For Quick Alerts
  ALLOW NOTIFICATIONS  
  For Daily Alerts

  ನಾನು ಮ್ಯಾಚ್ ನೋಡಿದರೆ ಭಾರತ ಗೆಲ್ಲಲ್ಲ: ಅಭಿಷೇಕ್

  By Rajendra
  |

  ಇದನ್ನು ಮೂಢನಂಬಿಕೆ ಎನ್ನಬೇಕೋಅಥವಾ ಅವರವರ ಭಾವ, ಭಕುತಿ ಎನ್ನಬೇಕೋ ತಿಳಿಯುತ್ತಿಲ್ಲ. ಅಭಿಷೇಕ್ ಬಚ್ಚನ್ ಯಾವಾಗ ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ನೋಡುತ್ತಾರೋ ಅಂದು ಭಾರತ ಸೋಲುತ್ತಂತೆ. ಹಾಗಾಗಿ ಅವರು ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ನೋಡುವುದನ್ನೇ ಬಿಟ್ಟಿದ್ದಾರಂತೆ. ಹಾಗಂತ ಅವರೇ ಹೇಳಿದ್ದಾರೆ. ಹಾಗಿದ್ದರೆ ಸ್ಕೋರ್ ವಿವರ ಹೇಗೆ ತಿಳಿದುಕೊಳ್ಳುತ್ತಾರೆ. ಇಂಟರ್ನೆಟ್ ಅಥವಾ ಗೆಳೆಯರಿಗೆ ಫೋನ್ ಹಾಯಿಸಿ ತಿಳ್ಕೋತೀನಿ ಅಂತಾರೆ ಅವರು.

  ಏಪ್ರಿಲ್ 1ರಂದು ಬಿಡುಗಡೆಗೆ ಸಜ್ಜಾಗಿರುವ ತಮ್ಮ ಹೊಸ ಚಿತ್ರ 'ಗೇಮ್ 'ಪ್ರಚಾರಕ್ಕಾಗಿ ಇತ್ತೀಚೆಗೆ ಅಭಿಷೇಕ್ ಬೆಂಗಳೂರಿಗೆ ಬಂದಿದ್ದರು. ಕೋರಮಂಗಲದ ಫೋರಂನಲ್ಲಿ ತಮ್ಮ ಅಭಿಮಾನಿಗಳನ್ನು ಅಭಿಷೇಕ್ ಮುಖಾಮುಖಿಯಾಗಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳು ಅವರನ್ನು ಕ್ರಿಕೆಟ್ ಮ್ಯಾಚ್ ನೋಡುವ ಹುಚ್ಚು ನಿಮಗೂ ಇದೆಯೇ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.

  'ಗೇಮ್' ಚಿತ್ರದ ನಾಯಕಿಯರಾದ ಕಂಗನಾ ರನಾವತ್, ಸಾರಾ ಜೇನ್ ಕೂಡ ಉಪಸ್ಥಿತರಿದ್ದರು. ಗೇಮ್ ಚಿತ್ರದ ಬಗ್ಗೆ ಅಭಿಮಾನಿಗಳನ್ನು ಅವರು ಪ್ರಶ್ನೆಗಳನ್ನು ಕೇಳಿದರು. ಸರಿಯಾದ ಉತ್ತರ ಕೊಟ್ಟವರು ಮುಂಬೈನಲ್ಲಿ ನಡೆಯುವ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸುವ ಚಾನ್ಸ್ ಸಿಕ್ಕಲಿದೆ. ಅಭಿಷೇಕ್ ಕೇಳಿದ ಕೊನೆಯ ಪ್ರಶ್ನೆಗೆ ಸಚಿನ್ ಕಶ್ಯಪ್ ಸರಿಯಾದ ಉತ್ತರ ನೀಡಿ ಅಂತಿಮ ಸ್ಪರ್ಧೆಗೆ ಬೆಂಗಳೂರಿನಿಂದ ಆಯ್ಕೆಯಾಗಿದ್ದಾರೆ.

  English summary
  Recently bollywood star Abhishek Bachchan visitis Bangalore to promote their film Game. Abhishek said he would not watch the cricket matches live on television. "I am superstitious… whenever I watch the match live on television, India loses. I rely on the Internet and friends for the score" said the actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X