For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‍‌ಗೆ ಜಾಲಿ ಗರ್ಲ್ ತಮನ್ನಾ ಭಾಟಿಯಾ ಲಗ್ಗೆ

  By Rajendra
  |

  ದಕ್ಷಿಣ ಭಾರತದಲ್ಲಿ ಲಕ ಲಕ ಎಂದು ಹೊಳೆಯುತ್ತಿರುವ ತಮನ್ನಾ ಭಾಟಿಯಾ ಬಾಲಿವುಡ್‌ಗೆ ಲಗ್ಗೆ ಹಾಕಿದ್ದಾರೆ. ಅಜಯ್ ದೇವಗನ್ ನಾಯಕನಾಗಿರುವ 'ಹಿಮ್ಮತ್‌ವಾಲಾ' ಚಿತ್ರಕ್ಕೆ ಸಹಿ ಹಾಕಿದ್ದಾರೆ. ಆದರೆ ಈ ಸುದ್ದಿ ಇನ್ನೂ ಖಚಿತವಾಗಿಲ್ಲ, ಅಷ್ಟರೊಳಗೇ ಲೀಕ್ ಆಗಿದೆ.

  ಹಿಂದಿ ಚಿತ್ರದಲ್ಲಿ ಅಭಿನಯಿಸುವುದಕ್ಕೂ ಮುನ್ನ ತಮಿಳಿನ ಒಂದು ಚಿತ್ರವನ್ನು ಮುಗಿಸಲಿದ್ದಾರಂತೆ. ಅದಾದ ಬಳಿಕವಷ್ಟೇ ಹಿಂದಿಯಲ್ಲಿ ಬಣ್ಣ ಹಚ್ಚುತ್ತಾರೆ ಎನ್ನುತ್ತವೆ ಮೂಲಗಳು. ತೆಲುಗಿನಲ್ಲಿ ರಾಮ್ ಚರಣ್ ತೇಜ ಜೊತೆ 'ರಚ್ಚ' ಎಂಬ ಚಿತ್ರದಲ್ಲೂ ತಮನ್ನಾ ಅಭಿನಯಿಸುತ್ತಿದ್ದಾರೆ.

  ಈ ಹಿಂದೊಮ್ಮೆ ಟೈಟ್ ಜೀನ್ಸ್ ಪ್ಯಾಂಟಿನಲ್ಲಿ ತಿರುಪತಿ ತಿಮ್ಮಪ್ಪನಿಗೆ ತಮನ್ನಾ ಅಡ್ಡಬಿದ್ದಿದ್ದರು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಏನೋ ಅರ್ಜೆಂಟ್‌ನಲ್ಲಿ ಹೀಗಾಗೋಯ್ತು ಎಂದು ತಮನ್ನಾ ತಬ್ಬಿಬ್ಬಾಗಿ ನುಡಿದಿದ್ದರು. ಒಟ್ಟಿನಲ್ಲಿ ರು.70ರಿಂದ 80 ಲಕ್ಷ ಸಂಭಾವನೆ ಎಣಿಸುತ್ತಿರುವ ತಮನ್ನಾಗೆ ಹಿಂದಿಯಲ್ಲಿ ಭರ್ಜರಿ ಚಾನ್ಸ್ ಸಿಕ್ಕಂತಾಗಿದೆ. (ಏಜೆನ್ಸೀಸ್)

  English summary
  The latest buzz is that Milky beauty Tamannah has signed a Hindi film titled "Himmatwala" in which Ajay Devgan is playing the male lead role.But the news is not yet confirmed officially

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X