»   » ಸುನೀಲ್ ದತ್ ಗೆ ಅಂಚೆ ಚೀಟಿ ಗೌರವ

ಸುನೀಲ್ ದತ್ ಗೆ ಅಂಚೆ ಚೀಟಿ ಗೌರವ

Posted By:
Subscribe to Filmibeat Kannada

ಹಿಂದಿ ಚಿತ್ರರಂಗದ ಸಭ್ಯನಟ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಸುನೀಲ್ ದತ್ ಅವರು ಕೇವಲ ನಟರಷ್ಟೇ ಅಲ್ಲ, ಸಂಸದರಾಗಿ, ಪತಿಯಾಗಿ, ಒಬ್ಬ ತಂದೆಯಾಗಿ ಸಮರ್ಥವಾದ ಜೀವನ ನಡೆಸಿದವರು. ಅಡ್ಡ ದಾರಿ ಹಿಡಿದಿದ್ದ ಮಗ ಸಂಜಯ್ ನನ್ನು ಸರಿದಾರಿಗೆ ತರುವಲ್ಲಿ ಸುನೀಲ್ ಪಟ್ಟ ಪಾಡು ಹಿರಿದು. ಪ್ರೀತಿಯ ಪತ್ನಿ ನರ್ಗೀಸ್ ಸಾವು ಕೂಡ ಅವರ ಧೃತಿಕೆಡಿಸಿತ್ತು ಕೂಡ. ಇಂತಹ ಮೇರು ವ್ಯಕ್ತಿಯ ಸ್ಮರಣಾರ್ಥ ಮರಣೋತ್ತರ ಅಂಚೆಚೀಟಿ ಬಿಡುಗಡೆಗೊಳಿಸುವುದು ಸೂಕ್ತ ಎಂದು ಇಂಡಿಯನ್ ಮೋಷನ್ ಪಿಕ್ಚರ್ ಪ್ರಡ್ಯೂಸರ್ ಅಸೋಸಿಯೇಷನ್(IMPPA) ನಿರ್ಧರಿಸಿ, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಪತ್ನಿ ನರ್ಗೀಸ್ ಕ್ಯಾನ್ಸರ್ ಪೀಡಿತಳಾಗಿ ದುರಂತ ಸಾವು ಕಂಡ ನಂತರ, ಕ್ಯಾನ್ಸರ್ ಪೀಡಿತರ ಶ್ರಯೋಭಿವೃದ್ಧಿಗಾಗಿ ಶ್ರಮಿಸಲು ತೊಡಗಿದ ಸುನೀಲ್ ದತ್, ಸಮಾಜ ಸೇವಕರಾಗಿ ಹಲವರಿಗೆ ಪರಿಚಿತರು. ಸರಳ ಸ್ವಭಾವದ ಅವರಿಗೆ ಸೂಕ್ತ ಮನ್ನಣೆ ದೊರಕಿಸಿಕೊಡುವುದು ನಮ್ಮ ಉದ್ದೇಶ ಎಂದು ಐಎಂಪಿಪಿಎ ಹೇಳಿದೆ.

ಮದರ್ ಇಂಡಿಯಾದಲ್ಲಿ ನರ್ಗೀಸ್ ಗೆ ಮಗನಾಗಿ ನಟಿಸಿದ್ದ ಸುನೀಲ್ ಮುಂದೆ ಅವರನ್ನೇ ಮದುವೆಯಾಗಿ ಸುಖಿ ಜೀವನ ಕಂಡವರು. ಸಂಜಯ್ ಅಲ್ಲದೆ, ನಮ್ರತಾ ಹಾಗೂ ಪ್ರಿಯಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ದಂಪತಿಗಳು ಪಡೆಡರು. ಚಿತ್ರ ಜೀವನದಲ್ಲಿ ಮದರ್ ಇಂಡಿಯಾ ಅಲ್ಲದೆ ಸುಜಾತಾ, ಗುಮ್ರಾ, ವಕ್ತ್, ಹಮ್ ರಾಜ್, ಮಿಲನ್, ಪಡೋಸನ್ ಚಿತ್ರಗಳಲ್ಲಿ ಮಿಂಚಿದರು.

ರಾಕಿ ಚಿತ್ರದ ಮೂಲಕ ಪುತ್ರ ಸಂಜಯ್ ನನ್ನು ಪರಿಚಯಿಸಿದ್ದಲ್ಲದೆ, ಸಂಜಯ್ ಅವರ ಬಹುಯಶಸ್ವಿ ಚಿತ್ರ ಮುನ್ನ ಭಾಯಿ ಎಂಬಿಬಿಎಸ್ ಚಿತ್ರದಲ್ಲಿ ಸಂಜಯ್ ಅವರ ಅಪ್ಪನ ಪಾತ್ರ ಮಾಡಿ ಜನಮೆಚ್ಚುಗೆ ಗಳಿಸಿದರು. ಚಲನಚಿತ್ರರಂಗಕ್ಕೆ ಕಾಲಿರಿಸುವ ಮುನ್ನ ಸುನೀಲ್ , ರೇಡಿಯೋ ಸಿಲೋನ್ ಮೂಲಕ ಮನೆಮಾತಾಗಿದ್ದರು ಎಂಬುದು ವಿಶೇಷ ಸಂಗತಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada