For Quick Alerts
  ALLOW NOTIFICATIONS  
  For Daily Alerts

  ಮಲ್ಲಿಕಾ ಶೆರಾವತ್ ಮಾಡಿದಳು ಬಿಸಿಬಿಸಿ ಜಿಲೇಬಿ

  By Rajendra
  |

  ಬಾಲಿವುಡ್ ತಾರೆ ಮಲ್ಲಿಕಾ ಶೆರಾವತ್ ಲೇಟೆಸ್ಟ್ ಐಟಂ ಸಾಂಗ್ 'ಡಬಲ್ ಧಮಾಲ್' ಚಿತ್ರದ'ಜಿಲೇಬಿ ಬಾಯ್'. ಇತ್ತೀಚೆಗೆ ಈ ಚಿತ್ರದ ಪ್ರಚಾರ ಕಾರ್ಯ ಮುಂಬೈನಲ್ಲಿ ಬಲು ಜೋರಾಗಿ ನಡೆಯಿತು. ಕೇವಲ ಮಾತಿನಲ್ಲಷ್ಟೆ ಅಲ್ಲದೆ ಕೈಯಾರೆ ಬಿಸಿಬಿಸಿ ಜಿಲೇಬಿಗಳನ್ನೂ ಮಾಡಿ ಸವಿದರು ಮಲ್ಲಿಕಾ.

  ಇಷ್ಟಕ್ಕೂ ಯಾರಿಗಾಗಿ ಈ ಜಿಲೇಬಿ ಎಂದು ಕೇಳಲಾಗಿ, ಆಕೆ ಉತ್ತರ ಕೇಳಿ ನೆರೆದಿದ್ದವರು ಬೆಚ್ಚಿಬಿದ್ದರು. ಆಕೆ ಹೇಳಿದ ಹೆಸರು ಸಲ್ಮಾನ್ ಖಾನ್. ಸಲ್ಲುಗೆ ಯಾಕೆ ಜಿಲೇಬಿ ಮಾಡಿಕೊಡುತ್ತಿದ್ದಾರೋ ಎಂಬುದನ್ನೂ ಹೇಳಿದ್ದರೆ ಚೆನ್ನಾಗಿರುತ್ತಿತ್ತು.ಆದರೆ ಆಕೆ ಹೇಳಲಿಲ್ಲ.

  ಇನ್ನೂ ಯಾರು ಯಾರಿಗೆ ಹಂಚುತ್ತೀರಾ ಜಿಲೇಬಿ ಎಂದರೆ, ಬರಾಕ್ ಒಬಾಮಾ ಸೇರಿದಂತೆ ಭಾರತದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಜಿ ಅವರಿಗೂ ಕೊಡುವುದಾಗಿ ಹೇಳಿದ್ದಾರೆ. ಆದರೆ ಈ ವಯಸ್ಸಿನಲ್ಲಿ ಅವರು ಜಿಲೇಬಿ ತಿಂತಾರಾ ಅಂತೀರಾ!? (ಏಜೆನ್ಸೀಸ್)

  English summary
  Bollywood actress Mallika Sherawat’s latest item number ’Jalebi Bai’ from her forthcoming film ’Double Dhamaal’ is creating waves all over. The sexy siren, while promoting the flick in Mumbai on Tuesday, she not only talked about the chartbuster, but even made jalebis to promote it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X