»   » ಶಿಲ್ಪಾ ಶೆಟ್ಟಿ ಯೂರೋಪ್ ನಲ್ಲಿ ಎರಡನೆ ಹನಿಮೂನ್!

ಶಿಲ್ಪಾ ಶೆಟ್ಟಿ ಯೂರೋಪ್ ನಲ್ಲಿ ಎರಡನೆ ಹನಿಮೂನ್!

Posted By:
Subscribe to Filmibeat Kannada

ಕರಾವಳಿ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಎರಡನೆ ಬಾರಿಗೆ ಮಧುಚಂದ್ರ ಆಚರಿಸಿಕೊಳ್ಳಲು ತನ್ನ ಪತಿ ರಾಜ್ ಕುಂದ್ರ ಜೊತೆ ಯೂರೋಪ್ ಗೆ ಹಾರಲಿದ್ದಾರೆ. ಮದುವೆಯಾದ ಆರು ತಿಂಗಳ ಬಳಿಕ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರ ಎರಡನೆ ಹನಿಮೂನ್ ಗೆ ಸಿದ್ಧತೆ ನಡೆಸಿದ್ದಾರೆ.

ಈ ಹಿಂದೆ ತಮ್ಮ ಚೊಚ್ಚಲ ಮಧುಚಂದ್ರವನ್ನು ಶಿಲ್ಪಾ ಶೆಟ್ಟಿ ದಂಪತಿಗಳು ಬಹಮಾಸ್ ನಲ್ಲಿ ಸವಿದಿದ್ದರು. ಈಗ ಎರಡನೆ ಬಾರಿಗೆ ಶಿಲ್ಪಾ ಮತ್ತು ಕುಂದ್ರಾ ಮಧುಚಂದ್ರಕೆ ತೆರಳುತ್ತಿದ್ದಾರೆ. ಜುಲೈ ಎರಡನೇ ವಾರದಲ್ಲಿ ಒಂದೂವರೆ ತಿಂಗಳು ಯೂರೋಪ್ ನಲ್ಲಿ ಜೊತೆಯಾಗಿ, ಹಿತವಾಗಿ ಕಳೆಯಲಿದ್ದಾರೆ.

ಸದ್ಯಕ್ಕೆ ಶಿಲ್ಪಾ ಶೆಟ್ಟಿ ಶಾಂಪೂ ಒಂದರ ಜಾಹೀರಾತು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಟಿವಿ ಕಾರ್ಯಕ್ರಮ 'ಜರಾ ನಾಚ್ ಕೆ ದಿಖಾ' ಚಿತ್ರೀಕರಣದಲ್ಲಿ ಶಿಲ್ಪಾ ಪಾಲ್ಗೊಳ್ಳಲಿದ್ದಾರೆ. ಆ ಬಳಿಕವಷ್ಟೆ ಯೂರೋಪ್ ಪ್ರವಾಸ ಆರಂಭವಾಗಲಿದೆ. ತಮ್ಮ ತಮ್ಮ ಉದ್ಯೋಗಗಳಲ್ಲಿ ಇಬ್ಬರೂ ಬ್ಯುಸಿಯಾಗಿರುವ ಕಾರಣ ಈ ದಂಪತಿಗಳು ಒಬ್ಬರನ್ನೊಬ್ಬರು ಕೂಡಿ ಎರಡು ವಾರ ಆಗಿವೆಯಂತೆ.

"ದಾಂಪತ್ಯದ ಪ್ರತಿ ಕ್ಷಣವನ್ನು ಅನುಭವಿಸುತ್ತಿದ್ದೇನೆ. ಇದು ನನ್ನ ಬಾಳಿನ ಅತ್ಯಂತ ಸುಂದರ ದಿನಗಳು. ಯೂರೋಪ್ ಪ್ರವಾಸ ನೆನಪಿಸಿಕೊಂಡರೆ ಮೈಯಲ್ಲಾ ಪುಳಕವಾಗುತ್ತದೆ" ಎಂದು ಶಿಲ್ಪಾ ಪ್ರತಿಕ್ರಿಯಿಸಿದ್ದಾರೆ.ಮಧುಚಂದ್ರ ಮುಗಿಸಿಕೊಂಡು ಹಿಂತಿರುಗಿದ ಬಳಿಕ ಶಿಲ್ಪಾ ಶೆಟ್ಟಿ ದಂಪತಿಗಳು ಗೃಹಪ್ರವೇಶ ಮಾಡಲಿದ್ದಾರೆ. ಸುಸಾನೆ ರೋಷನ್ ವಿನ್ಯಾಸದ ಹೊಸ ಮನೆಗೆ ಶಿಲ್ಪಾ ಶೆಟ್ಟಿ ದಂಪತಿಗಳಿಗೆ ಸ್ವಾಗತ ಕೋರಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada