For Quick Alerts
  ALLOW NOTIFICATIONS  
  For Daily Alerts

  ವಿದ್ಯಾ ಬಾಲನ್ ಗೆ ಬುಲಾವ್ ಕೊಟ್ಟ ಮಿ ಪರ್ಫೆಕ್ಟ್

  |

  ಚಿತ್ರರಂಗಕ್ಕೆ ಬಂದಾಗಿನಿಂದಲೂ ಪ್ರತಿಭಾವಂತೆ ಎಂದೇ ಗುರುತಿಸಿಕೊಂಡಿರುವ ನಟಿ ವಿದ್ಯಾ ಬಾಲನ್ ಈಗ ಬಾಲಿವುಡ್ ನಲ್ಲಿ ಬಹಳಷ್ಟು ಎತ್ತರಕ್ಕೇರಿದ್ದಾರೆ. ದಿ ಡರ್ಟಿ ಪಿಕ್ಚರ್ ನಲ್ಲಿಯೇ ಸಾಕಷ್ಟು ಸೆನ್ಸೇಷನ್ ನಿರ್ಮಿಸಿದ್ದ ವಿದ್ಯಾ, ಇತ್ತೀಚಿಗೆ ಬಿಡುಗಡೆಯಾಗಿರುವ 'ಕಹಾನಿ' ಚಿತ್ರದ ಮೂಲಕ ಎಲ್ಲರ ಹಾಟ್ ಫೇವರೆಟ್ ಎನಿಸಿದ್ದಾರೆ. ಇದಕ್ಕೆ ಸಾಕ್ಷಿ ಅಮೀರ್ ಖಾನ್.

  ಇತ್ತೀಚಿಗೆ ಅಮೀರ್ ಖಾನ್ "ವಿದ್ಯಾ ಬಾಲನ್ ಜೊತೆ ನಟಿಸಲು ನಾನು ಸಿದ್ಧವಾಗಿದ್ದೇನೆ. ಪ್ರತಿಭಾವಂತೆ ವಿದ್ಯಾ ಜೊತೆ ನಟಿಸುವ ಆಸೆ ನನ್ನಲ್ಲಿದೆ" ಎಂದಿದ್ದಾರೆ. ಆ ಮಾತಿಗೆ ವಿದ್ಯಾರ ಪ್ರತಿಕ್ರಿಯೆ ಏನೆಂಬುದು ಇನ್ನೂ ತಿಳಿದಿಲ್ಲವಾದರೂ ಈ ಇಬ್ಬರ ಅಭಿಮಾನಿಗಳ ದಿಲ್ಲಂತೂ ಫುಲ್ ಖುಷ್ ಆಗಿದೆ. 'ಪ್ರೇಕ್ಷಕರು 'ಧಕ್ ಧಕ್ ಕರ್ನೆ ಲಗಾ...' ಎನ್ನುತ್ತಿದ್ದಾರೆ.

  ಒಟ್ಟಿನಲ್ಲಿ ಡರ್ಟಿ ವಿದ್ಯಾ ಹಣೆಬರಹ ಬದಲಾಗಿದೆ. ಬದಲಾಗಿದೆ ಎನ್ನುವುದಕ್ಕಿಂತ ಅದೃಷ್ಟ ಖುಲಾಯಿಸಿದೆ. ಬಾಲಿವು್ಡ ಮಿ. ಪರ್ಫೆಕ್ಟ್ ಅಮೀರ್ ಖಾನ್ ಸ್ವತಃ ಬಾಯಿಬಿಟ್ಟು ವಿದ್ಯಾ ಬಾಲನ್ ಜೊತೆ ನಟಿಸಲು ಆಸೆ ವ್ಯಕ್ತಪಡಿಸುವುದು ಎಂದರೆ ಅದು ಸಾಮಾನ್ಯದ ಮಾತೇ? ವಿದ್ಯಾ ಬಾಲನ್ ಅಸಾಮಾನ್ಯಳು ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕೆ? (ಏಜೆನ್ಸೀಸ್)

  English summary
  Actor Aamir Khan told, he wants to act with Vidya Balan. After the Dirty Picture and recently released Kahani movies in Bollywood, Vidya became hot favorate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X