For Quick Alerts
  ALLOW NOTIFICATIONS  
  For Daily Alerts

  ಎರಡು ತಿಂಗಳ ಮಗಳ ಜೊತೆ ಲಂಡನ್‌ಗೆ ಐಶ್ವರ್ಯ ರೈ

  By Rajendra
  |

  ತನ್ನ ಎರಡು ತಿಂಗಳ ಮಗಳೊಂದಿಗೆ ಬಾಲಿವುಡ್ ತಾರೆ ಐಶ್ವರ್ಯ ರೈ ಲಂಡನ್‌ಗೆ ಹಾರುವ ಸಿದ್ಧತೆಯಲ್ಲಿದ್ದಾರೆ. ಕಳೆದ ಕೆಲವು ತಿಂಗಳಿಂದ ಆಕೆ ಮನೆಯಲ್ಲೇ ಇದ್ದೂ ಇದ್ದು ತಲೆಚಿಟ್ಟು ಹಿಡಿದಿದೆಯಂತೆ. ಈಗ ಮಗಳು ಹಾಗೂ ಗಂಡ ಅಭಿಷೇಕ್ ಬಚ್ಚನ್ ಜೊತೆ ವಿದೇಶಕ್ಕೆ ಹೊರಡಲು ಸೂಟ್‌ಕೇಸ್ ರೆಡಿ ಮಾಡಿಕೊಂಡಿದ್ದಾರೆ.

  ಕೆಲದಿನಗಳ ಕಾಲ ಅಲ್ಲೇ ಕಳೆದು ರಿಲ್ಯಾಕ್ಸ್ ಆಗಿ ಬಳಿಕ ಭಾರತಕ್ಕೆ ಹಿಂತಿರುಗಲಿದ್ದಾರಂತೆ. ಏತನ್ಮಧ್ಯೆ ಅಭಿಷೇಕ್ ಅಭಿನಯದ ಪ್ಲೇಯರ್ಸ್ ಚಿತ್ರ ಮಠ ಸೇರಿ ಮಲಗಿದೆ. ಬೇಸರದ ಮೂಡ್‌ನಲ್ಲಿರುವ ಅಭಿಷೇಕ್‌ ಕೊಂಚ ರಿಲ್ಯಾಕ್ಸ್ ಆಗುವ ಪ್ಲಾನ್ ಹಾಕಿದ್ದಾರೆ. ಹಾಗಾಗಿ ಮೂವರು ಲಂಡನ್‌ಗೆ ಹಾರುವುದು ಖಚಿತವಾಗಿದೆ.

  ಇನ್ನೂ ತನ್ನ ಮಗಳಿಗೆ ಹೆಸರಿಡದೇ ಇರುವ ಕಾರಣ ಪಾಸ್‌ಪೋರ್ಟ್‌ನಲ್ಲಿ ಏನೆಂದು ನಮೂದಿಸುತ್ತಾರೋ ಎಂಬ ಕುತೂಹಲವೂ ಬಾಲಿವುಡ್‌ನಲ್ಲಿ ಮನೆ ಮಾಡಿದೆ. ಮಾಧ್ಯಮಗಳ ಕಣ್ಣು ತಪ್ಪಿಸಿ ಇವರು ಯಾವಾಗ ವಿದೇಶಕ್ಕೆ ಹಾರಲಿದ್ದಾರೆ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ. (ಏಜೆನ್ಸೀಸ್)

  English summary
  Aishwarya Rai Bachchan and her hubby, Abhishek Bachchan, are planning a much-needed holiday overseas. So that the Bachchan trio is set to get away from the prying eyes of media and spend quality time most probably in London.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X