For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಚೆಂದಗೆ ಕಾಣ್ತಿಲ್ಲ: ಕಂಪ್ಲೇಂಟೋ, ಕಾಂಪ್ಲಿಮೆಂಟೋ!?

  By Srinath
  |

  ದೀಪಿಕಾ ಪಡುಕೋಣೆ ಸುಂದರವಾಗಿಲ್ವಾ!? ಇಲ್ಲ ಎಂದಿದ್ದಾರೆ ಸೂಪರ್ ಸ್ಟಾರ್ ರಜನಿಕಾಂತ್. ಇದೇನಿದು ನಮ್ಮ ನಮ್ಮವರೇ ಕಾಲೆಳೆದಾಟಕ್ಕೆ ನಿಂತರಾ? ಹಾಗೇನಿಲ್ಲ. ಆದರೆ ದೀಪಿಕಾ ಚೆನ್ನಾಗಿಲ್ಲ ಎಂಬುದು ರಜನಿ ಖಚಿತ ನಿಲುವು. ಯಾಕಪ್ಪಾ ಅಂದರೆ, ದೀಪಿಕಾ ಸರಳವಾಗಿ, ಸುಂದರವಾಗಿ 'ರಾಣಾ' ಪಾತ್ರಕ್ಕೆ ತಕ್ಕಂತೆ ಸ್ನಿಗ್ಧ ಸೌಂದರ್ಯದ ರಾಶಿಯಾಗಬೇಕು ಎಂಬುದು ರಜನಿಕಾಂತ್ ಅವರ ಬಯಕೆ.

  ಅದಕ್ಕೆಂದೇ ರಾಣಾ ಚಿತ್ರೀಕರಣಕ್ಕೆ ಬಂದ ದೀಪಿಕಾಳನ್ನು ರಜನಿಕಾಂತ್ ಮನೆಗೆ ವಾಪಸ್ ಕಳಿಸಿದ್ದಾರೆ. ಜತೆಗೆ ನಿರ್ದೇಶಕ ಕೆ. ಎಸ್. ರವಿಕುಮಾರ್ ಅವರನ್ನೂ ದೀಪಿಕಾ ಜತೆಗೆ ಕಳಿಸಿದ್ದಾರೆ. ಮತ್ತಷ್ಟು ಸಮಯ ತೆಗೆದುಕೊಂಡು ಅವಳನ್ನು ಇನ್ನಷ್ಟು ತಿದ್ದಿ ತೀಡಿ, ಒಳ್ಳೆ ಲುಕ್ ಕೊಡಿ ಎಂದು ತಣ್ಣಗೆ ಹೇಳಿದ್ದಾರೆ. ಚೆನ್ನೈ ಬಿಸಿಲ ದಗೆಗೆ ದೀಪಿಕಾ ಮತ್ತು ರವಿ ಇಬ್ಬರೂ ಬೆವರುಗೊಂಡಿದ್ದಾರೆ. ಹೀಗಾಗಿ ಚೆನ್ನೈನಲ್ಲಿ ಆರಂಭವಾಗಬೇಕಿದ್ದ ರಾಣಾ ಚಿತ್ರೀಕರಣ ಒಂದು ವಾರ ತಡವಾಗಿದೆ.

  ಎಲ್ಲವನ್ನೂ ಬಿಟ್ಟು (ಹೌಸ್ ಫುಲ್ ಸಿನಿಮಾ ಶೂಟಿಂಗ್) ದಕ್ಷಿಣ ಭಾರತದ ಸೂರ್ ಸ್ಟಾರ್ ರಜನಿ ಎದುರು ಅಭಿನಯಿಸುವುದೇ ಮಹಾ ಭಾಗ್ಯ ಎಂದು ಆನಂದತುಂದಿಲಿತಳಾಗಿದ್ದ ದೀಪಿಕಾಗೆ ಏನು ಹೇಳಬೇಕೋ ತೋಚುತ್ತಿಲ್ಲವಂತೆ. ರಜನಿದು ಕಾಂಪ್ಲಿಮೆಂಟೋ, ಕಾಮೆಂಟೋ, ಕಂಪ್ಲೇಂಟೋ ತಿಳಿಯದೆ ಬಾಲಿವುಡ್ ಬೆಡಗಿ ಚಡಪಡಿಸುತ್ತಿದ್ದಾಳೆ. ಒಂಚೂರು ದಮ್ ಕಳೆದುಕೊಂಡಿರುವುದಂತೂ ದಿಟ. ಅಂದಹಾಗೆ, ರಾಣಾ ಚಿತ್ರದಲ್ಲಿ ರಜನಿ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಿರಿಯ ರಜನಿಗೆ ದೀಪಿಕಾ ನಾಯಕಿ.

  English summary
  Superstar Rajinikanth wants Deepika Padukone to look more beautiful in his film Rana. This prompted a delay in shooting for a week. Director K S Ravikumar now has to assure Rajini that Deepika looks the way he wants her to.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X