»   »  ಗಜಿನಿಗಾಗಿ ಉಕ್ಕಿನ ಮನುಷ್ಯನಾದ ಅಮೀರ

ಗಜಿನಿಗಾಗಿ ಉಕ್ಕಿನ ಮನುಷ್ಯನಾದ ಅಮೀರ

Posted By:
Subscribe to Filmibeat Kannada

ಅಂದುಕೊಂಡಿದ್ದನ್ನು ಸಾಧಿಸಬೇಕು ಎಂಬ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಮಾತಿಗೆ ನಾನು ತಲೆ ಬಾಗುತ್ತೇನೆ ಎನ್ನುತ್ತ್ತಿದ್ದಾರೆ ಅಮೀರ್ ಖಾನ್. ಬಾಲಿವುಡ್ ರಂಗಿನ ಪ್ರಪಂಚದಲ್ಲಿ ಅಮೀರ್ ಖಾನ್ ನಟನೆಯ 'ಗಜನಿ' ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ನಿರ್ದೇಶಕ ಮುರುಗದಾಸ್ ಹಾಗೂ ನಾಯಕಿ ಆಸಿನ್ ಎಂಬ ವಿಚಾರ ಗೊತ್ತೇ ಇದೆ.

'ಗಜನಿ' ಪಾತ್ರಕ್ಕಾಗಿ ತೆಳ್ಳಗಿರುವ ಅಮೀರ್ ಖಾನ್ ವಜ್ರ ದೇಹಿಯಾಗಲು ಸಾಕಷ್ಟು ಶ್ರಮಿಸಿದ್ದಾರೆ. ಸರಿಸುಮಾರು 13 ತಿಂಗಳ ಕಾಲ ದೇಹವನ್ನು ದಂಡಿಸಿ ಉಕ್ಕಿನಂತೆ ಬಿರುಸಾಗಿಸಿದ್ದಾರೆ. ಎರಡು ವರ್ಷಗಳ ಹಿಂದೆ ತಮಿಳಿನ 'ಗಜಿನಿ' ಸೀಡಿಯನ್ನು ತರಿಸಿ ತನ್ನ ಅಂಗಸಾಧನೆಯನ್ನು ಶುರುವಚ್ಚಿಕೊಂಡರಂತೆ. ತನ್ನ ವ್ಯಾಯಾಮ ಶಿಕ್ಷಕ ಸತ್ಯಜಿತ್ ಚೌರಾಸಿಯಾಗೆ ಆ ಸೀಡಿಯನ್ನು ತೋರಿಸಿ ಇದಕ್ಕಿಂತಲೂ ಜಬರುದಸ್ತಾದ ದೇಹಾಕೃತಿ ತನಗೆ ಬೇಕು, ಅದಕ್ಕಾಗಿ ಎಷ್ಟೇ ಕಷ್ಟವಾದರೂ ಸಹಿಸಿಕೊಳ್ಳುತ್ತೇನೆ ಎಂದರಂತೆ.

ಹೃತಿಕ್ ರೋಷನ್, ಸೈಫ್ ಆಲೀಖಾನ್, ರಾಣಿ ಮುಖರ್ಜಿ, ಇಷಾ ಡಿಯೋಲ್, ಅಜಯ್ ದೇವಗನ್, ಜಾಯೇದ್ ಖಾನ್ ಮುಂತಾದ ಬಾಲಿವುಡ್ ಘಟಗಳಿಗೆ ಸತ್ಯ ಜಿತ್ ವ್ಯಾಯಾಮ ತರಬೇತುದಾರ. ಅಮೀರ್ ವ್ಯಾಯಾಮ ಪ್ರಾರಂಭಿಸುವುದಕ್ಕೂ ಮುನ್ನ 80 ಕೆಜಿ ತೂಕ ಇದ್ದರಂತೆ. 12 ಕೆಜಿ ತೂಕ ಇಳಿಸುವುದರೊಂದಿಗೆ ಅಮೀರ್ ದೇಹಕ್ಕೆ ಉಕ್ಕಿನ ಆಕೃತಿಯನ್ನು ತಂದುಕೊಡಲು ಸತ್ಯಜಿತ್ ಯಶಸ್ವಿಯಾದರು. ಪ್ರಸ್ತುತ ಅಮೀರ್ ದೇಹಾಕೃತಿಯ ಬಗ್ಗೆ ಬಾಲಿವುಡ್ ನಲ್ಲಿ ಇನ್ನಿಲ್ಲದಂತೆ ಚರ್ಚೆ ನಡೆಯುತ್ತಿದೆ. ಪ್ರೇಕ್ಷಕರು ಕುತೂಹಲದಿಂದ ಎದುರು ನೋಡುತ್ತಿರುವ 'ಗಜಿನಿ ' ಡಿಸೆಂಬರ್ 25 ರಂದು ತೆರೆ ಕಾಣಲಿದೆ. ಗಜಿನಿ ಚಿತ್ರ 90 ಕೋಟಿ ರೂಗಳಿಗೆ ಮಾರಾಟವಾಗುರುವ ಬಗ್ಗೆ ಬಾಲಿವುಡ್ ವಲಯದಲ್ಲಿ ಗುಲ್ಲೆದ್ದಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada