»   » ಆಸ್ಕರ್ ಅಂಗಳದಲ್ಲಿ ಮಿನುಗಲಿರುವ 'ತಾರೆ ಜಮೀನ್ ಪರ್'

ಆಸ್ಕರ್ ಅಂಗಳದಲ್ಲಿ ಮಿನುಗಲಿರುವ 'ತಾರೆ ಜಮೀನ್ ಪರ್'

Posted By:
Subscribe to Filmibeat Kannada

'ಮಿಸ್ಟರ್ ಪರ್ಫೆಕ್ಷನಿಸ್ಟ್' ಎಂದೇ ಖ್ಯಾತರಾಗಿರುವ ಹಿಂದಿ ನಟ ಅಮೀರ್ ಖಾನ್ ಅವರ ನಿರ್ದೇಶನದ 'ತಾರೆ ಜಮೀನ್ ಪರ್' ಚಿತ್ರ ಆಸ್ಕರ್ ಅಂಗಳದ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಮಿನುಗಲು ಪ್ರಾರಂಭಿಸಿದೆ. ಭಾರತದ ಪರ ಕಣದಲ್ಲಿದ್ದ ಏಳು ಚಿತ್ರಗಳನ್ನು ಹಿಂದೆ ಹಾಕಿ 'ತಾರೆ...' ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿದೆ. ಇಡೀ ಭಾರತೀಯ ಚಿತ್ರರಂಗ ನಿಬ್ಬೆರಗಾಗುವಂತೆ ವಿಶಿಷ್ಟ ಬಗೆಯ ಚಿತ್ರ ನಿರ್ದೇಶಿಸಿರುವ ಅಮೀರ್ ಕಣ್ಣುಗಳು ತಾರೆಗಳಂತೆ ಮಿನುಗುತ್ತಿವೆ. 'ಲಗಾನ್' ಚಿತ್ರದಲ್ಲಿ ನನಸಾಗದ ಕನಸನ್ನು 'ತಾರೆ ಜಮೀನ್ ಪರ' ಪೂರೈಸುವುದೆಂಬ ವಿಸ್ವಾಸ ಅವರಲ್ಲಿ ಮನೆಮಾಡಿದೆ.

2008ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಮಾರಾಠಿ ಚಿತ್ರ 'ಟಿಂಗ್ಯಾ', ಹಾಗೂ 'ವೇಲು', ತೆಲುಗಿನ 'ಗಾಮಾಯಮ್', ಅಶಿತೋಷ್ ಗೌರಿಕರ್ ಅವರ 'ಜೋಧಾ ಅಕ್ಬರ್', ನೀರಜ್ ಪಾಂಡೆ ಅವರ 'ಎ ವೆನ್ಸ್‌ಡೇ', ನಿಶಾಂತ್ ಕಾಮತ್ ಅವರ 'ಮುಂಬೈ ಮೇರಿ ಜಾನ್', ಅಭಿಷೇಕ್ ಕಪೂರ್ ಅವರ 'ರಾಕ್ ಇನ್', ಸುಭಾಷ್ ಗಾಯ್ ಅವರ 'ಬ್ಲಾಕ್ ಎಂಡ್ ವೈಟ್' ಚಿತ್ರಗಳು ತಾರೇ ಜಮೀನ್ ಫರ್ ಚಿತ್ರಕ್ಕೆ ಭಾರಿ ಪೈಪೋಟಿ ನೀಡಿದ್ದವು. ಕೊನೆಯದಾಗಿ ಭಾರತೀಯ ಚಲನಚಿತ್ರ ಒಕ್ಕೂಟದ ಅಧ್ಯಕ್ಷ ಸುನೀಲ್ ದರ್ಶನ್ ನೇತೃತ್ವದ ಸಮಿತಿಯು ಅಮೀರ್ ಖಾನ್ ಅವರ 'ತಾರೇ ಜಮೀನ್ ಪರ್' ಚಿತ್ರವನ್ನು 'ಆಸ್ಕರ್'ಗೆ ನಾಮನಿರ್ದೇಶನ ಮಾಡುವ ಒಮ್ಮತ ನಿರ್ಧಾರವನ್ನು ಕೈಗೊಂಡಿದೆ. ಅಮೀರ್ ನಿರ್ಮಾಣದ 'ಲಗಾನ್' ಚಿತ್ರ ಈ ಹಿಂದೆ ಆಸ್ಕರ್ ಪ್ರಶಸ್ತಿಯ ಅಂಗಳದಲ್ಲಿ ಸ್ಪರ್ಧಿಸಿ ಕೊನೆಯ ಹಂತದಲ್ಲಿ ಸೋಲುನುಭವಿಸಿತ್ತು. ಹಿಂದಿನ ಬಾರಿ 'ನೋ ಮ್ಯಾನ್ಸ್ ಲ್ಯಾಂಡ್' ವಿದೇಶಿ ಚಿತ್ರಕ್ಕೆ ಆಸ್ಕರ್ ಲಭಿಸಿತ್ತು.

