For Quick Alerts
  ALLOW NOTIFICATIONS  
  For Daily Alerts

  ಕಾಳಿ ದೇವತೆ ಅವತಾರದಲ್ಲಿ ಪಾಪ್ ದೇವತೆ ಶಕೀರಾ

  By Rajendra
  |

  ಗ್ರಾಮಿ ಪ್ರಶಸ್ತಿ ಪುರಸ್ಕೃತ ಕೊಲಂಬಿಯಾ ಗಾಯಕಿ ಹಾಗೂ ಗೀತಸಾಹಿತಿ ಶಕೀರಾ ಬಾಲಿವುಡ್‌ಗೆ ದಾಂಗುಡಿಯಿಟ್ಟಿದ್ದಾರೆ. ಆಕೆ ಕಾಳಿಯ ಅವತಾರದಲ್ಲಿ ಕಾಣಿಸಲಿದ್ದು Kaali-The Warrior Goddess ಎಂಬ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಶಕೀರಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವನ್ನು ಹೈಗ್ರೌಂಡ್ ಎಂಟರ್‌ಟೈನ್ ಮೆಂಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕರಣ್ ಅರೋರಾ ನಿರ್ಮಿಸುತ್ತಿದ್ದಾರೆ.

  ಎರಡು ಗಂಟೆಗಳ ಕಾಲವಧಿಯ ತ್ರಿಡಿ ಚಿತ್ರ ಇದಾಗಿದೆ. ಲಂಡನ್ ಅಥವಾ ಪೂರ್ವ ಯೂರೋಪ್ ನಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನುತ್ತಾರೆ ನಿರ್ಮಾಪಕ ಅರೋರಾ. ಶಕೀರಾ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಆದರೆ ಕಾಗದ ಪತ್ರಗಳಿಗೆ ಇನ್ನೂ ಸಹಿ ಹಾಕಿಲ್ಲ ಎಂದು ಅವರು ತಿಳಿಸಿದ್ದಾರೆ. ಸದ್ಯಕ್ಕೆ ಚಿತ್ರದ ಬಜೆಟ್ ಬಗ್ಗೆ ಚರ್ಚೆ ನಡೆಯುತ್ತಿದೆ.

  ಕಾಳಿ ಪಾತ್ರಕ್ಕಾಗಿ ಶಕೀರಾ ಅವರನ್ನು ಎರಡು ಕಾರಣಗಳಿಗಾಗಿ ಆಯ್ಕೆ ಮಾಡಲಾಗಿದೆಯಂತೆ; ಒಂದು ಈ ಚಿತ್ರಕ್ಕೆ ಅಂತಾರಾಷ್ಟ್ರೀಯ ತಾರೆ ಬೇಕಾಗಿದ್ದರು. ಎರಡನೆಯದಾಗಿ ಕಾಳಿ ಪಾತ್ರಕ್ಕೆ ಕೃಷ್ಣವರ್ಣದ ನಟಿ ಬೇಕಾಗಿತ್ತು. ಈ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಶಕೀರಾ ಅವರನ್ನು ಆಯ್ಕೆ ಮಾಡಿದ್ದೇವೆ ಎನ್ನುತ್ತಾರೆ ಅರೋರಾ.

  ಫಿಫಾ 2010ರ ವರ್ಲ್ಡ್ ಕಪ್ ನಲ್ಲಿ ಶಕೀರಾ ಕುಣಿಸು ಕುಪ್ಪಳಿಸಿದ "ವಕಾ ವಕಾ..." ಹಾಡು ತ್ತಿದ್ದರೆ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಿದರು. ಆ ಹಾಡು ಸಾಕಷ್ಟು ಜನಪ್ರಿಯವಾಗಿತ್ತು. ಈ ಹಾಡಿನ ಮೂಲಕ ಶಕೀರಾ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಮನೆಮಾತಾಗಿದ್ದರು. ಈಕೆಯನ್ನು ರತಿ ಅವತಾರದಲ್ಲಿ ಕಂಡವರು ಈಗ 'ಕಾಳಿ' ಅವತಾರದಲ್ಲಿ ನೋಡುವಂತಾಗಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X