ಯಶ್ ಛೋಪ್ರಾಗೆ ಗುನ್ನಾ ಇಟ್ಟ ರವಿ ಪೂಜಾರಿ

By Srinath

Yash Chopra
ಮುಂಬೈ ಭೂಗತ ಪಾತಕಿಗಳು ಮತ್ತೆ ಬಾಲಿವುಡ್ ಮೇಲೆ ಕಣ್ಣುಹಾಕಿದ್ದಾರೆ. ರವಿ ಪೂಜಾರಿ ಗ್ಯಾಂಗ್ 50 ಲಕ್ಷ ರುಪಾಯಿ ನೀಡುವಂತೆ ಬೆದರಿಕೆ ಕರೆ ಮಾಡಿದೆ ಎಂದು ಬಾಲಿವುಡ್ ನ ಖ್ಯಾತ ನಿರ್ದೇಶಕ ಯಶ್ ಛೋಪ್ರಾ ಅವರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಲಿವುಡ್ ನ ಮೇರುಪರ್ವತ ಯಶ್ ಛೋಪ್ರಾ ಅವರ ಒಡೆತನದ ಒಶಿವಾರಾದಲ್ಲಿರುವ ಯಶ್ ರಾಜ್ ಫಿಲ್ಮ್ ಕಚೇರಿಯ (YRF office) ಸ್ಥಿರ ದೂರವಾಣಿಗೆ ರವಿ ಪೂಜಾರಿ ಗ್ಯಾಂಗ್ ಸತತವಾಗಿ ಕರೆ ಮಾಡುತ್ತಿದೆ. ಕೆಲವು ಬಾರಿ ಕರೆ ಮಾಡಿದವ ಸ್ವತಃ ರವಿ ಪೂಜಾರಿಯೇ ಮಾತನಾಡುತ್ತಿರುವುದಾಗಿ ಹೇಳಿಕೊಂಡು 50 ಲಕ್ಷ ರುಪಾಯಿ ಮಡಗುವಂತೆ ಬೆದರಿಕೆಯೊಡ್ಡಿದ್ದಾನೆ.

ಇದರಿಂದ ಕ್ರೋಧಗೊಂಡ ಹಿರಿಯಜ್ಜ ಛೋಪ್ರಾ ಅವರು ಡಿಸಿಪಿ ಕಚೇರಿಗೆ ಅಹವಾಲು ಸಲ್ಲಿಸಿ, ಹೆಚ್ಚುವರಿ ಭದ್ರತೆ ಪಡೆದಿದ್ದಾರೆ. ಇದೀಗ ಇಬ್ಬರು ಪೊಲೀಸರು ಛೋಪ್ರಾ ಕಚೇರಿಗೆ ಕಾವಲು ಕಾಯುತ್ತಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ. ಮಂಬೈ ಭೂಗತ ಪಾತಕಿಗಳು ಬಾಲಿವುಡ್ ಮಂದಿಗೆ ಬೆದರಿಕೆಯೊಡ್ಡಿರುವುದು ಇದೇ ಮೊದಲಲ್ಲ. ಮಹೇಶ್ ಭಟ್, ರವಿ ಕಪೂರ್, ಅಯೇಶಾ ಟಕಿಯಾ ಪತಿ ಫರ್ರ್ಹಾನ್ ಅಜ್ಮಿ ಹೀಗೆ ದೊಡ್ಡ ಸಾಲೇ ಇದೆ.

More from Filmibeat

English summary
Yash Chopra has been receiving threat calls from gangster Ravi Pujari. In fact, Chopra has even sent a letter to the Zonal DCP about the same and has received extra security post. Ravi Pujari gang has been calling up the landline at Yash Raj Films office in Oshiwara. The caller has demanded Rs 50 lakh from the filmmaker.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X