ಕಳೆದ ವರ್ಷ ಡಿಸೆಂಬರ್ 21ರಂದು ಬಿಡುಗಡೆ ಹೊಂದಿದ ಈ ಚಿತ್ರದಲ್ಲಿ ಅಮೀರ್ ಖಾನ್ ಅಲ್ಲದೆ ಬಾಲ ನಟ ದರ್ಶೀಲ್ ಸಫಾರೆ, ನಟಿ ಟಿಸ್ಕಾ ಚೋಪ್ರಾ, ವಿಪಿನ್ ಶರ್ಮಾ, ಸಾಜೀತ್ ಎಂಜನಿಯರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಓದಿನಲ್ಲಿ ಹಿಂದಿದ್ದ, ಪಾಲಕರಿಂದ ತೀವ್ರ ತಿರಸ್ಕಾರಕ್ಕೆ ಒಳಗಾಗಿದ್ದ ವಿದ್ಯಾರ್ಥಿಯೊಳಗಿನ ಕೀಳರಿಮೆಯನ್ನು ಹೋಗಲಾಡಿಸಿ ಆತನಲ್ಲಿದ್ದ ಕಲಾವಿದನನ್ನು ಗುರುತಿಸಿ ಪ್ರೋತ್ಸಾಹಿಸುವುದು ಚಿತ್ರದ ಕಥಾವಸ್ತು. ಚಿತ್ರ ಮುಕ್ಕಾಲು ಮುಗಿದ ನಂತರ ಅಮೀರ್ ಕಾಣಿಸಿಕೊಂಡಿದ್ದರೂ ತನ್ನದೇ ಲೋಕದಲ್ಲಿ ವಿಹರಿಸುತ್ತ ಎಲ್ಲರ ನಿರ್ಲಕ್ಷಕ್ಕೊಳಗಾಗುವ ಹುಡುಗನಾಗಿ ದರ್ಶೀಲ್ ಮನೋಜ್ಞ ಅಭಿನಯ ನೀಡಿದ್ದಾನೆ. 2007ರಲ್ಲಿ ಬಿಡುಗಡೆಯಾದ ಈ ಚಿತ್ರ ಪ್ರಯೋಗಶೀಲತೆಯಿಂದ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ವಿಶಿಷ್ಟ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಮೀರ್ ಖಾನ್ ಅವರ ವಿಭಿನ್ನ ಶೈಲಿಯ ಕಥಾ ನಿರೂಪಣೆಯಿಂದ ಚಿತ್ರ ಭರ್ಜರಿ ಯಶಸ್ಸು ಕಂಡು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು.

ತಾರೇ ಜಮೀನ್ ಪರ್ ಚಿತ್ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದಕ್ಕೆ ಅಮೀರ್ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತೀಯ ಚಿತ್ರೋಧ್ಯಮಕ್ಕೆ ವಿಶಿಷ್ಟ ಶೈಲಿಯ ಚಿತ್ರವನ್ನು ನೀಡಬೇಕು ಎನ್ನುವ ಹಂಬಲವಿತ್ತು. ತಾರೇ ಜಮೀನ್ ಪರ್ ಮೂಲಕ ಆ ಆಸೆ ಈಡೇರಿತು. ಉತ್ತಮ ಚಿತ್ರ ಮಾಡಿರುವ ಬಗ್ಗೆ ಹೆಮ್ಮೆಯೂ ಇತ್ತು. ಇದೀಗ ಆ ಚಿತ್ರ ಜಾಗತಿಕ ಮಟ್ಟದ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಅಪಾರ ಸಂತೋಷವನ್ನುಂಟು ಮಾಡಿದೆ ಎಂದು ಸಂಸತ ವ್ಯಕ್ತಪಡಿಸಿದ್ದಾರೆ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ 2009ರ ಫೆಬ್ರವರಿಯಲ್ಲಿ ನಡೆಯಲಿದೆ.

(ದಟ್ಸ್ ಕನ್ನಡ ಸಿನಿ ವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X