»   » ಕತ್ರಿನಾ, ಸಲ್ಮಾನ್ ಮದುವೆ ನಡೆಯಲ್ಲ; ಭವಿಷ್ಯವಾಣಿ

ಕತ್ರಿನಾ, ಸಲ್ಮಾನ್ ಮದುವೆ ನಡೆಯಲ್ಲ; ಭವಿಷ್ಯವಾಣಿ

Posted By:
Subscribe to Filmibeat Kannada

ಬಾಲಿವುಡ್ ಬ್ಯಾಡ್ ಬಾಯ್ ಎಂದೇ ಖ್ಯಾತನಾದ ಸಲ್ಮಾನ್ ಖಾನ್ ಮದುವೆ ನಡೆಯುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಆತನ ಮದುವೆ ದಂತದ ಗೊಂಬೆ ಕತ್ರಿನಾ ಕೈಫ್ ಜೊತೆ ಮಾತ್ರ ನಡೆಯಲ್ಲ ಎನ್ನುತ್ತಿದೆ ಭವಿಷ್ಯವಾಣಿಯೊಂದು. ಕತ್ರಿನಾರ ವೃತ್ತಿ ಜೀವನ ಹಾಗೂ ಖಾಸಗಿ ಬದುಕು ಕುರಿತು ಖ್ಯಾತ ಜ್ಯೋತಿಷಿ ಭಾವಿಕ್ ಸಂಗ್ವಿ ಭವಿಷ್ಯ ನುಡಿದ್ದಾರೆ.

ಕತ್ರಿನಾರ ವೃತ್ತಿ ಜೀವನದಲ್ಲಿ ಈ ವರ್ಷ ಯಾವುದೇ ಏರುಪೇರು ಆಗುವುದಿಲ್ಲ. ಆದರೆ ಖಾಸಗಿ ಬದುಕಿನಲ್ಲಿ ಮಾತ್ರ ಸಲ್ಮಾನ್ ಖಾನ್ ಜೊತೆ ಮದುವೆಯಾಗುವ ಸಾಧ್ಯತೆ ಇಲ್ಲ. ಒಂದು ವೇಳೆ ಮದುವೆಯಾದರೂ ಬಹಳ ದಿನಗಳ ಕಾಲ ಅದು ನಿಲ್ಲುವುದಿಲ್ಲ ಎಂದಿದ್ದಾರೆ ಸಂಗ್ವಿ.

ಕತ್ರಿನಾರ ಜನ್ಮ ದಿನಾಂಕ ಜುಲೈ 16, 1984. ಸಂಖ್ಯಾಶಾಸ್ತ್ರದ ಪ್ರಕಾರ ಆಕೆಯ ಪಾಲಿಗೆ ಸಂಖ್ಯೆ ಏಳು ಬರುತ್ತದೆ. ಹಾಗಾಗಿ ಗ್ರಹಗತಿಗಳು ಸರಿಯಾಗಿಲ್ಲ.ಶನಿಯ ಪ್ರಭಾವ ತೀಕ್ಷ್ಣವಾಗಿದೆ. ಆಕೆ 27ನೇ ವರ್ಷಕ್ಕೆ ಅಡಿಯಿಡುತ್ತಿದ್ದು ಹಲವು ಅನಾವಶ್ಯಕ ಆತಂಕ, ರಕ್ತದ ಒತ್ತಡ, ನಕಾರಾತ್ಮಕ ಅಂಶಗಳು ಹೆಚ್ಚಾಗಲಿವೆ ಎಂದು ಸಂಗ್ವಿ ಭವಿಷ್ಯ ನುಡಿದಿದ್ದಾರೆ.

ಆಕೆಯ ಮುಂದಿನ ಚಿತ್ರ 'ತೀಸ್ ಮಾರ್ ಖಾನ್' ಗೆಲುವು ಸಾಧಿಸಲಿದ್ದು ಬಾಲಿವುಡ್ ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದ್ದಾರೆ. ಅಕ್ಷಯ್ ಕುಮಾರ್ ಜೊತೆಗಿನ ಚಿತ್ರ ಬಾಲಿವುಡ್ ನಲ್ಲಿ ದಾಖಲೆ ನಿರ್ಮಿಸಲಿದೆ ಎಂದಿದ್ದಾರೆ ಸಂಗ್ವಿ. ಸಲ್ಮಾನ್ ಖಾನ್ ಜನ್ಮ ದಿನದ ಪ್ರಕಾರ ಆತನ ಸಂಖ್ಯೆ ಒಂಭತ್ತು. ಏಳು ಮತ್ತು ಒಂಭತ್ತು ಸಂಖ್ಯೆಗಳು ಬದ್ಧ ವೈರಿಗಳಿದ್ದಂತೆ.

ಇಬ್ಬರ ವ್ಯಕ್ತಿತ್ವಗಳು ಭಿನ್ನ.ಒಬ್ಬರು ಏತಿ ಎಂದರೆ ಮತ್ತೊಬ್ಬರು ಪ್ರೇತಿ ಎನ್ನುವ ಸ್ವಭಾವ. ಹಾಗಾಗಿ ಇವರಿಬ್ಬರ ಜಾತಕಗಳು ಹೊಂದಾಣಿಕೆಯಾಗುವುದಿಲ್ಲ. ಕತ್ರಿನಾ ಪಚ್ಚೆ ಮತ್ತು ಮುತ್ತನ್ನು ಒಳಗೊಂಡ ಬೆಳ್ಳಿ ಆಭರಣವನ್ನು ಧರಿಸುವುದು ಎಲ್ಲ ರೀತಿಯಿಂದಲೂ ಕ್ಷೇಮ ಎಂದಿದ್ದಾರೆ ಜ್ಯೋತಿಷಿಗಳು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada