For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ನಲ್ಲಿ ನಗ್ನ ಚಿತ್ರ ತೇಲಿ ಬಿಟ್ಟ ಶೆರ್ಲಿನ್ ಚೋಪ್ರ

  By Rajendra
  |

  ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ನಟಿ ಶೆರ್ಲಿನ್ ಚೋಪ್ರಾ ತನ್ನದೇ ನಗ್ನ ಚಿತ್ರವೊಂದನ್ನು ತೇಲಿ ಬಿಟ್ಟಿದ್ದಾರೆ. ಹೀಗೆ ತೇಲಿಬಿಟ್ಟಿದ್ದೇ ತಡ ಟ್ವಿಟ್ಟರ್ ನಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಈ ನಗ್ನ ಚಿತ್ರವನ್ನು ಶೆರ್ಲಿನ್ ರ ಗೆಳೆಯ ವಿಶಾಲ್ ಸಕ್ಸೇನಾ ಎಂಬುವವರು ಕ್ಲಿಕ್ಕಿಸಿದ್ದಾರೆ.

  ಸಕ್ಸೇನಾ ಒಬ್ಬ ಹವ್ಯಾಸಿ ಫ್ಯಾಷನ್ ಫೋಟೋಗ್ರಾಫರ್. ಶೆರ್ಲಿನ್ ರ ವೈವಿಧ್ಯಮಯ ಫೋಟೋಗಳನ್ನು ಕ್ಲಿಕ್ಕಿಸಿದ ಘನತೆ ಈತನದು. ಮೈಮೇಲೆ ಒಂಚೂರು ಬಟ್ಟೆ ಇಲ್ಲದೆ ಶೆರ್ಲಿನ್ ರ ಚಿತ್ರವೊಂದನ್ನು ಈತ ತನ್ನ ಕ್ಯಾಮೆರಾದಲ್ಲಿ ಬಂಧಿಸಿದ್ದ. ಇದೀಗ ಟ್ವಿಟ್ಟರ್ ನಲ್ಲಿ ಶೆರ್ಲಿನ್ ತೇಲಿಬಿಟ್ಟಿರುವ ಚಿತ್ರ ಸಹ ಅದೇ ಎನ್ನಲಾಗಿದೆ.

  ಇಷ್ಟಕ್ಕೂ ಈ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಾಕುವ ಜರೂರತ್ತಾದರೂ ಏನಿತ್ತು? ಎಂದು ಶೆರ್ಲಿನ್ ರನ್ನು ಕೇಳಲಾಗಿ, ನನ್ನ ಸಂಗ್ರಹದಲ್ಲಿದ್ದ ಈ ಚಿತ್ರವನ್ನು ಗೆಳೆಯರು ಹಾಗೂ ಟ್ವಿಟ್ಟರ್ ಅಭಿಮಾನಿಗಳ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು ಹಾಗಾಗಿ ಈ ಚಿತ್ರವನ್ನು ಅಲ್ಲಿ ಹಾಕಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

  ಚಿತ್ರಕ್ಕೆ ಪ್ರತಿಕ್ರಿಯೆ ಜೋರಾಗಿದೆ. ಪರ ವಿರೋಧವಾಗಿ ಗಂಭೀರ ಚರ್ಚೆ ನಡೆಯುತ್ತಿದೆ. ಒಟ್ಟಾರೆ ಕಾಮೆಂಟಿಗರ ಬಗ್ಗೆ ಶೆರ್ಲಿನ್ ಹೇಳುವುದೇನೆಂದರೆ, ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಅದ್ಭುತವಾಗಿದೆ. ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಅಸಭ್ಯ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಹಾಕುವ ಅಗತ್ಯವೇನಿತ್ತು ಎಂದು ಕೆಲವರು ಪ್ರಶ್ನಿಸಿದ್ದಾರೆ ಎಂದಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X