»   » ಸಿಗರೇಟ್ ಹಿಡಿದು ತಾಳಿ ಕಟ್ಟಿಸಿಕೊಂಡ ಮನಿಶಾ

ಸಿಗರೇಟ್ ಹಿಡಿದು ತಾಳಿ ಕಟ್ಟಿಸಿಕೊಂಡ ಮನಿಶಾ

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಪ್ಯಾಕ್ ಗಟ್ಟಲೆ ಸಿಗರೇಟು ಸುಡುವ ಬಹಳಷ್ಟು ನಟರಿದ್ದಾರೆ. ಆದರೆ ಧೂಮಪಾನ ಮಾಡುವ ನಟಿಯರ ಸಂಖ್ಯೆ ಗೌಣ ಎಂತಲೇ ಹೇಳಬೇಕು. ನಟಿಯರು ಕದ್ದು ಮುಚ್ಚಿ ಹೊಗೆಯುಗುಳುವ ಕಾರಣ ಸಿಕ್ಕಿಬೀಳುವ ಅಪಾಯ ಕಡಿಮೆ. ಬಾಲಿವುಡ್ ನಟಿ ಮನಿಶಾ ಕೋಯಿರಾಲಾಗೆ ಅದೇನು ಧೈರ್ಯವೋ ಏನೋ ಮದುವೆ ಮಂಟಪದಲ್ಲೆ ಸಿಗರೇಟ್ ಹಚ್ಚಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.

ಮದುವೆ ಮಂಟಪದಲ್ಲಿ ಸಿಗರೇಟು ಕೈಯಲ್ಲಿ ಹಿಡಿದ ನಾರಿ ಮನಿಶಾಳ ಭಾವಚಿತ್ರಗಳು ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿವೆ. ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಿದ ಛಾಯಾಚಿತ್ರಗಳಲ್ಲಿ ಇವೂ ಸಹ ಇವೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮನಿಶಾ ಮದುವೆ ಮೂರು ದಿನಗಳ ಸುದೀರ್ಘ ಕಾಲ ನಡೆದಿತ್ತು. ಬಿಡುವಿಲ್ಲದಂತೆ ನಡೆದ ಮದುವೆ ಮನಿಶಾರ ತಲೆ ಚಿಟ್ಟುಹಿಡಿಸಿತ್ತು. ಬೇಸತ್ತ ಆಕೆ ಮದುವೆ ಮಂಟಪದಲ್ಲೇ ಸಿಗರೇಟ್ ಹಚ್ಚಿದ್ದಾಳೆ.

ಅಷ್ಟೆ ಕ್ಯಾಮೆರಾ ಕಣ್ಣುಗಳು ಫಳಗುಟ್ಟಿವೆ. ಛಾಯಾಚಿತ್ರಗಳು ಅಂತರ್ಜಾಲಕ್ಕೆ ನುಗ್ಗಿವೆ. ಅಂದಹಾಗೆ ಮದುವೆ ಮನೆಯಲ್ಲಿ ಹೇಳಿಕೊಳ್ಳುವಂತಹ ಜನ ಏನು ಇರಲಿಲ್ಲವಂತೆ. ಕೇವಲ ಬೆರಳೆಣಿಕೆಯಷ್ಟು ಬಾಲಿವುಡ್ ನಟರು ಆಗಮಿಸಿದ್ದರು. ಎಲ್ಲ ನಮ್ಮವರೇ ಎಂದು ತಿಳಿದ ಮನಿಶಾ ಮೆಲ್ಲನೆ ಸಿಗರೇಟು ತೆಗೆದು ಕಡ್ಡಿ ಗೀಚಿದ್ದಾರೆ. ಆಗಾಗ ಒಂದೊಂದು ಧಂ ಎಳೆದಿದ್ದಾರೆ ಅಷ್ಟೆ.

ಇನ್ನು ಮುಂದೆಯೂ ಚಿತ್ರರಂಗದಲ್ಲಿ ಮುಂದುವರೆಯುವುದಾಗಿ ಆಕೆ ತಿಳಿಸಿದ್ದಾರೆ. ಹೆಚ್ಚಾಗಿ ನೇಪಾಳಿ ಚಿತ್ರಗಳಲ್ಲಿ ನಟಿಸುತ್ತೇನೆ ಎಂದು ಹೇಳಿರುವ ಮನಿಶಾಗೆ ಧೂಮಪಾನ ಬಿಟ್ಟು ಬದುಕುವುದು ದೂರದ ಮಾತಂತೆ. ಹಾಗಾಗಿ ಮದುವೆ ಮಂಟಪದಲ್ಲೂ ಕಡ್ಡಿ ಗೀಚಿ ಸಿಗರೇಟ್ ಹಚ್ಚಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada