»   » ಮಗುವಿನ ನಿರೀಕ್ಷೆಯಲ್ಲಿ ಐಶ್ವರ್ಯ ರೈ ಬಚ್ಚನ್

ಮಗುವಿನ ನಿರೀಕ್ಷೆಯಲ್ಲಿ ಐಶ್ವರ್ಯ ರೈ ಬಚ್ಚನ್

Posted By:
Subscribe to Filmibeat Kannada

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅಪ್ಪನಾಗುವ ಕನಸು ಕೈಗೂಡುವ ಸಮಯ ಹತ್ತಿರವಾಗಿದೆ.ಐಶ್ವರ್ಯ ರೈ ಬಚ್ಚನ್ ಈಗ ಗರ್ಭಿಣಿ ಎಂಬ ವಿಚಾರ ಬಾಲಿವುಡ್ ನಲ್ಲಿ ಹಲವರ ಉಬ್ಬೇರಿಸಿದೆ. ಈ ಹಿಂದೆಯೂ ಐಶ್ವರ್ಯ ರೈ ಗರ್ಭಿಣಿ ಎಂಬ ಸಾಲು ಸಾಲು ಸುದ್ದಿಗಳು ಬಂದಿದ್ದ್ದವು. ಆದರೆ ಅದೆಲ್ಲಾ ಸುಳ್ಳು ಎಂಬುದು ಕೆಲ ದಿನಗಳ ಬಳಿಕ ಗೊತ್ತಾಗಿ ಹೋಗಿತ್ತು.

ಐಶ್ವರ್ಯ ರೈ ಸಡಿಲ ಉಡುಪುಗಳಲ್ಲಿ ಕಾಣಿಸಿಕೊಳ್ಳುತ್ತಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ. ಮುಂಚಿನಂತೆ ಈಗ ಆಕೆ ಬಿಗಿ ಉಡುಪುಗಳನ್ನು ತೊಡುತ್ತಿಲ್ಲ. ಕೇವಲ ಇದಿಷ್ಟೇ ಅಲ್ಲ ಐಶ್ವರ್ಯ ರೈ ಹೊಟ್ಟೆ ಕೂಡ ಸ್ವಲ್ಪ ಮುಂದೆ ಬಂದಿದ್ದು ಆಕೆ ಗರ್ಭಿಣಿ ಎಂಬ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿವೆ.

ಒಟ್ಟಿನಲ್ಲಿ ಬಾಲಿವುಡ್ ವಲಯದಲ್ಲಿ ಈ ರೀತಿಯ ಸುದ್ದಿಗಳಿಗೇನು ಬರವಿಲ್ಲ.ಕೂಸು ಹುಟ್ಟುವುದಕ್ಕೂ ಮುನ್ನ ಕುಲಾವಿ ಹೊಲೆಯುವವರೆ ಹೆಚ್ಚು.ಐಶ್ವರ್ಯ ರೈ ತಾಯಿಯಾಗುವ ಬಗ್ಗೆ ಪುಂಕಾನು ಪುಂಕ ಸುದ್ದಿಗಳು ಈಗಾಗಲೆ ಬಂದಿವೆ. ಅವುಗಳಲ್ಲಿ ಇದೂ ಒಂದು ಸುದ್ದಿಯಾಗದಿರಲಿ. ಐಶ್ವರ್ಯ ರೈ ಬೇಗನೆ ಅಮ್ಮನಾಗಿ ಅಭಿಷೇಕ್ ಆಸೆಯನ್ನು ದೋಸೆ ಮಾಡದೆ ಆದಷ್ಟು ಬೇಗನೆ ಈಡೇರಿಸಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada