»   »  ಶಾರುಖ್ ಖಾನ್ ವಿರುದ್ಧ ಎಫ್ ಐಆರ್ ದಾಖಲು

ಶಾರುಖ್ ಖಾನ್ ವಿರುದ್ಧ ಎಫ್ ಐಆರ್ ದಾಖಲು

Subscribe to Filmibeat Kannada

ಪ್ರವಾದಿ ಮಹಮ್ಮದ್ ರ ಬಗ್ಗೆ ನಾನು ಯಾವುದೇ ಅಪಚಾರ ಮಾಡಿಲ್ಲ.ನನ್ನ ವಿರುದ್ಧ ಮಾಡಿರುವ ಆರೋಪ ಸುಳ್ಳು. ಇದು ಬರವಣಿಗೆಯಲ್ಲಿ ಆದ ದೋಷವೇ ಹೊರತು ನನ್ನ ದೃಷ್ಟಿಕೋನವಲ್ಲ ಎಂದು ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಆದರೆ ಮುಂಬೈನ ಬಾಂದ್ರಾ ಪೊಲೀಸರು ಶಾರುಖ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಮುಸ್ಲಿಂರ ಮನಸ್ಸನ್ನ್ನು ನೋಯಿಸುವ ಹೇಳಿಕೆ ನೀಡಿದ್ದಾರೆ ಎಂದು ನ್ಯಾಯವಾಧಿಯೊಬ್ಬರು ದೂರು ನೀಡಿದ ಬಳಿಕ ನಾವು ಶಾರುಖ್ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದೇವೆ ಎಂದು ಬಾಂದ್ರ ಪೊಲೀಸ್ ಠಾಣೆಯ ಹಿರಿಯ ನಿರೀಕ್ಷಕ ಪ್ರಕಾಶ್ ಜಾರ್ಜ್ ಹೇಳಿದ್ದಾರೆ.

ಶಾರುಖ್ ಮತ್ತು ಅವರ ಹೇಳಿಕೆಯನ್ನು ಪ್ರಕಟಿಸಿರುವ ಪತ್ರಿಕೆಯ ಸಂಪಾದಕರ ವಿರುದ್ಧವೂ ದೂರು ದಾಖಲಿಸಲಾಗಿದೆ. ಟೈಮ್ಸ್ ಅಂಡ್ ಸ್ಟೈಲ್ ಪತ್ರಿಕೆ ಜುಲೈ ತಿಂಗಳಲ್ಲಿ ಪ್ರವಾದಿಯ ಬಗ್ಗೆ ಮುಸ್ಲಿಂರಿಗೆ ಸಮ್ಮತವಲ್ಲದ ಹೇಳಿಕೆಯನ್ನು ನೀದಿದ್ದರು.

ಪ್ರಸ್ತುತ ಕರಣ್ ಜೋಹಾರ್ ನಿರ್ದೇಶಿಸುತ್ತಿರುವ 'ಮೈ ನೇಮ್ ಈಸ್ ಖಾನ್' ಚಿತ್ರೀಕರಣಕ್ಕಾಗಿ ಶಾರುಖ್ ವಿದೇಶದಲ್ಲಿದ್ದಾರೆ. ಅಲ್ಲಿಂದಲೇ ಪ್ರತಿಕ್ರಿಯಿಸಿರುವ ಶಾರುಖ್, ಮಹಮ್ಮದ್ ರಿಗಿಂತಲೂ ಪ್ರಮುಖ ವ್ಯಕ್ತಿ ಇತಿಹಾಸದಲಿಲ್ಲ ಎಂದಿದ್ದಾರೆ. ಮುಸ್ಲಿಂರಿಗೆ ಮತ್ತು ಇಸ್ಲಾಂರಿಗೆ ಬದ್ಧವಾಗಿರುವ ತನಗೆ ಪ್ರವಾದಿ ಮಹಮ್ಮದ್ ಪ್ರಮುಖ ವ್ಯಕ್ತಿ ಎಂದು ಹೇಳಿದ್ದಾರೆ.

(ಏಜೆನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada