»   » ಮಕ್ಕಳೊಂದಿಗೆ ಇಸ್ತಾಂಬುಲ್ ಗೆ ಹಾರಿದ ಶಾರುಖ್

ಮಕ್ಕಳೊಂದಿಗೆ ಇಸ್ತಾಂಬುಲ್ ಗೆ ಹಾರಿದ ಶಾರುಖ್

Posted By:
Subscribe to Filmibeat Kannada

ಬಾಲಿವುಡ್ ನಟ ಶಾರುಖ್ ಖಾನ್ ಸೂಟ್ ಕೇಸ್ ಹಿಡಿದು ತನ್ನ ಇಬ್ಬರು ಮಕ್ಕಳೊಂದಿಗೆ ಇಸ್ತಾಂಬುಲ್ ಗೆ ಹಾರಿದ್ದಾರೆ. ಅವರೇನು ಶಾಶ್ವತವಾಗಿ ಅಲ್ಲೇ ಸೆಟ್ಲ್ ಆಗಲು ಹೋಗುತ್ತಿಲ್ಲ. ಮಕ್ಕಳ ಜೊತೆ ರಜಾ ದಿನಗಳನ್ನು ಕಳೆಯಲು ಶಾರುಖ್ ಅಲ್ಲಿಗೆ ಹೋಗಿದ್ದಾರೆ ಅಷ್ಟೆ. ಶಾರುಖ್ ಮಕ್ಕಳು ಇನ್ನೂ ಎಲ್ಲೆಲ್ಲೋ ಸುತ್ತಾಡುತ್ತಾರಂತೆ. ಆದರೆ ಶಾರುಖ್ ಮಾತ್ರ ಅವರ ಜೊತೆ ಇಸ್ತಾಂಬುಲ್ ತನಕ ಹೋಗಿ ವಾಪಸ್ ಆಗಲಿದ್ದಾರೆ.

ನಮ್ಮ ತಂದೆ ಯಾವಗಲೂ ಕಾಶ್ಮೀರ, ರೋಮ್ ಮತ್ತು ಇಸ್ತಾಂಬುಲ್ ಗೆ ಕರೆದೊಯ್ಯತ್ತಿದ್ದರು. ಈಗ ನನ್ನ ಮಕ್ಕಳನ್ನು ಕರೆದೊಯ್ಯಲು ಅವರು ನಮ್ಮ ನಡುವೆ ಇಲ್ಲ ಎಂದು ಶಾರುಖ್ ಎರಡು ಸಾಲಿನಲ್ಲಿ ತಮ್ಮ ಅನಿಸಿಕೆಯನ್ನು ಟ್ವಿಟ್ಟರ್ ಹಂಚಿಕೊಂಡಿದ್ದಾರೆ.

ತಮ್ಮ ಬಾಲ್ಯದ ಗೆಳತಿ ಗೌರಿಯನ್ನು ಶಾರುಖ್ ವರಿಸಿದ ಬಳಿಕ ಪ್ರತಿಫಲವಾಗಿ ಇಬ್ಬರು ಮಕ್ಕಳಿವೆ. ಆರ್ಯನ್ (13) ಹಾಗೂ ಸುಹಾನ (10) ಅಪ್ಪನ ಜೊತೆಗೆ ಹಾಯಾಗಿ ಕಾಲ ಕಳೆಯಲು ಇಸ್ತಾಂಬುಲ್ ವಿಮಾನ ಹತ್ತಿರುವುದಾಗಿ ಬಾಲಿವುಡ್ ಮೂಲಗಳು ತಿಳಿಸಿವೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada