»   » ರಾಗಿಣಿ ಎಂಎಂಎಸ್ ಈಗ ಅಂತರ್ಜಾಲದಲ್ಲಿ ಲಭ್ಯ!

ರಾಗಿಣಿ ಎಂಎಂಎಸ್ ಈಗ ಅಂತರ್ಜಾಲದಲ್ಲಿ ಲಭ್ಯ!

Posted By:
Subscribe to Filmibeat Kannada

ಬಾಲಿವುಡ್‌ನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚಿತ್ರ 'ರಾಗಿಣಿ ಎಂಎಂಎಸ್'. ಈ ಚಿತ್ರವನ್ನು ಮೇ ತಿಂಗಳಲ್ಲಿ ತೆರೆಗೆ ತರುವ ಬಗ್ಗೆ ಭರದ ಸಿದ್ಧತೆ ನಡೆಯುತ್ತಿದೆ. ಏಕ್ತಾ ಕಪೂರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪವನ್ ಕೃಪಲಾನಿ ಆಕ್ಷನ್, ಕಟ್ ಹೇಳಿದ್ದಾರೆ. ಇದೊಂದು ಹಾರರ್ ಪ್ರಧಾನ ಚಿತ್ರವಾಗಿದ್ದು, ಚಿತ್ರದಲ್ಲಿನ ಅಲೌಕಿಕ ಸಂಗತಿಗಳು ರೋಮಾಂಚಕಾರಿಯಾಗಿರುತ್ತವೆ ಎಂದಿದ್ದಾರೆ ನಿರ್ಮಾಪಕರು.

ಬಾಲಿವುಡ್ ವಲಯದಲ್ಲಿ ಚಿತ್ರದ ಪ್ರೀಮಿಯರ್ ಬಗ್ಗೆಯೂ ಬಹಳಷ್ಟು ಕುತೂಹಲ ಮೂಡಿದೆ. ಸದ್ಯಕ್ಕೆ ಈ ಚಿತ್ರದ ಸ್ಟಿಲ್‌ಗಳಿಗಾಗಿ ಪ್ರೇಕ್ಷಕರು ಮುಗಿಬಿದ್ದಿದ್ದು, ಅಂತರ್ಜಾಲದಲ್ಲಿ ಚಿತ್ರಗಳನ್ನು ಸಿಕ್ಕಾಪಟ್ಟೆ ಡೌನ್ ಮಾಡಿಕೊಳ್ಳಲಾಗುತ್ತಿದೆ. ಚಿತ್ರದಆರಂಭಿಕ ಸನ್ನಿವೇಶಗಳನ್ನು ಅಂತರ್ಜಾಲಕ್ಕೆ ಬಿಡುಗಡೆ ಮಾಡಲಾಗಿದ್ದು ಅತ್ಯಧಿಕ ಸಂಖ್ಯೆಯಲ್ಲಿ ಡೌನ್ ಲೋಡ್ ಮಾಡಿಕೊಳ್ಳಲಾಗುತ್ತಿದೆ. ಮತ್ತಷ್ಟು ಸನ್ನಿವೇಶಗಳನ್ನು ಅಂತರ್ಜಾಲಕ್ಕೆ ತರುವ ಬಗ್ಗೆ ನಿರ್ಮಾಪಕರು ಚಿಂತಿಸುತ್ತಿದ್ದಾರೆ.

ಈ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು ಒಂದು ವೇಳೆ ಅಂತರ್ಜಾಲದಲ್ಲಿ ಚಿತ್ರ ತುಣುಕುಗಳು ಬಿಡುಗಡೆಯಾದರೆ ನಕಲಿ ಹಾವಳಿ ಶುರುವಾಗುವುದಿಲ್ಲವೆ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಕಾಪಿ ರೈಟ್ ಸಮಸ್ಯೆ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಚಿತ್ರದ ಕೆಲವು ಸನ್ನಿವೇಶಗಳನ್ನು ಅಂತರ್ಜಾಲಕ್ಕೆ ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ.

English summary
Television Baroness Ekta Kapoor broke all norms by releasing two “first looks” for her next pet venture Balaji’s Ragini MMS-something that has never been attempted before. Latest news has it that the posters of the film with their controversial content and visuals have gone on to become the most downloaded on the internet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada