»   »  ಬೆಂಗಳೂರಿನಲ್ಲಿ ಅರ್ಧ ಶತಕ ಬಾರಿಸಿದ ಅರುಂಧತಿ

ಬೆಂಗಳೂರಿನಲ್ಲಿ ಅರ್ಧ ಶತಕ ಬಾರಿಸಿದ ಅರುಂಧತಿ

Subscribe to Filmibeat Kannada
Arundhati film completes 50 days in Bengaluru
ಬೆಂಗಳೂರಿನಲ್ಲಿ ಯಾವುದೇ ಕನ್ನಡ ಚಿತ್ರ ಮಾಡದ ಸಾಧನೆಯನ್ನು ತೆಲುಗಿನ 'ಅರುಂಧತಿ' ಚಿತ್ರ ಮಾಡಿದೆ. ಅದೇನು ಅಂತಹ ಮಹಾನ್ ಸಾಧನೆ ಅಂತೀರಾ! ಬೆಂಗಳೂರಿನಲ್ಲಿ ಈ ಚಿತ್ರ ಅಮೋಘ 50 ದಿನಗಳನ್ನು ಪೂರೈಸಿದೆ. ಜನವರಿಯಿಂದ ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲಿ ಯಾವುದೇ ಕನ್ನಡಚಿತ್ರ ಅಂಥದೊಂದು ಸಾಧನೆ ದಾಖಲಿಸಿಲ್ಲ.

'ಜಂಗ್ಲಿ' ಮತ್ತು 'ಅಂಬಾರಿ' ಚಿತ್ರಗಳು ಹೇಗೊ ಕುಂಟುತ್ತಾ 50 ದಿನಗಳತ್ತ ಸಾಗುತ್ತಿವೆ. ಕನ್ನಡದಲ್ಲಿ ವಾರಕ್ಕೆ ಎರಡು, ಮೂರು ಚಿತ್ರಗಳು ಬಿಡುಗಡೆ ಕಾಣುತ್ತಿದ್ದರೂ ತೆಲುಗಿನ'ಅರುಂಧತಿ' ಜಪ್ಪಯ್ಯ ಎನ್ನದೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ ಅಷ್ಟು ದಿನ ಪ್ರದರ್ಶನ ಕಂಡಿರುವುದು ನಿಜಕ್ಕೂ ತೆಲುಗು ಚಿತ್ರರಂಗಕ್ಕೆ ಆಶ್ಚರ್ಯವನ್ನುಂಟು ಮಾಡಿದೆ.

ರು.13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಾಟ, ಮಂತ್ರದ ಈ ಚಿತ್ರ ರು.50 ಕೋಟಿಗು ಹೆಚ್ಚು ಹಣವನ್ನು ಸಂಪಾದಿಸಿದೆ. ತಮಿಳು ಮತ್ತು ಹಿಂದಿ ಭಾಷೆಗೂ ಡಬ್ ಆಗುತ್ತಿದೆ. ಅರುಂಧತಿಯ ಇವೆಲ್ಲಾ ಸಾಧನೆಗಳು ತೆಲುಗು ಚಿತ್ರರಂಗಕ್ಕೆ ದೊಡ್ಡ ವಿಷಯಗಳಲ್ಲ. ಆದರೆ ಕರ್ನಾಟಕದಲ್ಲಿ ಗೆಲ್ಲುತ್ತಿದೆಯಲ್ಲ ಅದು ಮಾಹಾನ್ ಸುದ್ದಿಯಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಲೋಕಸಭೆ ಚುನಾವಣೆಗೆ ತಾರೆಗಳ ಸಮರ
ಸ್ವಮೇಕ್ ಉಳಿಸಿ, ರೀಮೇಕ್ ಅಳಿಸಿ ಆಂದೋಲನ
ಸೀನ ಚಿತ್ರಕ್ಕಾಗಿ ರು.4 ಲಕ್ಷದ ದಾಖಲೆ ಭಿತ್ತಿಪತ್ರ
ಮಂಜಿನ ಹನಿಗಾಗಿ ರವಿಚಂದ್ರನ್ ಬೆವರಿನಹನಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada