆ ಉಡುವ ನೀರೆ ನೀನ್ಯಾರೆ

Posted By:
Subscribe to Filmibeat Kannada

ಸಹಜ ಸುಂದರಿ ದೀಪಿಕಾ, ಮತ್ತ್ತೆ ಮದುವೆ ಬಗ್ಗೆ ಮಾತಾಡಿದ್ದಾರೆ. ಗೆಳೆಯ ರಣಬೀರ್ ಜೊತೆ ಓಡಾಟ ಶುರುವಾಗಿದ್ದೆ ತಡ ಮದುವೆಗೆ ನಾನು ಸಿದ್ಧ ಎಂದು ಹಲವರು ನಿರ್ಧರಿಸಿದ್ದಂತಿದೆ. ಹಾಗೇನಿಲ್ಲ. ನನಗಿನ್ನೂ 24ರ ಪ್ರಾಯ. ಇಷ್ಟು ಬೇಗ ಯಾಕೆ ಮದುವೆಯಾಗಲಿ ಎಂದು ಮಾಧ್ಯಮ ಮಿತ್ರರಿಗೆ ತಿಳಿ ಹೇಳಿದ್ದಾರೆ.

ಸದ್ಯಕ್ಕಂತೂ ಮದುವೆ ಯೋಚನೆಯಿಲ್ಲ. ಮದುವೆ ನಿಶ್ಚಯವಾದರೆ, ಮೊಟ್ಟಮೊದಲು ನಿಮಗೆ ಸುದ್ದಿ ಮುಟ್ಟಿಸುತ್ತೇನೆ ನನಗೆ ಈಗ ಮದುವೆ ಸಿದ್ಧತೆಗಿಂತ 63 ನೇ ಕೇನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿದ್ಧಳಾಗುವುದು ಮುಖ್ಯ ವಿಷಯ ಎಂದಿದ್ದಾರೆ ದೀಪಿಕಾ. ಮೊಟ್ಟ ಮೊದಲ ಬಾರಿ ಈ ರೀತಿಯ ಉತ್ಸವಕ್ಕೆ ಹೋಗುತ್ತಿದ್ದೇನೆ. ಮೊದಮೊದಲು ಅಲ್ಲಿಗೆ ಹೋಗುವುದರ ಬಗ್ಗೆ ಹಿಂಜರಿಕೆಯಿತ್ತು. ಈಗ ತುಂಬಾ ಉತ್ಸಾಹದಿಂದ ತಯಾರಿ ನಡೆಸಿದ್ದೇನೆ ಎಂದರು.

ಹಿಂದೆಲ್ಲಾ ಕೇನ್ಸ್ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಕೆಟ್ಟ ಅಭಿರುಚಿಯ ದಿರಿಸಿನಿಂದ ಐಶ್ವರ್ಯಾರೈ, ಮಲ್ಲಿಕಾ ಶೆರಾವತ್ ಟೀಕೆಗೆ ಒಳಗಾಗಿದ್ದರು. ಆದರೆ, ದೀಪಿಕಾ ಮಟ್ಟಿಗೆ ಹೇಳುವುದಾದರೆ, ಟೀಕೆಗಳಿಗೆ ಬೆದರದ ಬೆಂಗ್ಳೂರ್ ಬೆಡಗಿ ಯಾವುದಕ್ಕೂ ಕೇರ್ ಮಾಡುವುದಿಲ್ಲ. ಆದರೆ, ಈ ಬಾರಿಯ ದೀಪಿಕಾ ದಿರಿಸಿನಲ್ಲಿ ವಿಶೇಷವಿದೆ. ಖ್ಯಾತ ಡಿಸೈನರ್ ರೋಹಿತ್ ಬಾಲ್ ವಿನ್ಯಾಸದ ಸೀರೆಯನ್ನು ಧರಿಸಿ, ಕೇನ್ಸ್ ಉತ್ಸವದ ರಕ್ತಗಂಬಳಿಯನ್ನು ತುಳಿಯಲು ದೀಪಿಕಾ ನಿರ್ಧರಿಸಿದ್ದಾರೆ.

ಈ ಬಗ್ಗೆ ಪ್ರಶ್ನಿಸಿದಾಗ, ಸೀರೆಗಿಂತ ಮಾದಕವಾದ ಉಡುಗೆ ಮತ್ತೊಂದಿಲ್ಲ. ಪರದೇಶಿಗಳಿಗೆ ಸೀರೆಯ ಬಗ್ಗೆ ಸಹಜ ಕುತೂಹಲ ಇದ್ದೇ ಇದೆ. ನಮ್ಮತನ ಮೆರೆಯಲು ಇದು ಸದವಾಕಾಶ ಎಂದರು. ಸೀರೆ ಉಡಲು ಬರುತ್ತಾ ಎಂದರೆ, ಹೋ, ಅದರಲ್ಲಿ ಎಂಥಾ ಕಷ್ಟ ಇದೆ. 30 ಸೆಕೆಂಡ್ ಗಳಲ್ಲಿ ಸೀರೆ ಉಡಬಲ್ಲೆ. ಸೀರೆ ತುಂಬಾ ಕಂಫರ್ಟ್ ಆದ ದಿರಿಸು ಎಂದು ದೀಪಿಕಾ ಮುಗುಳ್ನಕ್ಕರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada