»   »  ಇಪ್ಪತ್ತೈದರ ಹರಯಕ್ಕೆ ಕಾಲಿಟ್ಟ ಕತ್ರಿನಾ ಕೈಫ್!

ಇಪ್ಪತ್ತೈದರ ಹರಯಕ್ಕೆ ಕಾಲಿಟ್ಟ ಕತ್ರಿನಾ ಕೈಫ್!

Subscribe to Filmibeat Kannada

ಬಾಲಿವುಡ್ ತಾರೆ ಕತ್ರಿನಾ ಕೈಫ್ ಗುರುವಾರ (ಜು.16) 25ರ ಹರಯಕ್ಕೆ ಕಾಲಿಟ್ಟರು. ಬಾಲಿವುಡ್ ನಲ್ಲಿ ಕತ್ರಿನಾ ಅವರದ್ದು ಒಂದು ರೀತಿ ಬಂಗಾರದ ಪಾದವಿದ್ದಂತೆ! ಆಕೆ ಕಣ್ಣಿಗೆ ಬಿದ್ದರೆ ಸಾಕು ...ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆಯಲ್ಲಿ ಅಪಾರ ವಿಶ್ವಾಸವನ್ನು ಬಾಲಿವುಡ್ ಚಿತ್ರೋದ್ಯಮ ಇಟ್ಟಿದೆ. ಸಾಲದಕ್ಕೆ ಅವರ ನಂಬಿಕೆಗಳೂ ನಿಜವಾಗುತ್ತಿವೆ.

ಈ ಕಾರಣಕ್ಕಾಗಿ ಕತ್ರಿನಾ ಕಾಲ್ ಶೀಟ್ ನಿರ್ಮಾಪಕರ ಪಾಲಿಗೆ ಹಾಟ್ ಕೇಕ್. ಗುರುವಾರ ತಮ್ಮ ಹುಟ್ಟುಹಬ್ಬವನ್ನು ಲಂಡನ್ ನಲ್ಲಿ ಕತ್ರಿನಾ ಆಚರಿಸಿಕೊಂಡರು. ಕಳೆದ ವರ್ಷ ಇದೇ ಸಮಯಕ್ಕೆ ಸರಿಯಾಗಿ ಹುಟ್ಟುಹಬ್ಬದಲ್ಲಿ ಸಲ್ಮಾನ್, ಶಾರುಖ್ ನಡುವಿನ ಜಗಳದ ನೆನಪು ಇನ್ನೂ ಮಾಸಿಲ್ಲ. ಆ ನೆನಪು ಕತ್ರಿನಾರನ್ನು ಇನ್ನೂ ಕಾಡುತ್ತಲೇ ಇದೆ.

ಈ ಬಾರಿಯ ಹುಟ್ಟುಹಬ್ಬಕ್ಕೆ ಸಲ್ಮಾನ್ ರನ್ನು ಕತ್ರಿನಾ ಆಹ್ವಾನಿಸಿಲ್ಲ. ಕತ್ರಿನಾ ವಿವಾದಗಳಿಂದ ಆದಷ್ಟು ದೂರ ಇರಲು ಬಯಸುತ್ತಿದ್ದಾರೆ.ತನ್ನ ದೃಷ್ಟಿಯಲ್ಲಾ ಸಿನಿಮಾಗಳ ಮೇಲೆ ಕೇಂದ್ರೀಕರಿಸಿದ್ದಾರೆ. ಹಾಗಿದ್ದೂ ವಿವಾದಗಳು, ಪ್ರೇಮ ವ್ಯವಹಾರಗಳು, ಗಾಳಿಸುದ್ದಿಗಳು ಆಕೆಯನ್ನು ಬಿಟ್ಟಿಲ್ಲ. ಆದರೆ ಕತ್ರಿನಾ ತನ್ನ ಮದುವೆಗೆ ಗ್ರೀನ್ ಸಿಗ್ನಲ್ ಯಾವಾಗ ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಸಲ್ಲು ಇದ್ದಾನೆ. ಈ ವರ್ಷವಾದರೂ ಸಲ್ಲು ಕನಸು ನೆರವೇರುತ್ತದಾ ಕಾದು ನೋಡಬೇಕು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada