»   » ಲಾರಾದತ್ತ, ಮಹೇಶ್ ಭೂಪತಿ ಪ್ರೇಮಾಯಣ

ಲಾರಾದತ್ತ, ಮಹೇಶ್ ಭೂಪತಿ ಪ್ರೇಮಾಯಣ

Posted By:
Subscribe to Filmibeat Kannada

ಬಾಲಿವುಡ್ ತಾರೆ ಲಾರಾ ದತ್ತಳಿಗೆ ಸದ್ಯಕ್ಕೆ ಮದುವೆಯಾಗುವ ಆಲೋಚನೆ ಇಲ್ಲವಂತೆ. ಈ ವಿಷಯವನ್ನು ಆಕೆ ಇತ್ತೀಚೆಗೆ ಬಹಿರಂಗಪಡಿಸಿದರು. ಟೆನ್ನಿಸ್ ತಾರೆ ಮಹೇಶ್ ಭೂಪತಿ ಮತ್ತು ಲಾರಾದತ್ತ ನಡುವೆ ಪ್ರೇಮಾಯಣ ನಡೆಯುತ್ತಿದೆ ಎಂಬುದು ಸಮಾಚಾರ.

ಶೀಘ್ರದಲ್ಲೆ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಇತ್ತು. ಈ ಬಗ್ಗ್ಗೆ ಲಾರರನ್ನು ಕೇಳಿದರೆ, ಈಗಾಗಲೆ ಸಾಕಷ್ಟು ಸಲ ಹೇಳಿದ್ದೇನೆ. ಮತ್ತೆ ಹೇಳುತ್ತಿದ್ದೇನೆ, ನನಗೆ ಸದ್ಯಕ್ಕೆ ಮದುವೆಯಾಗುವ ಆಲೋಚನೆ ಇಲ್ಲ. ಇಷ್ಟಕ್ಕೂ ಈ ರೀತಿ ವದಂತಿಗಳನ್ನು ಯಾಕಾದರೂ ಹಬ್ಬಿಸುತ್ತಿದ್ದಾರೋ ಅರ್ಥವಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಒಂದು ವೇಳೆ ನನ್ನ ಮದುವೆ ನಡೆಯುತ್ತದೆ ಎಂದರೆ, ಇಡೀ ವಿಶ್ವಕ್ಕೆ ನಾನೇ ಹೇಳುತ್ತೇನೆ. ಅಲ್ಲಿಯವರೆಗೂ ವದಂತಿಗಳನ್ನು ಹಬ್ಬಿಸುವವರು ಸ್ವಲ್ಪ ಸುಮ್ಮನಿದ್ದರೆ ಸಾಕು ಎಂದಿದ್ದಾರೆ. ಆದರೆ ಲಾರಾ ಅಸಲಿ ವಿಷಯವನ್ನು ಹೇಳಲಿಲ್ಲ... ಭೂಪತಿಯನ್ನು ಪ್ರೇಮಿಸುತ್ತಿದ್ದಾರೋ ಅಥವಾ ಇಲ್ಲವೋ?

Please Wait while comments are loading...