For Quick Alerts
  ALLOW NOTIFICATIONS  
  For Daily Alerts

  ಅಮೀರನ ಚಿತ್ರ ಬಿಡುಗಡೆಗೆ ಮುನ್ನವೇ ಯಶಸ್ವಿ

  By Staff
  |

  ಮುಂಬೈ,ಫೆ.20: ಅಮೀರ್ ಖಾನ್ ಅಭಿನಯಿಸುತ್ತಿರುವ 'ಗಜನಿ' ಚಿತ್ರಬಾಲಿವುಡ್ ನಲ್ಲಿ ಬಿಡುಗಡೆಗೊಳ್ಳುವ ಮುನ್ನವೇ ಹೆಸರನ್ನು ಮಾಡುತ್ತಿದೆ. ತಮಿಳಿನ ಸೂಪರ್ ಹಿಟ್ ಚಿತ್ರ ಗಜಿನಿಯ ರೀಮೇಕ್ ಆದ ಈ ಚಿತ್ರವನ್ನು ಹಿಂದಿಯಲ್ಲೂ ತಮಿಳಿನ ಎ.ಅರ್.ಮುರ್ಗದಾಸ್ ಅವರೇ ನಿರ್ದೇಶನ ಮಾಡಿದ್ದಾರೆ.

  ತಮಿಳು ಚಿತ್ರದಲ್ಲಿ ನಾಯಕಿಯಾಗಿದ್ದ ಆಸಿನ್ , ಹಿಂದಿಯಲ್ಲೂ ಅಮೀರ್ ಖಾನ್ ಗೆ ಜೋಡಿಯಾಗಲಿದ್ದಾರೆ. ಇನ್ನೊಬ್ಬ ನಾಯಕಿಯ ಪಾತ್ರವನ್ನು ಜಿಯಾಖಾನ್ ಮಾಡುತ್ತಿದ್ದಾರೆ. ಇತ್ತೀಚಿನ ಸುದ್ದಿಯ ಪ್ರಕಾರ ಈ ಚಿತ್ರದ ಹಕ್ಕು ಭಾರತ ಮತ್ತು ದೇಶದಾಚೆ ಸೇರಿ ಆಗಲೇ ಅಂದಾಜಿನಂತೆ 93 ಕೋಟಿ ರೂಪಾಯಿಯನ್ನು ಗಳಿಸಿದೆ .

  ನಿರ್ಮಾಪಕರಾದ ಮಧು ವರ್ಮ ಮತ್ತು ಅಲ್ಲು ಅರವಿಂದ್ (ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿಯವರ ಭಾವಮೈದುನ)ಮುಂಬೈ ನ ಇಂಡಿಯನ್ ಫಿಲ್ಮ್ ಕಂಪನಿ (ಐ ಎಫ್ ಸಿ)ಗೆ 53ಕೋಟಿ ರು.ಗಳಿಗೆ ಚಿತ್ರದ ಹಕ್ಕನ್ನು ಮಾರಿದ್ದಾರೆ.ಸಾಗರದಾಚೆ,ಡೊಮೆಸ್ಟಿಕ್ ವಿಡಿಯೋ ಮತ್ತು ಉಪಗ್ರಹ ಟಿ.ವಿ ಯ ಮೂಲಕ ಬಿತ್ತರಿಸಲು ಬೇಕಾದ ಚಿತ್ರದ ಹಕ್ಕನ್ನು 40 ಕೋಟಿ ರು.ಗಳಿಗೆ ಮಾರಿದ್ದಾರೆ ಎಂದು ತಿಳಿದು ಬಂದಿದೆ.ಈ ಚಿತ್ರ ಒಟ್ಟಾರೆ 93ಕೋಟಿ ರೂಪಾಯಿ ಹಕ್ಕು ಮಾರಾಟದಲ್ಲೇ ಗಳಿಸಿ ದಾಖಲೆ ನಿರ್ಮಾಣ ಮಾಡಲು ನಿಂತಿದೆ.

  ಅಮೀರ್ ಗೆ ಶುಕ್ರದೆಸೆ: ಶಾರುಖ್ ಖಾನ್ ಅಭಿನಯದ ಓ ಶಾಂತಿ ಓಂ ಚಿತ್ರವನ್ನು ಎರೋಸ್ ನಿರ್ಮಾಣ ಸಂಸ್ಥೆ 73 ಕೋಟಿ ರು.ಗಳಿಗೆ ಹಕ್ಕನ್ನು ಕೊಂಡುಕೊಂಡಿತ್ತು ಈಗ ಗಜಿನಿಯು ಆ ದಾಖಲೆಯನ್ನು ಮುರಿದಿದೆ.ಓಂ ಶಾಂತಿ ಓಂ ನ ನಿವ್ವಳ ಲಾಭ 86 ಕೋಟಿ ರು. ಆದರೆ ಅಮೀರ್ ಖಾನ್ ಅವರ ಚೊಚ್ಚಲ ನಿರ್ದೇಶನದ 'ತಾರೆ ಜಮೀನ್ ಪರ್' ಚಿತ್ರ ಈಗಾಗಲೇ 83ಕೋಟಿ ರು ಗಳನ್ನು ಗಳಿಸಿದೆ. ಹಣಗಳಿಕೆಯಲ್ಲಿ ಹಾಗೂ ಪ್ರಶಸ್ತಿ ಗಳಿಸುವಲ್ಲಿ ಕೂಡಶಾರುಖ್ ಖಾನ್ ನ ಚಿತ್ರಗಳಿಗೆ ಅಮೀರ್ ಖಾನ್ ಚಿತ್ರಗಳು ಸಡ್ಡು ಹೊಡೆದು ನಿಂತಿವೆ.ಗಜನಿ ಚಿತ್ರಕ್ಕೆ ಹಾಲಿವುಡ್ ನ ಹಿಟ್ ಮೆಮೆಂಟೊ(Memento)ಚಿತ್ರ ಸ್ಪೂರ್ತಿ ಎಂದು ಹೇಳಲಾಗಿದೆ.

  (ಏಜನ್ಸೀಸ್)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X