»   » ಗಿಮಿಕ್ ಗಳ ರಾಜ ವರ್ಮಾಗೆ ಕಿಕ್

ಗಿಮಿಕ್ ಗಳ ರಾಜ ವರ್ಮಾಗೆ ಕಿಕ್

Posted By:
Subscribe to Filmibeat Kannada

ಫೂಂಕ್ ಎಂಬ ಚಿತ್ರ ನಿರ್ಮಿಸಿ, 'ಇದು ಅತಿ ಭಯಾನಕ ಚಿತ್ರ, ಚಿತ್ರಮಂದಿರದಲ್ಲಿ ಒಬ್ಬರೇ ಯಾರಾದರೂ ಕೂತು ಪೂರ್ತಿ ಚಿತ್ರ ವೀಕ್ಷಿಸಿದರೆ 5 ಲಕ್ಷ ರೂ ಬಹುಮಾನ'ನೀಡುವುದಾಗಿ ರಾಮ್ ಗೋಪಾಲ್ ವರ್ಮಾ ಘೋಷಿಸಿದ್ದರು. ಈ ಸವಾಲನ್ನು ಸ್ವೀಕರಿಸಿದ ಕೊಡಗಿನ ಕಲಿ ಪವಿನ್ ,ಬೆಂಗಳೂರಿನ ಇನೋಕ್ಸ್  ಚಿತ್ರಮಂದಿರದಲ್ಲಿ ಒಬ್ಬರೇ ಕೂತು ಸಿನಿಮಾ ನೋಡಿ ಸಾಧನೆ ಮೆರೆದು, ಆಮೇಲೆ ಬಹುಮಾನ ನೀಡದೆ ವರ್ಮಾ ಕೊಟ್ಟ ಮಾತು ತಪ್ಪಿದ್ದು ಈಗ ಇತಿಹಾಸ. ಈಗ ವರ್ಮಾರನ್ನು ಇದೇ ಇಕ್ಕಟ್ಟಿಗೆ ದೂಡಲು, ಬಾಲಿವುಡ್ ನ ಚಿತ್ರ ನಿರ್ದೇಶಕರೊಬ್ಬರು ತಯಾರಾಗಿದ್ದಾರೆ.

ರೋಕ್ (ROKKK)ಎಂಬ ಭಯಾನಕ ಚಿತ್ರ ನಿರ್ದೇಶಿಸಿರುವ ರಾಜೇಶ್ ರಣ್ ಶಿಂಗೆ ಅವರು, ವರ್ಮಾಗೆ ಮುಕ್ತ ಆಹ್ವಾನ ನೀಡಿದ್ದಾರೆ. ನೀವು ನಮ್ಮ ಚಿತ್ರವನ್ನು ಒಬ್ಬರೇ ಕೂತು ನೋಡಿ 5 ಲಕ್ಷ ಗೆಲ್ಲಿ. ನಮ್ಮ ಚಿತ್ರ ಫೂಂಕ್ ಗಿಂತ ಭಯಾನಕವಾಗಿದೆ ಎಂದು ಸವಾಲು ಹಾಕಿದ್ದಾರೆ. ಉದೀತಾ ಗೋಸ್ವಾಮಿ, ತನುಶ್ರೀ ದತ್ತಾ ಜೊತೆಗೆ ಶಾದ್ ರಾಂಧ್ವಾ ಚಿತ್ರದಲ್ಲಿದ್ದಾರೆ.

ಆದರೆ, ವರ್ಮಾ ಅವರ ಚಿತ್ರಜೀವನದ ಇತಿಹಾಸದಲ್ಲೇ ಎಂದೂ ಯಾರಿಗೂ ತಲೆ ಬಾಗಿದ್ದು ಉದಾಹರಣೆಗಳಿಲ್ಲ. ಚಿತ್ರ ಗೆಲ್ಲಲ್ಲಿ, ಬಿಡಲಿ ತಮ್ಮ ಫ್ಯಾಕ್ಟರಿಯಿಂದ ಕಾಲಕಾಲಕ್ಕೆ ಸಿನಿಮಾಗಳನ್ನು ಪ್ರೇಕ್ಷರೆಡೆಗೆ ತಳ್ಳುತ್ತಿರುತ್ತಾರೆ. ಅಂದ ಹಾಗೆ, ಫೂಂಕ್ ಚಿತ್ರದ ಎರಡನೇ ಭಾಗ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದ್ದು, ಅದರಲ್ಲೂ ಕನ್ನಡ ನಟ ಸುದೀಪ್ ಪ್ರಧಾನ ಭೂಮಿಕೆಯಲ್ಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada