»   »  ಕುರ್ಬಾನ್ ಜಿಹಾದಿಯಾಗಿ ಓಂ ಪುರಿ

ಕುರ್ಬಾನ್ ಜಿಹಾದಿಯಾಗಿ ಓಂ ಪುರಿ

Subscribe to Filmibeat Kannada

ಸೈಫ್ ಆಲಿಖಾನ್, ಕರೀನಾ ಕಪೂರ್ ಒಟ್ಟಾಗಿ ಅಭಿನಯಿಸುತ್ತಿರುವ ಚಿತ್ರ "ಕುರ್ಬಾನ್". ಈ ಚಿತ್ರವನ್ನು ರೆನ್ಸಿಲ್ ಡಿಸಿಲ್ವಾ ನಿರ್ದೇಶಿಸುತ್ತಿದ್ದಾರೆ. ವಿವೇಕ್ ಒಬೆರಾಯ್ ಮುಖ್ಯಪಾತ್ರದಲ್ಲಿದ್ದಾರೆ. ಈ ಚಿತ್ರದಲ್ಲಿ ಖಳ ನಾಯಕನಾಗಿ ನಟಿಸಲು ಇರ್ಫಾನ್ ಖಾನ್ ಅವರನ್ನು ಕೇಳಿದರೆ ಅವರು ಆ ಪಾತ್ರ ಮಾಡಲು ಒಪ್ಪಲಿಲ್ಲವಂತೆ. ಆದರೆ ಈ ಪಾತ್ರವನ್ನು ತಾನು ಮಾಡುವುದಾಗಿ ಓಂ ಪುರಿ ಮುಂದೆ ಬಂದಿದ್ದಾರೆ!

ವಿಧ್ವಂಸಕತೆ ಸೃಷ್ಠಿಸುವ ಒಬ್ಬ ಉಗ್ರವಾದಿಯ ಪಾತ್ರ ಅದಾಗಿರುವ ಕಾರಣ ಈ ಪಾತ್ರವನ್ನು ತಾನು ಮಾಡುವುದಿಲ್ಲ ಎಂದು ಇರ್ಫಾನ್ ಖಾನ್ ಹೇಳಿದ್ದರು. ಆದರೆ ಉಗ್ರವಾದಿ ಪಾತ್ರವನ್ನು ತಾವು ಪೋಷಿಸುತ್ತೇನೆ ಎಂದು ಓಂ ಪುರಿ ಹೇಳಿದ್ದಾರೆ.

ಈ ಕುರಿತು ಓಂ ಪುರಿ ಮಾತನಾಡುತ್ತಾ, ಈ ಪಾತ್ರವನ್ನು ಪೋಷಿಸುವುದರಿಂದ ನನಗಾಗುವ ನಷ್ಟವೇನು ಇಲ್ಲ. ಇಂದಿನ ಪ್ರೇಕ್ಷಕರು ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ. ಈತ ಕೇವಲ ಪಾತ್ರಧಾರಿಯಷ್ಟೇ ಎಂಬುದು ಅವರಿಗೆ ಗೊತ್ತು. ಕಲಾವಿದ ಎಂದ ಮೇಲೆ ಎಲ್ಲ ಪಾತ್ರಗಳನ್ನು ಮಾಡಬೇಕು ಎನ್ನುತ್ತಾರೆ ಓಂ ಪುರಿ.

ತನ್ನ ಹೋರಾಟಕ್ಕಾಗಿ ಪತ್ನಿಯನ್ನೂ ತ್ಯಾಗ ಮಾಡಲು ಸಿದ್ಧಪಡುವ ಪಾತ್ರವನ್ನು ಪೋಷಿಸುತ್ತಿದ್ದೇನೆ. ಕೆಲವು ಸಂಸ್ಥೆಗಳು ಈ ಪಾತ್ರ ಮಾಡಬೇಡಿ ಎಂದು ದೂರವಾಣಿ ಮೂಲಕ ನನಗೆ ಬೆದರಿಕೆ ಒಡ್ಡಿದ್ದವು. ಆದರೆ ಅವರ ಬೆದರಿಕೆ, ಬಡಾಯಿಗೆಲ್ಲಾ ತಾವು ಹೆದರುವುದಿಲ್ಲ ಎಂದು ಓಂ ಪುರಿ ಪ್ರತಿಕ್ರಿಯಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada