»   » ಕನ್ನಡದ ತ್ರಿ ಇಡಿಯಟ್ಸ್ ಗೆ ಪುನೀತ್, ಸುದೀಪ್!

ಕನ್ನಡದ ತ್ರಿ ಇಡಿಯಟ್ಸ್ ಗೆ ಪುನೀತ್, ಸುದೀಪ್!

Subscribe to Filmibeat Kannada

ಬಾಕ್ಸಾಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ಬರೆದ 'ತ್ರಿ ಇಡಿಯಟ್ಸ್' ಚಿತ್ರ ಕನ್ನಡಕ್ಕೆ ರೀಮೇಕ್ ಆಗಲಿದೆಯೇ? ಒಂದು ಮೂಲದ ಪ್ರಕಾರ 'ತ್ರಿ ಇಡಿಯಟ್ಸ್' ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ. ಪುನೀತ್ ಅಥವಾ ಸುದೀಪ್ ನಾಯಕ ನಟನಾಗಿ 'ತ್ರಿ ಇಡಿಯಟ್ಸ್' ಚಿತ್ರ ಕನ್ನಡದಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.

ಈಗಾಗಲೆ ಜೆಮಿನಿ ಫಿಲ್ಮ್ ಸರ್ಕ್ಯೂಟ್ ಈ ಚಿತ್ರದ ದಕ್ಷಿಣ ಭಾರತದ ರೀಮೇಕ್ ಹಕ್ಕುಗಳನ್ನುತನ್ನದಾಗಿಸಿಕೊಂಡಿದೆ. ಅಮೀರ್ ಸ್ಥಾನವನ್ನು ಕನ್ನಡದಲ್ಲಿ ಪುನೀತ್ ಅಥವಾ ಸುದೀಪ್ ತುಂಬವ ಸಾಧ್ಯತೆ ಇದೆ. ತೆಲುಗು ಮತ್ತು ತಮಿಳಿನಲ್ಲಿ ಅಮೀರ್ ಸ್ಥಾನವನ್ನು ಪವನ್ ಕಲ್ಯಾಣ್ ಮತ್ತು ಸೂರ್ಯ ತುಂಬಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಹಿಂದೆ 'ಮುನ್ನಾಭಾಯ್ ಎಂಬಿಬಿಎಸ್' ಚಿತ್ರದ ರೀಮೇಕ್ ಹಕ್ಕುಗಳನ್ನು ಜೆಮಿನಿ ಫಿಲ್ಮ್ ಸರ್ಕ್ಯೂಟ್ ಪಡೆದುಕೊಂಡಿತ್ತ್ತು. ಈ ಚಿತ್ರ ಕನ್ನಡದಲ್ಲಿ 'ಉಪ್ಪಿದಾದ ಎಂಬಿಬಿಎಸ್'(), ತಮಿಳಿನಲ್ಲಿ 'ವಸೂಲ್ ರಾಜಾ ಎಂಬಿಬಿಎಸ್' (ಕಮಲ ಹಾಸನ್ )ಹಾಗೂ ತೆಲುಗಿನಲ್ಲಿ 'ಶಂಕರ್ ದಾದಾ ಎಂಬಿಬಿಎಸ್'(ಚಿರಂಜೀವಿ) ಎಂದಾಗಿತ್ತು. ತೆಲುಗು, ತಮಿಳಿನಲ್ಲಿ ಚಿತ್ರ ಯಶಸ್ವಿಯಾಗಿತ್ತು. ಆದರೆ ಕನ್ನಡಲ್ಲಿ ಪರ್ವಾಗಿಲ್ಲ ಅನ್ನಿಸಿಕೊಂಡಿತ್ತು.

ಚೇತನ್ ಭಗತ್ ಅವರ ಜನಪ್ರಿಯ ಕಾದಂಬರಿ 'Five Point Someone' ಆಧಾರವಾಗಿ 'ತ್ರಿ ಇಡಿಯಟ್ಸ್' ಚಿತ್ರವನ್ನು ತೆರೆಗೆ ತರಲಾಗಿದೆ. ರಾಜ್ ಕುಮಾರ್ ಹಿರಾನಿ ನಿರ್ದೇಶನದ ಚಿತ್ರಕ್ಕೆ ವಿಧು ವಿನೋದ್ ಚೋಪ್ರಾ ನಿರ್ಮಾಪಕರು. ವಿಶ್ವದಾದ್ಯಂತ ಈ ಚಿತ್ರ 43 ದಶಲಕ್ಷ ಫೌಂಡ್ ಗಳನ್ನು ಗಳಿಸಿದೆ. ಬಾಲಿವುಡ್ ನಲ್ಲಿ ದಾಖಲೆ ಬರೆದ ತ್ರಿ ಇಡಿಯಟ್ಸ್ ಹೊಸ ಇತಿಹಾಸ ನಿರ್ಮಿಸಿದೆ.

ಚಿತ್ರಕ್ಕೆ ಕನ್ನಡದಲ್ಲಿ ಮೂರು ಮೂರ್ಖರು, ಮೂರು ಹೆಡ್ಡರು, ಮೂರು ಅವಿವೇವಿಕಗಳು ಎಂದು ಹೆಸರಿಡುವ ಬಗ್ಗೆ ಚಿಂತನೆ ನಡೆದಿದೆ. ಆದರೆ ಯಾವುದೂ ಇನ್ನೂ ಅಂತಿಮವಾಗಿಲ್ಲ. ಕಾಲವೇ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿದೆ.ಸದ್ಯಕ್ಕೆ ಗಾಂಧಿನಗರದಲ್ಲಿ 'ತ್ರಿ ಇಡಿಯಟ್ಸ್' ಹೊಸ ಸಂಚಲನ ಮೂಡಿಸಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada