»   » ದೇವಾನಂದ್ 'ಚಾರ್ಜ್ ಶೀಟ್'ನಲ್ಲಿ ದಾವೂದ್!

ದೇವಾನಂದ್ 'ಚಾರ್ಜ್ ಶೀಟ್'ನಲ್ಲಿ ದಾವೂದ್!

Posted By:
Subscribe to Filmibeat Kannada

ಬಾಲಿವುಡ್ ಹಿರಿಯ ನಟ ದೇವಾನಂದ್ ನಿರ್ಮಿಸುತ್ತಿರುವ ತಾಜಾ ಚಿತ್ರ 'ಚಾರ್ಜ್ ಶೀಟ್'. ನವಕೇತನ್ ಫಿಲಂಸ್ ಅರುವತ್ತನೇ ವಾರ್ಷಿಕೋತ್ಸವ ಪ್ರಯುಕ್ತ ದೇವಾನಂದ್ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಈ ಚಿತ್ರದ ಮೂಲಕ ನಾಲ್ಕು ಮಂದಿ ಹೊಸಬರು ಬಾಲಿವುಡ್ ಗೆ ಪರಿಚಯವಾಗುತ್ತಿದ್ದಾರೆ.

ಹೊಸಬರ ಜೊತೆ ದಿವ್ಯಾ ದತ್ತ, ಜಾಕಿಶ್ರಾಫ್, ದೇವಾನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿನ ಪ್ರಮುಖ ಪಾತ್ರವನ್ನು ಇಷ್ಟುದಿನ ಗೌಪ್ಯವಾಗಿಡಲಾಗಿತ್ತು. ಅದೇ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾತ್ರ.ದಾವೂದ್ ಇಬ್ರಾಹಿಂ ಪಾತ್ರವನ್ನು ಖ್ಯಾತ ನಟ ನಾಸಿರುದ್ದೀನ್ ಶಾ ಪೋಷಿಸುತ್ತಿದ್ದಾರೆ.

ನಾಸಿರುದ್ದೀನ್ ಶಾ ಯಾವುದೇ ವಿಧದಲ್ಲೂ ದಾವೂದ್ ಪಾತ್ರಕ್ಕೆ ಹೋಲಿಕೆಯಾಗದಿದ್ದರೂ ಅವನ ವಿಲಕ್ಷಣ ಸ್ವಭಾವವನ್ನು ತಮ್ಮ ನಟನೆಯ ಮೂಲಕ ತೋರಿಸಲಿದ್ದಾರಂತೆ. ಕತೆ ಒಂದು ಸಾವಿನ ಸುತ್ತ ಸುತ್ತುತ್ತಾ ಭೂಗತ ಪಾತಕಿಯವರೆಗೂ ಹೋಗುತ್ತದೆ. ನಿವೃತ್ತ ಸಿಬಿಐ ಅಧಿಕಾರಿಯಾಗಿ ದೇವಾನಂದ್ ಈ ಚಿತ್ರದಲ್ಲಿ ನಿರ್ಣಾಯಕ ಪಾತ್ರವನ್ನು ಪೋಷಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada