Just In
Don't Miss!
- Automobiles
ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ
- News
ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಭಿಷೇಕ್ ಜತೆ ನಟಿಸಲು ಐಶ್ವರ್ಯ ರೈ ಹಿಂದೇಟು
ತನ್ನ ಪತಿ ಅಭಿಷೇಕ್ ಬಚ್ಚನ್ ಜತೆ ಕಾಂಜಿಪಿಂಜಿ ಚಿತ್ರಗಳಲ್ಲಿ ನಟಿಸುವುದಕ್ಕಿಂತ ಸುಮ್ಮನಿರುವುದು ವಾಸಿ; ಹಾಗಂತ ತಾರೆ ಐಶ್ವರ್ಯ ರೈಗೆ ತಡವಾಗಿ ಜ್ಞಾನೋದಯವಾದಂತಿದೆ! ಕೆಲ ದಿನಗಳ ಮಟ್ಟಿಗೆ ತಾನು ಅಭಿ ಜತೆ ಯಾವುದೇ ಚಿತ್ರದಲ್ಲಿ ನಟಿಸಲ್ಲ ಎಂದು ಐಶು ಪ್ರಕಟಿಸಿದ್ದಾರೆ.
ಒಂದು ವೇಳೆ ನಟನೆಗೆ ಸವಾಲೊಡ್ಡುವ ಪಾತ್ರ ಸಿಕ್ಕರೆ ಆಗ ಮನಸು ಬದಲಾಯಿಸಿಕೊಳ್ಳುತ್ತೇನೆ. ಅಲ್ಲಿಯವರೆಗೂ ಅಭಿ ಜತೆ ಯಾವುದೇ ಚಿತ್ರದಲ್ಲಿ ನಟಿಸಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಐಶು ಅವರ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನಿರಬಹುದು?
ಐಶು ಹಾಗೂ ಅಭಿ ತಲೆಯಲ್ಲಿ ಇನ್ನೂ 'ರಾವಣ್' ಚಿತ್ರದ ಹೀನಾಯ ಸೋಲು ಕನಸಿನಲ್ಲೂ ಕಾಡುತ್ತಿದೆಯಂತೆ. ಹಾಗಾಗಿ ಐಶು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಹಾಗಾಗಿಯೇ 'ಖೇಲೆ ಹಮ್ ಜೀ ಜಾನ್ ಸೆ' ಹಾಗೂ 'ಗೇಮ್ 'ಚಿತ್ರಗಳಲ್ಲಿ ನಟಿಸಲು ಅವಕಾಶ ಬಂದಿದ್ದರು ನಿರಾಕರಿಸಿದ್ದರು.
ಐಶು ಏನೋ ಅಳೆದು ತೂಗಿ ಚಿತ್ರಗಳನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಅಭಿ ಮಾತ್ರ ಐಶು ನಿರ್ಧಾರಕ್ಕೆ ಕಿವಿಗೊಡದೆ ಬಂದ ಎಲ್ಲ ಆಫರ್‌ಗಳಿಗೆ ಕಣ್ಣುಮುಚ್ಚಿಕೊಂಡು ಸಹಿ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರ ನಿರ್ಧಾರಗಳು ನಾನೊಂದು ತೀರ ನೀನೊಂದು ತೀರ ಎಂಬಂತಿದೆ. [ರಾವಣ್]