»   »  ಅಬ್ದುಲ್ ಕಲಾಂ ಬಾಲಿವುಡ್ ಪ್ರವೇಶ

ಅಬ್ದುಲ್ ಕಲಾಂ ಬಾಲಿವುಡ್ ಪ್ರವೇಶ

Subscribe to Filmibeat Kannada

ಕನಸುಗಳ ಕಾಣಲು ಹೇಳಿಕೊಟ್ಟ ಮೇಷ್ಟ್ರು ಮಕ್ಕಳೊಂದಿಗೆಬೆಳ್ಳಿ ತೆರೆಯ ಮೇಲೆ ಕಾಣಿಸಲಿದ್ದಾರೆ. ಮಾಜಿ ರಾಷ್ಟ್ರಪತಿ ಡಾ.ಎ ಪಿ ಜೆ ಅಬ್ದುಲ್ ಕಲಾಂ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. 'ಮೈ ಕಲಾಂ ಹೂ' ಎನ್ನುವ ಚಿತ್ರದಲ್ಲಿ ನಟಿಸಲು ಅವರು ಒಪ್ಪಿಗೆ ಸೂಚಿಸಿದ್ದಾರೆಂದು ಚಿತ್ರತಂಡ ತಿಳಿಸಿದೆ. 'ಸ್ಮೈಲ್' ಫೌಂಡೇಶನ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಮಾಧವ್ ಪಾಂಡೆ ನಿರ್ದೇಶಿಸಲಿದ್ದಾರೆ.

ಕಲಾಂ ಮೂಲತಃ ಏರೋನಾಟಿಕಲ್ ಇಂಜಿನಿಯರ್ ಇದಲ್ಲದೆ ವಿಜ್ಞಾನಿ, ಮೇಷ್ಟ್ರು, ರಾಷ್ಟ್ರದ ಪ್ರಥಮ ಪ್ರಜೆ, ಸಂಗೀತ ರಸಿಕಾಗಿದ್ದಾರೆ.ಈಗ ನಟರಾಗಿ ನಟಿಸಲು ಕಾರಣವೇನು ಎಂದರೆ, ಮಕ್ಕಳ ಜೊತೆ ನಟಿಸಲು ಅವಕಾಶವಿರುವುದರಿಂದ ಇದಕ್ಕೆ ಒಪ್ಪಿಗೆ ಸೂಚಿಸಿದ್ದೇನೆಂದು ಕಲಾಂ ಹೇಳಿಕೆ ನೀಡಿದ್ದಾರೆ. ಈ ಚಿತ್ರದಲ್ಲಿ ಹಿಂದಿ ಖಳನಟ ಗುಲ್ಶನ್ ಗ್ರೋವರ್ ಮತ್ತು ಫ್ರೆಂಚ್ ನಟಿ ಸೋಫಿ ಬ್ರೋಸ್ಟೆಲ ಕೂಡಾ ನಟಿಸಲಿದ್ದಾರೆ. ರಾಜಸ್ಥಾನದ ಹುಡುಗನೊಬ್ಬ ಡಾ. ಕಲಾಂ ಅವರ ಆದರ್ಶದಿಂದ ಪ್ರಭಾವಿತನಾಗುವುದು, ಕಲಾಂರಂತೆ ಹಿರಿದಾದ ಕನಸು ಕೊಂಡು ಅದನ್ನು ಸಾಕಾರಗೊಳಿಸುವುದು ಚಿತ್ರದ ಕಥೆ.

ಆಸ್ಕರ್ ವಿಜೇತ ಚಿತ್ರ 'ಸ್ಲಮ್ ಡಾಗ್ ಮಿಲೇನಿಯರ್' ನಂತೆ ಇಲ್ಲಿ ಕೂಡಾ ರಾಜಸ್ತಾನದ ಸ್ಲಮ್ ಒಂದರ ಹುಡುಗನೊಬ್ಬ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾನೆ ಎಂದು ನಿರ್ದೇಶಕ ಪಾ೦ಡೆ ತಿಳಿಸಿದ್ದಾರೆ.ಈ ಚಿತ್ರವನ್ನು ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು. ನಂತರ ಪ್ರಪಂಚದೆಲ್ಲೆಡೆ ನಡೆವ ಚಿತ್ರೋತ್ಸವದಲ್ಲಿ ತೆರೆಕಾಣಲಿದೆ ಎಂದು ನಿರ್ದೇಶಕ ಪಾಂಡೆ ಹೇಳಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada