»   » ಶಿಲ್ಪಾಶೆಟ್ಟಿಯ ಈಡೇರದ ಬಯಕೆ

ಶಿಲ್ಪಾಶೆಟ್ಟಿಯ ಈಡೇರದ ಬಯಕೆ

Posted By:
Subscribe to Filmibeat Kannada

ಮಂಗಳೂರು ಬೆಡಗಿ ಶಿಲ್ಪಾ ಬಾಲಿವುಡ್ ಗೆ ಕಾಲಿಟ್ಟಾಗ ಈಕೆಗೆ ಕುಣಿಯೋದು ಬಿಟ್ಟ್ಟು ಬೇರೇನು ಬರೋಲ್ಲ. ನಟನೆ ಎಂದರೆ ಅಷ್ಟಕಷ್ಟೇ ಎಂದು ವಿಮರ್ಶಕರು ಟೀಕಿಸಿದ್ದರು. ನಂತರ, ದಡ್ಕನ್, ಅಪ್ನೆ, ಲೈಫ್ ಇನ್ ಮೆಟ್ರೋ ಮುಂತಾದ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಟೀಕಿಸುವವರ ಬಾಯ್ಮಿಚ್ಚಿದ್ದರು. ಸದ್ಯ ಎರಡನೇ ಹನಿಮೂನ್ ತಯಾರಿಯಲ್ಲಿರುವ ಶಿಲ್ಪಾಗೆ ಮತ್ತೇನು ಆಸೆ ಅಂತಿರಾ?

ಆದರೆ, ಶಿಲ್ಪಾರಿಗೂ ಗೊತ್ತು, ತಾನು ಮೊದಲು ನೃತ್ಯಪಟು ನಂತರವಷ್ಟೆ ನಟಿ ಎಂದು. ಶಿಲ್ಪಾ ಸೊಂಟ ಬಳುಕಿಸುವ ರೀತಿಗೆ ಸ್ವತಃ ಪ್ರಭುದೇವ ಬೆರಗಾಗಿದ್ದರು. ಎಲ್ಲ ಬಗೆಯ ಕುಣಿತಗಳನ್ನು ಆಡಿ ನಲಿದಿರುವ ಶಿಲ್ಪಾಗೆ ಇನ್ನೂ ತೀರದ ಬಯಕೆ ಕಾಡುತ್ತಿದೆ .ಎಲ್ಲಾ ಪ್ರಕಾರಗಳಲ್ಲಿ ಕುಣಿದಿದ್ದರೂ ಮುಜ್ರಾನೃತ್ಯ ಆಡುವ ಅವಕಾಶ ಸಿಕ್ಕಿಲ್ಲ. ಮುಜ್ರಾ ಕುಣಿತ ನನ್ನ ಜೀವಮಾನದ ಗುರಿ ಎಂದು ಶಿಲ್ಪಾ ಖಾಸಗಿ ವಾಹಿನಿಯ ರಿಯಾಲಿಟಿ ಷೋ 'ಜರಾ ನಚ್ಕೆ ದಿಖಾ' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಮುಜ್ರಾ ಅಂದರೆ ಯಾವ ಬಗೆ ನೃತ್ಯ ಎಂದು ಥಟ್ಟನೆ ಹೊಳೆಯುವುದಿಲ್ಲ. ಅದೇ ಮಧು ಬಾಲಾರ 'ಪ್ಯಾರ್ ಕಿಯಾ ತೋ ಢರ್ ನ ಕ್ಯಾ' ಹಾಡಿನಲ್ಲಿ ನ ನೃತ್ಯ ನೆನಪಿಸಿಕೊಂಡರೆ ತಿಳಿಯುತ್ತದೆ. ಮುಂದೆ ರೇಖಾ, ಹೇಮಮಾಲಿನಿ, ಮಾಧುರಿ ದೀಕ್ಷೀತ್ ಹಾಗೂ ಐಶ್ವರ್ಯಾ ರೈ ಈ ನೃತ್ಯ ಪ್ರಕಾರದಲ್ಲಿ ನಟಿಸಿ, ನರ್ತಿಸಿ ಜನಮನ ಗೆದ್ದರು.

ಮೊಘಲರ ಕಾಲದ ಮುಜ್ರಾ ನೃತ್ಯ ಪ್ರಕಾರ ಕಥಕ್ ಶೈಲಿಯಲ್ಲಿರುತ್ತದೆ. ಟುಮರಿಗಳು, ಗಜಲ್ ಹಾಗೂ ಜನಪ್ರಿಯ ಕವಿತೆಗಳ ಸಾಲು ಮುಜ್ರಾ ನೃತ್ಯಕ್ಕೆ ಸ್ಫೂರ್ತಿ. ಅಮಿತಾಬ್ ಅವರ ತಂದೆ ಕವಿ ಹರಿವಂಷ್ ರಾಯ್ ಬಚ್ಚನ್ , ಬಹದ್ದೂರ್ ಷಹಾ ಜಾಫರ್ ಮುಂತಾದವರ ಕವನಗಳು ಮುಜ್ರಾ ನೃತ್ಯಕ್ಕೆ ಹೇಳಿ ಮಾಡಿಸಿದಂತಿರುತ್ತಿತ್ತು. ಮನರಂಜನೆ ಉದ್ದೇಶದ ಈ ನೃತ್ಯ ಪ್ರಕಾರ ಪರಂಪರಾಗತವಾಗಿ ಹರಿದು ಬಂದಿದ್ದು, ವಿಶೇಷ ಸಂದರ್ಭದಲ್ಲಿ (ಮೆಹಫಿಲ್) ಬಳಸಲಾಗುತ್ತಿತ್ತು. ಆದರೆ ನಂತರ ಮುಜ್ರಾ ನೃತ್ಯ ವೇಶ್ಯಾಕುಲದ ಕುಣಿತವಾಗಿ ಮಾರ್ಪಾಟು ಹೊಂದಿ, ನಶಿಸತೊಡಗಿತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada